ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಜವಾಹರ್ ಲಾಲ್ ನವೋದಯ ವಿದ್ಯಾಲಯ ರಾಜ್ಯಕ್ಕೆ ಪ್ರಥಮ–ಆರ್. ಚಕ್ರವರ್ತಿ

ದೊಡ್ಡಬಳ್ಳಾಪುರ:ಜವಾಹರ್ ಲಾಲ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸ್ವಯಂ ಸೇವಾ ಸಂಸ್ಥೆ ಹಾಗು ಕೇಂದ್ರ ಸರ್ಕಾರ ಸಹಯೋಗದೊಂದಿಗೆ ನೀಡಿದ ಉಚ್ಚಿತ ಜೆಇಇ ತರಬೇತಿ ಯಿಂದಾಗಿ ಈ ಸಾಲಿನಲ್ಲಿ ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಶೇ : 90 ರಷ್ಟು ಉತ್ತೀರ್ಣರಾಗಿ ಸರ್ಕಾರಿ ವಿದ್ಯಾಲಯದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜವಾಹರ್ ಲಾಲ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್ ಚಕ್ರವರ್ತಿ ತಿಳಿಸಿದರು.

ನಗರದ ಹೊರವಲಯದ ಜವಾಹರ್ ಲಾಲ್ ನವೋದಯ ವಿದ್ಯಾಲಯದ ಆಯೋಜನೆ ಮಾಡಲಾದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರವು ಐಐಟಿ ತರಬೇತಿಯ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಆಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದಲ್ಲಿ ಹೈದರಾಬಾದ್ ವಲಯದಿಂದ 40 ಮಂದಿ ಅಯ್ಕೆ ಮಾಡಿಕೊಂಡು ವಿದ್ಯಾರ್ಥಿನಿಯರಿಗೆ ದಕ್ಷಿಣ ಫೌಂಡೇಷನ್ ಮತ್ತು ಎಸ್ ಎಲ್ ಆರ್ ಅಕಾಡೆಮಿ ವತಿಯಿಂದ ಉತ್ತಮ ಗುಣಮಟ್ಟದ ಹಾಗು ಉಚಿತ ತರಬೇತಿ ನೀಡಲಾಗಿತ್ತು. 40. ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ 36 ಮಂದಿ ಜೆಇಇ ಗೆ ಮುಂಗಡವಾಗಿ ಅರ್ಹತೆ ಪಡೆದಿದ್ದಾರೆ ಮುಂದಿನ ದಿನಗಳಲ್ಲಿ 100 ರಷ್ಠು ಫಲಿತಾಂಶಕ್ಕೆ ಪ್ರಯತ್ನಿಸಲಾಗುವುದು ಜವಾಹರ್ ಲಾಲ್ ನವೋದಯ ವಿದ್ಯಾಲಯದಲ್ಲಿ ಬಡ ಹಾಗು ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಾಗಿದ್ದು ಅವರು ಐಐಟಿಯಲ್ಲಿ ಉತ್ತೀರ್ಣರಾಗುವ ಕನಸು ಸಹಕಾರ ಗೊಳ್ಳಲಿದೆ ಎಂದರು.

ನಂತರ ಎಸ್ ಎಲ್ ಆರ್ ಪಟ್ಟಾಭಿ ರಡ್ಡಿ ಎಸ್ಎಲ್ಆರ್ ಅಕಾಡಮಿ ಇದೆ ಮೊದಲ ಬಾರಿಗೆ ಜವಾಹರ್ ಲಾಲ್ ನವೋದಯ ವಿದ್ಯಾಲಯದ 12 ನೇ ತರಗತಿಗೆ ವಿದ್ಯಾರ್ಥಿಗಳಿಗೆ ತರಬೇತಿ ಕೂಡಿಸಿ ಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಾದ ಸೋದಿಕಾ ಹಾಗು ಜೀವಿತಾ ಇಬ್ಬರು ವಿದ್ಯಾರ್ಥಿನೀಯರು ಮಾತನಾಡಿ ಇದೆ ಮೊದಲ ಬಾರಿಗೆ ಎಸ್ಎಲ್ಆರ್ ಜೋತೆ ಗೊಡಿ ನಮಗೆ ಉತ್ತಮ ತರಬೇತಿ ನೀಡಿದ್ದಾರೆ ಜವಾಹರ್ ಲಾಲ್ ನವೋದಯ ವಿದ್ಯಾಲಯದಲ್ಲಿ ಪ್ರಾಂಶುಪಾಲರು ಹಾಗು ಪ್ರಾದ್ಯಾಪಕರು ಅವರು ನೀಡಿದ ಮಾರ್ಗದರ್ಶನ ನಮಗೆ ಸಂತಸ ತಂದಿದೆ ನಮ್ಮ ಗುರಿ ಐಐಟಿ ಯಾಗಿದ್ದು ತಾಂತ್ರಿಕ ಶಿಕ್ಷಣದಲ್ಲಿ ನಾವು ಯಾವುದಾದರು ಗುರಿ ಮುಟ್ಟುವ ವಿಶ್ವಾಸವಿದೆ ಎಂದರು.
ದಕ್ಷಿಣಾ ಪೌಂಡೇಶನ್ ನ ಸಂಯೋಜಕಿ ಸುನಿಷ್ಟಾ ಜವಾಹರ್ ಲಾಲ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಜಯಕೃಷ್ಣ ಪ್ರಾಧ್ಯಾಪಕರಾದ ಜಿ.ಪ್ರಿಯದರ್ಶಿನಿ ಶಿವಂ ಹಾಜರಿದ್ದರು