--ಜಾಹೀರಾತು--

ದೇವನಗುಂದಿ ಗ್ರಾಮ ಪಂಚಾಯಿತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆ ” ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ನೀಡಿದ ಐದು ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಕಾಲಕ್ಕೆ ತಲುಪಿಸಿದೆ – ಬಚ್ಚೇಗೌಡ.

On: December 15, 2025 7:05 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ದೇವನಗುಂದಿ ಗ್ರಾಮ ಪಂಚಾಯಿತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆ “

ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ನೀಡಿದ ಐದು ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಕಾಲಕ್ಕೆ ತಲುಪಿಸಿದೆ – ಬಚ್ಚೇಗೌಡ

ಹೊಸಕೋಟೆ:” ದೇವನಗುಂದಿ ಗ್ರಾಮ ಪಂಚಾಯಿತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆ ”
ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ನೀಡಿದ ಐದು ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಕಾಲಕ್ಕೆ ತಲುಪಿಸಿದೆ – ಬಚ್ಚೇಗೌಡ.

ತಾವರೆಕೆರೆ: ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗುಂದಿ ಗ್ರಾಮ ಪಂಚಾಯಿತಿಯಲ್ಲಿ ಪಂಚ ಗ್ಯಾರೆಂಟಿಗಳ ಕುಂದು ಕೊರತೆ ಸಮಾಲೋಚನಾ ಸಭೆಯನ್ನು ಹೊಸಕೋಟೆ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಚಿಕ್ಕಹುಲ್ಲೂರು ಬಚ್ಚೇಗೌಡ ಉದ್ಘಾಟಿಸಿ ಮಾತನಾಡಿ

ಕೇಂದ್ರ ಸರ್ಕಾರ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಏರಿಸಿದೆ ಆದರೆ ಬಡವರ, ಮಧ್ಯಮವರ್ಗದವರ ಅನ್ನಭಾಗ್ಯಕ್ಕೆ ಮಾತ್ರ 1 ಲಕ್ಷದ 20 ಸಾವಿರ ನಿಗದಿ ಮಾಡಿದೆ. ಮನೆಮಠ ಏನು ಇಲ್ಲದ ಮನೆಯಲ್ಲಿ ಮನೆ ಮಂದಿ ದುಡಿದರೆ ಆದಾಯದ ಪ್ರಮಾಣ ಹೆಚ್ಚಾಗುತ್ತೆದೆ. ಹಾಗಂತಾ ಅವರ ಅಲ್ಪಮಟ್ಟದ ಅದಾಯವನ್ನು ನೋಡಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದು ಎಷ್ಟು ಸರಿ ಎಂದು ಪಂಚ ಗ್ಯಾರೆಂಟಿಗಳ ಕುಂದು ಕೊರತೆ ಸಮಾಲೋಚನಾ ಸಭೆಯಲ್ಲಿ ತಿಳಿಸಿದರು . ಹಾಗೂ ಸುಮಾರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ಪಂಚ ಗ್ಯಾರಂಟಿ ಯೋಜನೆಯ ವ್ಯಾಪ್ತಿಗೆ ಬರುವಂತಹ ತಾಲೂಕು ಅಧಿಕಾರಿಗಳು ಹಾಗೂ ತಾಲೂಕು ಹಾಗೂ ಜಿಲ್ಲಾಮಟ್ಟದ ಸದಸ್ಯರುಗಳು ಹೊಸಕೋಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕುಂದು ಕೊರತೆ ಸಭೆಯನ್ನು ನಡೆಸಿ ಯಶಸ್ವಿಗೊಳಿಸಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸಹ ಸಭೆಗಳನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ತಾಲ್ಲೂಕು ಪಂಚ ಗ್ಯಾರೆಂಟಿಗಳ ತಾಲ್ಲೂಕು ಅಧ್ಯಕ್ಷ ಬಚ್ಚೇಗೌಡ ಮಾತನಾಡಿದರು.

ಹೊಸಕೋಟೆಯ ಘಟಕ 29ರ ಬಿಎಂಟಿಸಿ ನಿರೀಕ್ಷಿಕರಾದ ನಟರಾಜ್ ಅವರಿಗೆ ದೇವನಗುಂದಿ ಗ್ರಾಮಸ್ಥರು ನಮ್ಮೂರಿಗೆ ಯಾವುದೇ ಬಸ್ ಬರೋದೇ ಇಲ್ಲಾ ದುನ್ನಸಂದ್ರ ಕ್ರಾಸ್ ನಲ್ಲೇ ತಿರುಗಿಸಿಕೊಂಡು ವಾಪಸ್ ಹೋಗುತ್ತಾರೆ ಅಲ್ಲಿಂದ ದೇವನಗುಂದಿಗೆ ಬರಲು ಪರದಾಡಬೇಕಿದೆ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ನಮ್ಮೂರಿನಿಂದ ಯಾವುದೇ ಬಸ್ ಗಳ ಸೌಲಭ್ಯ ಇಲ್ಲ ಇನ್ನಾದರೂ ನಮ್ಮೂರಿಗೆ ಬಸ್ ಬರುವ ಹಾಗೆ ಮಾಡಿ ಎಂದು ಮನವಿ ಮಾಡಿಕೊಂಡರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೀಕ್ಷಕರಾದ ಸವಿತಾ ಮಾತನಾಡಿ ತಾಲ್ಲೂಕಿನಾದ್ಯಂತ ಒಟ್ಟು 60,234 ಫಲನುಭವಿಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ 2000 ಗೃಹಲಕ್ಷ್ಮಿ ಹಣವನ್ನು ತಮ್ಮ ಖಾತೆಗೆ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿಯಲ್ಲಿ ತಾಲ್ಲೂಕು 99.97% ಯಶಸ್ಸು ಸಾಧಿಸಿದೆ ಎಂದರು.

