--ಜಾಹೀರಾತು--

ಗ್ರಾಮೀಣ ಭಾಗದ ಮಹಿಳೆಯರು ಕೃಷಿಗೆ ಸಂಬಂದಿಸಿದ ತರಬೇತಿ ಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಶಿವಲಿಂಗಯ್ಯ

On: December 14, 2025 6:57 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಗ್ರಾಮೀಣ ಭಾಗದ ಮಹಿಳೆಯರು ಕೃಷಿಗೆ ಸಂಬಂದಿಸಿದ ತರಬೇತಿ ಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು– ಶಿವಲಿಂಗಯ್ಯ

ದೊಡ್ಡಬಳ್ಳಾಪುರ:ಹಾಡೋನಹಳ್ಳಿಯಲ್ಲಿರುವ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್‌ನ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ರಾಷ್ಟ್ರೀಯ ಸಂಶೋಧನಾ ಮತ್ತು ನಿರ್ವಹಣಾ ಸಂಸ್ಥೆ ಪ್ರಾಯೋಜಿತ ಎಸ್‌ಸಿ-ಎಸ್‌ಪಿ ಕಾರ್ಯಕ್ರಮದ ಭಾಗವಾಗಿ ಹೂವಿನ ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕೌಶಲ್ಯಾಭಿವೃದ್ಧಿ6 ದಿನಗಳತರಬೇತಿಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಶನಿವಾರ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತರಾಯ ಮಾತನಾಡಿ
ದೇವಸ್ಥಾನ, ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಬಳಸುವ ಹೂವುಗಳನ್ನು ಮರು ಬಳಕೆ ಮಾಡುವುದಿಲ್ಲ, ಅಂತಹ ತ್ಯಾಜ್ಯ ಹೂವುಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಅಗರ್‌ಬತ್ತಿ, ಧೂಪ, ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಮಹಿಳೆಯರು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಕಿರು ಉದ್ದಿಮೆದಾರರಾಗುವುದರ ಮೂಲಕ ಆರ್ಥಿಕ ವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ ಮಾತನಾಡಿ, ಮಹಿಳೆಯರು ಉದ್ದಿಮೆದಾರರಾಗಲು ವಿಪುಲ ಅವಕಾಶಗಳಿದ್ದು, ಕೃಷಿ ವಿಜ್ಞಾನ ಕೇಂದ್ರವು ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಟ್ಟಿರುವ ವಿವಿಧ ವಿಷಯಗಳ ಬಗ್ಗೆ ತರಬೇತಿಗಳನ್ನು ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದ ಮಹಿಳೆಯರು ಈ ತರಬೇತಿ ಕಾರ್ಯಕ್ರಮಗಳ ಸದುಪಯೋಗ ” ಪಡೆದುಕೊಳ್ಳಬೇಕು ಎಂದರು.
ಪ್ರಾಧ್ಯಾಪಕರಾದ ಡಾ.ಗೋಪಿಕಾ, ಸಿ. ಮುತ್ತಗಿ, – ಮಹಿಳೆಯರಿಗೆ ಮೌಲ್ಯವರ್ಧಿತ ಉತ್ಪನ್ನಗಳ ಮಹತ್ವವನ್ನು ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಸಂಗಮ, ಡಾ. ಸ್ಮಿತಾ, ಡಾ. ಭುವನೇಶ್ವರಿ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಡಾ. ಶ್ರೀಕಾಂತ್, ವಿಜ್ಞಾನಿಡಾ.ಎನ್.ಬಾಲಕೃಷ್ಣನ್, ಪ್ರಾಧ್ಯಾಪಕರಾದ ಡಾ.ಜಿ.ಕೆ.ನಿಂಗರಾಜು, ಡಾ. ವೈ.ಎಂ.ಗೋಪಾಲ್ ಹಾಗೂ ಡಾ. ಸುಪ್ರಿಯಾ ಭಾಗವಹಿಸಿದ್ದರು.
ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು
ನೀಡಲಾಯಿತು.