--ಜಾಹೀರಾತು--

ಗೌರಿಬಿದನೂರಿನಲ್ಲಿ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ

On: November 30, 2025 7:25 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಗೌರಿಬಿದನೂರಿನಲ್ಲಿ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ ಚಾಲನೆ*

ಗೌರಿಬಿದನೂರು:ಗೌರಿಬಿದನೂರಿನ ಡಾ. ಹೆಚ್.ಎನ್. ಕಲಾಭವನದಲ್ಲಿ ಕರ್ನಾಟಕ ಮಾದರ ಮಹಾಸಭಾ (ರಿ.)ಯ ತಾಲ್ಲೂಕು ಘಟಕದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ರವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಮುದಾಯ ಸಂಘಟನೆಯ ಬಲವರ್ಧನೆಗೆ ಸದಸ್ಯತ್ವ ನೋಂದಣಿ ಅಭಿಯಾನ ಅತ್ಯಂತ ಮಹತ್ವದ್ದು. ಯುವಕರ ಸಬಲೀಕರಣ, ಸಮುದಾಯದ ಏಕತೆ ಮತ್ತು ಸಂಘಟಿತ ಶಕ್ತಿಯನ್ನು ವಿಸ್ತರಿಸುವಲ್ಲಿ ಮಹಾಸಭಾ ಕೈಗೊಂಡಿರುವ ಪ್ರಯತ್ನಗಳು ಶ್ಲಾಘನೀಯ, ಎಂದರು.

ತಾಲೂಕು ಘಟಕದ ಸಂಘಟನಾ ವಿಸ್ತರಣೆ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ಅವರು, ಪ್ರತಿ ಸದಸ್ಯನೂ ಸಮುದಾಯದ ಬದಲಾವಣೆಗೆ ಈ ನೋಂದಣಿ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಎಂದರು
ಈ ಸಂಘವು ಮಾದಿಗರ ಸರ್ವತೋಮುಖ ಬೆಳವಣಿಗೆಗೆ ಹಾಗೂ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದ್ದು ಸಮುದಾಯದವರು ನೋಂದಣಿ ಕಾರ್ಯದಲ್ಲಿ ಭಾಗವಹಿಸಿ ಸೂಕ್ತ ಸಮಯಕ್ಕೆ ನೊಂದಣಿ ಮಾಡಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಆನಂದ ಮುನಿಸ್ವಾಮೀಜಿ,ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ,ಮಾತಾಂಗ ಪೌಂಡೇಷನ್ ನ ಅಧ್ಯಕ್ಷರಾದ ಲೋಕೇಶ್,ಶ್ರೀನಿವಾಸ್ಎಸ್.ಎಲ್.ಎನ್ , ಮಾದರ ಮಹಾಸಭಾದ ಸಂಘಟಕರಾದ ಶಿವಪ್ಪ,ಹಾಗೂ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಹಿಳಾ ಮತ್ತು ಯುವ ಘಟಕದ ಸದಸ್ಯರು, ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.