--ಜಾಹೀರಾತು--

*ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೌರಮ್ಮ ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಲಲಿತಾಶಂಕರಶೆಟ್ಟಿ ಅವಿರೋಧ ಆಯ್ಕೆ*

On: December 14, 2025 8:15 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೌರಮ್ಮ ಮಹೇಶ್ ಮತ್ತು ಉಪಾಧ್ಯಕ್ಷರಾಗಿ ಲಲಿತಾಶಂಕರಶೆಟ್ಟಿ ಅವಿರೋಧ ಆಯ್ಕೆ*

ಕೆ.ಆರ್.ಪೇಟೆ,ಡಿ.14:ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗುಡುಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಗೌರಮ್ಮಮಹೇಶ್, ಉಪಾಧ್ಯಕ್ಷೆಯಾಗಿ ಲಲಿತಾಶಂಕರಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಯಸಿ ಗೌರಮ್ಮಮಹೇಶ್ ಮತ್ತು ಉಪಾಧ್ಯಕ್ಷ ಸ್ಥಾನ ಬಯಸಿ ಲಲಿತಾಶಂಕರಶೆಟ್ಟಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಚುನಾವನಾಧಿಕಾರಿ ಸಂಘದ ಸಿಇಓ ಸೌಮ್ಯಚಂದ್ರೇಶ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಪಲ್ಲವಿವಸಂತಕುಮಾರ್, ಸುಜಾತ ಮಹೇಂದ್ರ, ಅಶ್ವಿನಿಮೋಹನ್‌ಕುಮಾರ್, ಜ್ಯೋತಿಸುರೇಶ್, ಗೌರಮ್ಮಮಹೇಶ್, ಲಿಲಿತಾಶಂಕರಶೆಟ್ಟಿ ಹಾಗೂ ಮನ್‌ಮುಲ್ ಮಾರ್ಗದ ವಿಸ್ತರಣಾಧಿಕಾರಿ ಬಿ.ಸಿ.ಮಧು ಭಾಗವಹಿಸಿದ್ದರು. ಉಳಿದ ನಾಲ್ಕು ಮಂದಿ ನಿರ್ದೇಶಕರು ಚುನಾವಣಾ ಪ್ರಕ್ರಿಯೆಗೆ ಗೈರು ಹಾಜರಾಗಿದ್ದರು.
ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಸೌಮ್ಯಚಂದ್ರೇಶ್ ಕಾರ್ಯನಿರ್ವಹಣೆ ಮಾಡಿದರು. ಚುನಾವಣಾ ಸಹಾಯಕರಾಗಿ ಹಾಲು ಪರೀಕ್ಷಕಿ ಸೌಮ್ಯಹರೀಶ್ ಮತ್ತಿತರರು ಕಾರ್ಯನಿರ್ವಹಣೆ ಮಾಡಿದರು.
ಸಂಘದ ನೂತನ ಅಧ್ಯಕ್ಷರಾದ ಗೌರಮ್ಮಮಹೇಶ್ ಮತ್ತು ಉಪಾಧ್ಯಕ್ಷೆ ಲಿಲಿತಾಶಂಕರಶೆಟ್ಟಿ ಅವರನ್ನು ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯೆ ಕೋಮಲಾರಾಯಪ್ಪ, ಗ್ರಾಮದ ಮುಖಂಡರಾದ ಜಿ.ಎ.ರಾಯಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ್, ಕರೀಗೌಡ, ನಾಗರಾಜು, ಎಲ್.ಐ.ಸಿ. ಪಾಪಣ್ಣ, ತಿಮ್ಮಶೆಟ್ಟಿ, ರಘು, ಮಹೇಂದ್ರ, ಸತೀಶ್, ಗಜೇಂದ್ರ, ಸಾಗರ್, ನಾಗೇಗೌಡ, ಪುನೀತ್‌ಕುಮಾರ್, ಪುಟ್ಟೇಗೌಡ, ಗುರುಮೂರ್ತಿ, ಜಿ.ಆರ್.ರಾಘವೇಂದ್ರ, ತಿಮ್ಮಶೆಟ್ಟಿ, ಜಿ.ಪಿ.ವಿಶ್ವನಾಥ್, ಜಿ.ಎಸ್.ಅರುಣ್‌ಕುಮಾರ್, ಅಜಯ್, ಜಿ.ಎಸ್.ವಿಜಯ್, ಜಿ.ಎ.ಮುರುಳಿ, ಜಿ.ಸಿ.ಕೆಂಪರಾಜು ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದ್ದಾರೆ.
ಹಿರಿಯ ಮುಖಂಡರಾದ ಜಿ.ಎ.ರಾಯಪ್ಪ ಮಾತನಾಡಿ ನಮ್ಮ ಗುಡುಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ನಿರ್ದೇಶಕರನ್ನು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡೇರಿಯ ಅಭಿವೃದ್ಧಿಗೆ ಶ್ರಮಿಸಬೇಕು. ಹಾಲು ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಂಘಕ್ಕೆ ನಿತ್ಯ 15ಕ್ಯಾನ್ ಹಾಲು ಪೂರೈಕೆ ಆಗುತ್ತಿದೆ ಇದರಿಂದ ಗ್ರಾಮದಲ್ಲಿ ಹೈನುಗಾರಿಕೆ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಹಾಲಿನ ಹಣ ಹಾಗೂ ಸರ್ಕಾರದ ಪ್ರೋತ್ಸಾಹ ಧನ ಬಿಡುಗಡೆ ಆಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಳಫೆ ಹಾಲಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು. ನಮ್ಮ ಸಂಘದ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರಿಗೆ ಕೃತಜ್ಞತೆಗಳನ್ನು ಗ್ರಾಮದ ಪರವಾಗಿ ಸಲ್ಲಿಸುವುದಾಗಿ ತಿಳಿಸಿದರು.