--ಜಾಹೀರಾತು--

ಕೆ.ಆರ್.ಪೇಟೆಯ ಭೂವರಹನಾಥ ಶ್ರೀ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಟಿ, ನಾಡಿನ ಒಳಿತಿಗಾಗಿ ಹೋಮ ಹವನ, ವಿಶೇಷ ಪೂಜೆ ಸಲ್ಲಿಕೆ*

On: November 29, 2025 10:05 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಕೆ.ಆರ್.ಪೇಟೆಯ ಭೂವರಹನಾಥ ಶ್ರೀ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಟಿ, ನಾಡಿನ ಒಳಿತಿಗಾಗಿ ಹೋಮ ಹವನ, ವಿಶೇಷ ಪೂಜೆ ಸಲ್ಲಿಕೆ*

ಕೆ.ಆರ್ ಪೇಟೆ:*ಕೆ.ಆರ್.ಪೇಟೆಯ ಭೂವರಹನಾಥ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಟಿ, ನಾಡಿನ ಒಳಿತಿಗಾಗಿ ಹೋಮ ಹವನ, ವಿಶೇಷ ಪೂಜೆ ಸಲ್ಲಿಕೆ*

ಕೆ.ಆರ್.ಪೇಟೆ,ನ.29: ಕಳೆದ ಎರಡು ವರ್ಷಗಳಿಂದ ಕೆ.ಆರ್.ಪೇಟೆ ತಾಲ್ಲೂಕಿನ ವರಹನಾಥಕಲ್ಲಹಳ್ಳಿಯ ಭೂದೇವಿ ಸಮೇತನಾಗಿ ವಿರಾಜಮಾನನಾಗಿರುವ ಶ್ರೀ ಭೂವರಹನಾಥಸ್ವಾಮಿ ಕ್ಷೇತ್ರಕ್ಕೆ ಬೇಟಿ ನೀಡಬೇಕು ಅಂದುಕೊಂಡಿದ್ದೆ ಅದರಂತೆ ಇಂದು ಕ್ಷೇತ್ರಕ್ಕೆ ಬೇಟಿ ನೀಡಿ ಬಹುದಿನಗಳ ನನ್ನ ಮನದಾಳದ ಸಣ್ಣ ಕೋರಿಕೆಯನ್ನು ದೇವರಲ್ಲಿ ನಿವೇಧಿಸಿಕೊಂಡಿದ್ದೇನೆ. ಜೊತೆಗೆ ಪ್ರಮುಖವಾಗಿ ರಾಜ್ಯದ ಸಮಸ್ತ ಜನತೆಗೆ ಒಳಿತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ. ಕ್ಷೇತ್ರದ ಮಹಿಮೆಯನ್ನು ತಿಳಿದು ನನ್ನ ಮನಸ್ಸು ತುಂಬಿ ಬಂದಿದೆ. ಇಲ್ಲಿ ಎಲ್ಲಾ ಧರ್ಮದ ಜನರು ಬಂದು ಪೂಜೆ ಮತ್ತು ಕೋರಿಕೆ ಸಲ್ಲಿಸುತ್ತಿರುವುದು ಶ್ರೀ ಕ್ಷೇತ್ರದ ಹಿರಿಮೆಯನ್ನು ತೋರಿಸುತ್ತದೆ ಎಂದು ರಾಜ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವರಹನಾಥಕಲ್ಲಹಳ್ಳಿಯ ಬಳಿ ಇರುವ ಭೂದೇವಿ ಸಮೇತ ಶ್ರೀ ಭೂವರಹನಾಥಸ್ವಾಮಿ ಕ್ಷೇತ್ರಕ್ಕೆ ಬೇಟಿ ನೀಡಿ ಹೋಮ-ಹವನ, ದೇವರಿಗೆ ಪಂಚಮೃತ ಅಭಿಷೇಕ, ಕಶಲಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಭಿಷೇಕ ಸಲ್ಲಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಕ್ಷೇತ್ರದ ಮಹಿಮೆಯ ಬಗ್ಗೆ ಕ್ಷೇತ್ರದ ಮುಖ್ಯಸ್ಥರಾದ ಶ್ರೀನಿವಾಸ ರಾಘವನ್ ಅವರಿಂದ ತಿಳಿದುಕೊಂಡರು. ಕ್ಷೇತ್ರದಲ್ಲಿ ನಡೆಯುತ್ತಿರುವ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಹಿಂದೂ-ಮುಸ್ಲಿಂ ಧರ್ಮದ ಬಂಧುಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಯಾವುದೇ ಜಾತಿ ಬೇದಿ, ಧರ್ಮ ಬೇದ ವಿಲ್ಲದೇ ಎಲ್ಲರಿಗೂ ಸಮಾನವಾಗಿ ದೇವರ ದರ್ಶನ ಸಿಗುತ್ತಿರುವುದು ಕ್ಷೇತ್ರದ ಕೀರ್ತಿಯನ್ನು ಮುಗೆಲೆತ್ತರಕ್ಕೆ ಏರಿದೆ ಎಂದರು. ತಿರುಪತಿಯ ತಿರುಮಲ ಮಾದರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತಿರುವ ಮಾಹಿತಿ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ಕಳೆದ ಎರಡು ವರ್ಷಗಳಿಂದಲೂ ವಿರೋಧ ಪಕ್ಷದ ಸ್ನೇಹಿತರೊಬ್ಬರು ಭೂವರಹನಾಥ ಕ್ಷೇತ್ರಕ್ಕೆ ಬೇಟಿ ನೀಡಿದರೆ ನಿಮ್ಮ ಕೋರಿಕೆಗಳು ಜರೂರಾಗಿ ಈಡೇರುತ್ತವೆ ಎಂದು ಹೇಳಿದ್ದರು ಅದರಂತೆ ರಾಜ್ಯದ 