ಏ 19ರಂದು ಬೆಸ್ಕಾಂ ನಿಂದ ಕುಂದು ಕೊರತೆ ನಿವಾರಣಾ ಸಭೆ

ದೊಡ್ಡಬಳ್ಳಾಪುರ:ಉಪವಿಭಾಗ ವ್ಯಾಪ್ತಿಗೆ ಬರುವ ಗ್ರಾಹಕರು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ವಿಷಯವಾಗಿ ತಮ್ಮ ಕುಂದು-ಕೊರತೆ/ ನ್ಯೂನ್ಯತೆಗಳು ಇದ್ದಲ್ಲಿ ಪರಸ್ಪರ ಚರ್ಚಿಸಿ, ಪರಿಹರಿಸಿಕೊಳ್ಳಲು ಉತ್ತಮ ಸಲಹೆ/ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ ಏ.19ರ ಶನಿವಾರದಂದು ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು ಆಯೋಜಿಸಲಾಗುತ್ತಿದೆ.

ಏ.19ರಂದು ಮಧ್ಯಾಹ್ನ 3:00 ಗಂಟೆಗೆ ಬೆಸ್ಕಾಂ, ದೊಡ್ಡಬಳ್ಳಾಪುರ ನಗರ ಉಪವಿಭಾಗ ಕಚೇರಿ, ಎ.ಪಿ.ಎಂ.ಸಿ ಯಾರ್ಡ್ ಎದುರು, ದೊಡ್ಡಬಳ್ಳಾಪುರ ನಗರ ಉಪವಿಭಾಗದಲ್ಲಿ ಸಭೆಯನ್ನು ಏರ್ಪಡಿಸಿರುವುದರಿಂದ, ನಗರ ಉಪವಿಭಾಗ ವ್ಯಾಪ್ತಿಗೆ ಒಳಪಡುವ (o&M-1, o&M-2, ಬಾಶೆಟ್ಟಿಹಳ್ಳಿ, ಮೆಳೇಕೋಟೆ ಕ್ರಾಸ್ ಶಾಖೆ) ವಿದ್ಯುತ್ ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡು ಕಂಪನಿಯೊಂದಿಗೆ ಸಹಕರಿಸಲು ಕೋರಲಾಗಿದೆ.