ಅಣ್ಣೇಚಾಕನಹಳ್ಳಿ ಇಸಿಸಿಎ ದಿನಾಚರಣೆ: ಮಕ್ಕಳು, ಕಿಶೋರಿಯ ಆರೈಕೆ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ಶಾಂತವ್ವ.ಎಸ್.ಹಾವಣ್ಣನವರ್ ತರಬೇತಿ
ಕೆ ಆರ್ ಪೇಟೆ,ಡಿ.13::ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿಯ ಅಣ್ಣೇಚಾಕನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಇಂದು ಇಸಿಸಿಇ ದಿನವನ್ನು ಆಚರಿಸಲಾಯಿತು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ ಮಾತನಾಡಿ ಅಂಗನವಾಡಿಗಳನ್ನು ಗುಣಮಟ್ಟದ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ತರಲು ಪರಿವರ್ತಿಸಲಾಗಿದ್ದು.ಮಕ್ಕಳಜಾಗೃತಿ
ಪ್ರತಿಯೊಂದು ಮಗುವೂ ನ್ಯಾಯಯುತ ಆರಂಭಕ್ಕೆ ಅರ್ಹವಾಗಿದೆ.ಸಂಶೋಧನೆಯ ಪ್ರಕಾರ,ಮಗುವಿನ ಮೆದುಳಿನ ಬೆಳವಣಿಗೆಯ ಬಹುಪಾಲು ಮೊದಲ 6 ವರ್ಷಗಳಲ್ಲಿ ಸಂಭವಿಸುತ್ತದೆ ಮತ್ತು ಭವಿಷ್ಯದ ಕಲಿಕೆ,ಆರೋಗ್ಯ ಮತ್ತು ಜೀವನದ ಯಶಸ್ಸಿಗೆ ಅಡಿಪಾಯವನ್ನು ನಿರ್ಮಿಸಬಹುದಾಗಿದ್ದು ಗುಣಮಟ್ಟದ ಪ್ರಿಸ್ಕೂಲ್ ಶಿಕ್ಷಣ ಮತ್ತು ಹೆಚ್ಚಿನ ಆದಾಯ ಮತ್ತು ಕಡಿಮೆ ನಿರುದ್ಯೋಗ ದರಗಳ ನಡುವೆ ಬಲವಾದ ಪರಸ್ಪರ ಸಂಬಂಧಗಳಾಗಿದ್ದು ಇಸಿಸಿಇ
ಕಾರ್ಯಕ್ರಮವು ಮಕ್ಕಳಲ್ಲಿ ಸಮಾನತೆಯನ್ನು ಉತ್ತೇಜಿಸುತ್ತದೆ,ಮಕ್ಕಳು ಚಿಂತನಶೀಲ,ಸೃಜನಶೀಲ, ಸಹಾನುಭೂತಿ ಮತ್ತು ಉತ್ಪಾದಕ ಮಾನವರಾಗಿ ಬೆಳೆಯಲು ಉತ್ತಮ ಅವಕಾಶವನ್ನು ನೀಡುತ್ತದೆ,ಮಕ್ಕಳಲ್ಲಿ ಬಾಲ್ಯದ ಆರೈಕೆ ಮತ್ತು ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಪ್ರಾಥಮಿಕ ಸಂಸ್ಥೆಗಳಾಗಿವೆ.ಸರ್ಕಾರವು ಐಸಿಡಿಎಸ್ ಅಡಿಯಲ್ಲಿ ಅಂಗನವಾಡಿಗಳ ಮೂಲಕ ಈ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತಿದ್ದರೂ, ಆರಂಭಿಕ ಶಿಕ್ಷಣ ಘಟಕಕ್ಕೆ ಹೆಚ್ಚಿನ ಗಮನ ಬೇಕು. ಅಸಮಾನತೆಗಳ ನಡುವೆ ಇಸಿಸಿಇ ಉತ್ತಮ ಸಮೀಕರಣವಾಗಿದ್ದು, ಅಂಗನವಾಡಿಗಳಲ್ಲಿನ ಆರಂಭಿಕ ಕಲಿಕೆಯ ಘಟಕವು ಅಂಗನವಾಡಿ ಶಿಕ್ಷಕರ ಸಾಮರ್ಥ್ಯ ವೃದ್ಧಿಯ ಮೂಲಕ ಬಲಪಡಿಸುವ ಅಗತ್ಯವಿದೆ, ಇದು ವಯಸ್ಸಿಗೆ ಸೂಕ್ತವಾದ ಪೂರ್ವ ಶಾಲಾ ಕಲಿಕೆಯನ್ನು ನೀಡುತ್ತದೆ, ಮಗುವಿನ ಆರಂಭಿಕ ಕಲಿಕೆಯಲ್ಲಿ ಪೋಷಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಜ್ಜುಗೊಳಿಸುತ್ತದೆ ಎಂದು ತಿಳಿಸಿದರು ಅಜೀಂ ಪ್ರೇಮ್ ಜಿ ಪೌಂಡೇಷನ್ ತರಬೇತುದಾರ ಶಿವಕುಮಾರ್ ಮಾತನಾಡಿ ಮಕ್ಕಳ ಹಾರೈಕೆ,ಹಕ್ಕು ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಆಲೋಚನೆಯನ್ನು ಮಾಡುವುದರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು,ಕಾರ್ಯಕರ್ತರು ಶಿಕ್ಷಕರೊಂದಿಗೆ ಸಮುದಾಯದ ಪ್ರತಿಯೊಬ್ಬರೂ ಸಹಕರಿಸಬೇಕು’ಮಕ್ಕಳು ಶಿಸ್ತು,ಶ್ರದ್ಧೆ ಭಕ್ತಿ ಕಲಿಯಲು ಅಂಗನವಾಡಿ ಕೇಂದ್ರವೆೇ ಮೊದಲನೆ ಗುರುಕುಲವಾಗಿದೆ ಆದುದರಿಂದ
ಮಕ್ಕಳ ಶಿಕ್ಷಣಕ್ಕೆ ಪೋಷಕರು ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕುಇತ್ತೀಚೆಗೆ ತಾಯಂದಿರು ಮಕ್ಕಳನ್ನು ಸುಮ್ಮನಿರಿಸಲು ತಿಂಡಿ ಮತ್ತು ಊಟ ತಿನ್ನಿಸಲು ಮೊಬೈಲ್ ಪೋನನ್ನು ಕೊಡುತ್ತಿದ್ದು ದಯವಿಟ್ಟು ತಾಯಂದಿರು ಪೋಷಕರು ತಮ್ಮ ತಮ್ಮ ಮಕ್ಕಳನ್ನು ಜಂಕ್ ಫುಡ್ಗಳಿಂದ, ಮತ್ತು ಮೊಬೈಲ್ಗಳಿಂದ ರಕ್ಷಿಸಿಕೊಳ್ಳುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ರಾಜು,ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸಂಧ್ಯಾಸ್ವಾಮಿ,ಆರೋಗ್ಯ ಇಲಾಖೆಯ ಸಿಹೆಚ್ ಓ ನವ್ಯಶ್ರೀ,ತಾಲ್ಲೋಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಧನಲಕ್ಷ್ಮಿ,ಸಾರಂಗಿ ಅಂಗನವಾಡಿ 1ಕೇಂದ್ರದ ಕಾರ್ಯಕರ್ತೆ ಬಿ ಶಶಿಕಲಾ,ಆಶಾ ಕಾರ್ಯಕರ್ತೆ ಭವಾನಿ,ಸಹಾಯಕಿ ಸಾಕಮ್ಮ,ಅಣ್ಣೇಚಾಕನಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಎಂ ಆರ್ ಸುಧಾಮಣಿ(ಪ್ರೇಮ)ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರಾರ್ಥನೆ ಗೀತೆಯನ್ನು ಮಕ್ಕಳ ತಾಯಂದಿರಾದ ವರ್ಷಿಣಿ ನೆರವೇರಿಸಿದರು,ಇದೇ ಸಂದರ್ಭದಲ್ಲಿ ಮಕ್ಕಳ ತಾಯಂದಿರುಗಳಾದ ಚಂದ್ರಮ್ಮ,ರುಕ್ಮಿಣಿ,ಮಂಜುಳ, ಗೀತಾ,ಅಶ್ವಿನಿ ಹರ್ಷಿತ,ಜಮುನಾ,ದಿವ್ಯಾ,ಲಕ್ಷ್ಮೀ,ಪ್ರಭಾ,ರಾಜಲಕ್ಷ್ಮಿ,ರಕ್ಷಿತಾ,ಲತಾ,ರಮ್ಯ, ರಂಜಿತಾ,ರಶ್ಮಿ,ರೋಜಾ,ಗೀತಾ ಸರೋಜಮ್ಮ,ಲಕ್ಷ್ಮಮ್ಮ, ಶಶಿಕಲಾ,ಸಂಧ್ಯಾ,ಶೋಭ,ಚೈತ್ರ, ಸೇರಿದಂತೆ ಉಪಸ್ಥಿತರಿದ್ದರು ಸರ್ವರಿಗೂ ಸಿಹಿ ಮತ್ತು ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು





