ಶಿರಾ ಪಟ್ಟನಾಯಕನಹಳ್ಳಿ ಉಚಿತ ಶೇಂಗಾ ಬೀಜ ವಿತರಣೆ ಕಾರ್ಯಕ್ರಮ
ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ 2025–26ನೇ ಸಾಲಿನ ರಾಷ್ಟ್ರೀಯ ಖಾಧ್ಯ ತೈಲ ಅಭಿಯಾನ ಕಾರ್ಯಕ್ರಮವು ಗುರುವಾರ ಉದ್ಘಾಟನೆಯಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ. ನಾಗರಾಜು ಅವರು,
“ರೈತರ ಆದಾಯ ಹೆಚ್ಚಿಸಲು ಹಾಗೂ ತೈಲಬೀಜ উৎপಾದನೆ ವಿಸ್ತರಿಸಲು ರಾಷ್ಟ್ರೀಯ ಖಾಧ್ಯ ತೈಲ ಅಭಿಯಾನ ಮಹತ್ವದ ಪಾತ್ರ ವಹಿಸುತ್ತದೆ. ರೈತರಿಗೆ ಉಚಿತ ಶೇಂಗಾ ಬೀಜ ವಿತರಿಸುವ ಮೂಲಕ ಹೆಚ್ಚು ಉತ್ಪಾದನೆ ಸಾಧಿಸಲು ಸರ್ಕಾರ ಬದ್ಧವಾಗಿದೆ,” ಎಂದು ಹೇಳಿದರು.
ಕೃಷಿ ಅಧಿಕಾರಿ ಸತ್ಯನಾರಾಯಣ ರೈತರಿಗೆ ಕಾರ್ಯಕ್ರಮದ ಉದ್ದೇಶ, ತಂತ್ರಜ್ಞಾನಾಧಾರಿತ ಬೆಳೆಗಾರಿಕೆ ಮತ್ತು ಪೋಷಕ ನೀತಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾಧರ, ಪರಮೇಶ್, ರಾಜಣ್ಣ, ಆತ್ಮ ಯೋಜನೆಯ ರಕ್ಷಿತಾ, ಕೀರ್ತಿ, ಕೃಷಿ ಸಖಿಯರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನಾದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಚಿತ ಶೇಂಗಾ ಬೀಜಗಳನ್ನು ಸ್ವೀಕರಿಸಿದರು.
ವರದಿ:ಚೇತನ್ ಜಿ ಜಾನಕಲ್