7ಕೋಟಿ ಜನತೆಗೆ ಒಳಿತಾಗಲಿ ಎಂದು ವಿಶೇಷ ಪೊಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಿಎಂ ಸ್ಥಾನ ಸಿಗಲಿ ಎಂದು ಹೋಮ-ಹವನ ಮಾಡಿಸಲಾಗಿದೆಯೇ ಎಂದು ಪತ್ರಕರ್ತರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು ಈ ವಿಚಾರ ನನಗೆ ತಿಳಿದಿಲ್ಲ. ಇಲ್ಲಿನ ಪ್ರಧಾನ ಅರ್ಚಕರಿಗೆ ಬರುವ ಮುಂಚೆ ಏನಾದರೂ ತರಬೇಕೇ ಎಂದು ಕೇಳಿದೆ. ಆದರೆ ಅರ್ಚಕರು ಏನೂ ಬೇಡ ಬಂದು ದೇವರ ದರ್ಶನ ಮಾಡಿಕೊಂಡು ಹೋಗಿ ಎಲ್ಲಾ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಅದರಂತೆ ಹೋಮ ಮತ್ತು ವಿಶೇಷ ಪೂಜೆಯಲ್ಲಿ ಭಾಗವಹಿಸಿ ನಾಡಿನ ಸಮಸ್ತ ಜನರ ಒಳಿತಿಗಾಗಿ ಭೂವರಹನಾಥಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಾನು ತಿಹಾರ್ ಜೈಲಲ್ಲಿದ್ದಾಗ ನಮ್ಮ ಅತ್ತೆ, ಮಾವ ಈ ಭೂವರಹನಾಥ ಕ್ಷೇತ್ರಕ್ಕೆ 4 ಬಾರಿ ಬಂದು ನನ್ನ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ದರು.ಅದರಂತೆ ನನ್ನ ಬಿಡುಗಡೆಯೂ ಆಯಿತು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ.ಸ್ಥಾನ ಸಿಗುವ ಆಶಯವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದರು.
ಹೆಜ್ಜೇನು ದಾಳಿ: ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮನಕ್ಕೂ ಮುನ್ನ ನವಗ್ರಹ ಹೋಮವು ಶ್ರೀ ಭೂವರಹನಾಥ ದೇಗುಲದಲ್ಲಿ ನಡೆಯುತ್ತಿತ್ತು. ಭೂವರಹನಾಥ ಸ್ವಾಮಿ ದೇಗುಲಕ್ಕೆ ಆಗಮಿಸುತ್ತಿರುವ ಡಿಕೆಶಿ ಆಗಮನಕ್ಕೂ ಮುನ್ನವೇ ಹೆಜ್ಜೇನು ದಾಳಿ. ದೇಗುಲದಲ್ಲಿ ಶನಿವಾರ ವಿಶೇಷವಾಗಿ ನಡೆಯುವ ಹೋಮ-ಹವನ. ಹೋಮದ ಹೊಗೆಯಿಂದ ಹೆಜ್ಜೇನು ಹಿಂಡು ಕೆರಳಿ, ಹಲವರ ಮೇಲೆ ದಾಳಿ ನಡೆಸಿದವು. ಹೆಜ್ಜೇನು ದಾಳಿಯಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾದವು ಆದರೂ ಯಾವುದೇ ತೊಂದರೆಯಾಗಲಿಲ್ಲ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಕೆ.ಯು.ಐಡಿ.ಎಫ್.ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಡಿ.ಪ್ರೇಮಕುಮಾರ್, ಬೂಕನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಎಸ್.ಮಹೇಶ್ ಅಡಿಕೆ ಸ್ವಾಮೀಗೌಡ, ತಾಲ್ಲೂಕು ಕೆಡಿಪಿ ಸದಸ್ಯರಾದ ಆಕಾಶ್, ಬೂಕನಕೆರೆ ಮಲ್ಲಿಕಾರ್ಜುನ್, ಪುರಸಭಾ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಬಿ.ರವಿಕುಮಾರ್, ಆಯಾಜ್ ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:29.ಕೆ.ಆರ್.ಪಿ-01: ಕೆ.ಆರ್.ಪೇಟೆ: ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವರಹನಾಥಕಲ್ಲಹಳ್ಳಿಯ ಬಳಿ ಇರುವ ಭೂದೇವಿ ಸಮೇತ ಶ್ರೀ ಭೂವರಹನಾಥಸ್ವಾಮಿ ಕ್ಷೇತ್ರಕ್ಕೆ ಬೇಟಿ ನೀಡಿ ಹೋಮ-ಹವನ, ದೇವರಿಗೆ ಪಂಚಮೃತ ಅಭಿಷೇಕ, ಕಶಲಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಭಿಷೇಕ ಸಲ್ಲಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.