--ಜಾಹೀರಾತು--

*ಗಂಗಾ ಕಲ್ಯಾಣ ಯೋಜನೆ ಅಡಿ ದಲಿತ ಬಂಧುಗಳಿಗೆ ಸಾಲನ ಸಲಕರಣೆಗಳ ವಿತರಣೆ ಮಾಡಿದ ಶಾಸಕ ಹೆಚ್.ಟಿ.ಮಂಜು*

On: December 1, 2025 8:50 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಗಂಗಾ ಕಲ್ಯಾಣ ಯೋಜನೆ ಅಡಿ ದಲಿತ ಬಂಧುಗಳಿಗೆ ಸಾಲನ ಸಲಕರಣೆಗಳ ವಿತರಣೆ ಮಾಡಿದ ಶಾಸಕ ಹೆಚ್.ಟಿ.ಮಂಜು*

ಕೆ.ಆರ್.ಪೇಟೆ,ಡಿ.01: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ತಾಲ್ಲೂಕಿನ 16ಮಂದಿ ದಲಿತ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗೆ ಅಳವಡಿಸುವ ಸಬ್‌ಮರ್ಸಿಬಲ್ ಮೋಟಾರ್ ಪಂಪ್, ಮತ್ತಿತರ ಸಾಧನ-ಸಲಕರಣೆಗಳನ್ನು ಶಾಸಕರಾದ ಹೆಚ್.ಟಿ.ಮಂಜು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಶಾಸಕರಾದ ಹೆಚ್.ಟಿ.ಮಂಜು ಅವರು ದಲಿತ ಬಂಧುಗಳ ಸರ್ಕಾರವು ತಮಗೆ ನೀಡುವ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರವು ಎಸ್.ಸಿ.ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕಾದ ಸಾವಿರಾರು ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಇದರಿಂದ ದಲಿತ ಬಂಧುಗಳಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಆದರೂ ಕೊಡುವಂತಹ ಸಣ್ಣ ಪುಟ್ಟ ಅನುಧಾನವನ್ನು ಅರ್ಹರಿಗೆ ಹಾಗೂ ಅಗತ್ಯ ಇರುವ ಗ್ರಾಮಗಳ ದಲಿತ ಬಂಧುಗಳು ವಾಸಿಸುವ ಬಡಾವಣೆಗಳಿಗೆ ಯಾವುದೇ ತಾರತಮ್ಯ ಮಾಡದೇ ಅನುಧಾನವನ್ನು ಹಂಚಿಕೆ ಮಾಡುತ್ತಿದ್ದೇನೆ. ಮುಂದೆ 2028ಕ್ಕೆ ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬರುವುದು ಖಚಿತ. ಆಗ ತಾವು ನನಗೆ ಮತ್ತೊಮ್ಮೆ ಶಾಸಕನಾಗಿ ತಮ್ಮಗಳ ಸೇವೆ ಮಾಡುವ ಅವಕಾಶ ನೀಡಿದರೆ ದಲಿತ ಬಂಧುಗಳು ಸೇರಿದಂತೆ ತಾಲ್ಲೂಕಿನ ಎಲ್ಲಾ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಅನುಧಾನ ತಂದು ಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ದಲಿತ ಬಂಧುಗಳು ತಮಗೆ ಮೀಸಲಿಟ್ಟ ಸುಮಾರು 11ಸಾವಿರ ಕೋಟಿಗೂ ಹೆಚ್ಚು ಅನುಧಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದರೂ ಸಹ ಯಾವುದೇ ಪ್ರತಿಭಟನೆ ನಡೆಸದೇ ಇರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿಯಾದರೂ ಯಾವುದೇ ಸರ್ಕಾರವು ಸಂವಿಧಾನ ಬದ್ದವಾಗಿ ಮೀಸಲಾಗಿಟ್ಟ ಅನುಧಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಹೋರಾಟ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕರು ದಲಿತ ಬಂಧುಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲೇನಹಳ್ಳಿ ಎಂ.ಮೋಹನ್, ನಾಗರಘಟ್ಟ ದಿಲೀಪ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಾಚಗೋನಹಳ್ಳಿ ಯೋಗಣ್ಣ, ಮಲ್ಲೇನಹಳ್ಳಿ ಮಲ್ಲೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ದಲಿತ ಮುಖಂಡರು, ಫಲಾನುಭವಿಗಳು ಉಪಸ್ಥಿತರಿದ್ದರು.


ಚಿತ್ರಶೀರ್ಷಿಕೆ:01.ಕೆ.ಆರ್.ಪಿ-02:ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ತಾಲ್ಲೂಕಿನ 16ಮಂದಿ ದಲಿತ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೊಳವೆ ಬಾವಿಗೆ ಅಳವಡಿಸುವ ಸಬ್‌ಮರ್ಸಿಬಲ್ ಮೋಟಾರ್ ಪಂಪ್, ಮತ್ತಿತರ ಸಾಧನ-ಸಲಕರಣೆಗಳನ್ನು ಶಾಸಕರಾದ ಹೆಚ್.ಟಿ.ಮಂಜು ವಿತರಣೆ ಮಾಡಿದರು.