ತಾಲ್ಲೂಕು ಆಹಾರ ನಿರೀಕ್ಷಕರಾದ ಶಿವಕುಮಾರ್ ಮಾತನಾಡಿ ದೇವನಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 2425 ಕುಟುಂಬಗಳಿಗೆ ಅನ್ನಭಾಗ್ಯ ಸಿಗತ್ತಿದೆ. ಇತ್ತೀಚಿಗೆ ತೆರಿಗೆ ಪಾವತಿ ಮತ್ತಿತರ ಕಾರಣಗಳಿಂದ ಬಿಪಿಲ್ ಕಾರ್ಡ್ ಎಪಿಲ್ ಆಗಿ ಪರಿವರ್ತನೆ ಹೊಂದಿರುವುದರಿಂದ ಸಾಕಷ್ಟು ಬಡ ಮತ್ತು ಮಾಧ್ಯಮ ಕುಟುಂಬಗಳು ಅನ್ನಭಾಗ್ಯದಿಂದ ವಂಚಿಸಲ್ಪಟ್ಟಿರಬಹುದು ಅಂತಹವರು ಏನಾದರೂ ಇದ್ದರೆ ಇಲಾಖೆಯ ಗಮನಕ್ಕೆ ತಂದರೆ ಅದನ್ನು ಸರಿಪಡಿಸಲಾಗುವುದು ಎಂದುರು.

ಪಂಚ ಗ್ಯಾರೆಂಟಿಗಳ ತಾಲ್ಲೂಕು ಅಧ್ಯಕ್ಷರಾದ ಬಚ್ಚೇಗೌಡ ಮಾತನಾಡಿ ಅನ್ನಭಾಗ್ಯಕ್ಕೆ ಬಹುತೇಕ ಜನ ಶಕ್ತಿ ಯೋಜನೆಯಿಂದ ಮಹಿಳೆಯರು ದೇವಸ್ಥಾನ, ಪ್ರವಾಸ ಅಂತಾ ಸುಮ್ಮನೆ ತಿರುಗುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಮಾತ್ರವೇ ಬಸ್ ಗಳಲ್ಲಿ ಓಡಾಡುತ್ತಾರೆಯೇ ಕೂಲಿ ಮಾಡೋರು, ಆಸ್ಪತ್ರೆಗೆ ಹೋಗುವವರು, ಕಂಪನಿಗಳಿಗೆ ಹೋಗೋರು ಬಸ್ ಗಳಲ್ಲಿ ಯಾರು ಪ್ರಯಾಣಿಸೊದೇ ಇಲ್ವಾ ಎಂದು ಹೇಳಿದರು. ಪಂಚ ಗ್ಯಾರೆಂಟಿಗಳು ಬಡವರ ಸಾಮಾಜಿಕ ಸ್ಥರವನ್ನು ಹೆಚ್ಚಿಸಿದೆ. ಸಾಕಷ್ಟು ಜನ ಗೃಹಲಕ್ಷ್ಮಿ ಹಣದಲ್ಲಿಯೇ ಒಡವೆ, ಮಕ್ಕಳ ಶಿಕ್ಷಣ, ಮಕ್ಕಳ ಹೆಸರಲ್ಲಿ ಠೇವಣಿ ಇಡುವಂತಹ ಕೆಲಸ ಮಾಡಿದ್ದಾರೆ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದರು.

ಕೋಟ್ : ಇಷ್ಟು ವರ್ಷ ಬಡವರಿಗಾಗಿ ಯಾರು ನೇರವಾಗಿ ಏನನ್ನು ಕೊಟ್ಟಿರಲಿಲ್ಲ, ಕಾಂಗ್ರೆಸ್ ನಮಗೆ ಗೃಹಲಕ್ಷ್ಮಿಹೆಸರಲ್ಲಿ 2000, ಅನ್ನಭಾಗ್ಯ, ಉಚಿತ ವಿದ್ಯುತ್, ಉಚಿತವಾಗಿ ರಾಜ್ಯದಲೆಲ್ಲಾ ಬಸ್ ನಲ್ಲಿ ಓಡಾಡಬಹುದು ಇದಕ್ಕಿಂತ ಇನ್ನೆನನ್ನು ನಾವು ಭಯಸಿರಲಿಲ್ಲ – ಗೃಹಲಕ್ಷ್ಮಿ ಫಲಾನುಭವಿ, ದೇವನಗುಂದಿ

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯರಾದ ಹೇಮಣ್ಣ, ತಾಲ್ಲೂಕು ಸದಸ್ಯರಾದ ಭೋಧನ ಹೊಸಹಳ್ಳಿ ಮಂಜುನಾಥ್, ರಮೇಶ್, ಅಮ್ಜದ್ ಬೇಗ್, ಮನೋಜ್‌ಗೌಡ, ಗ್ರಾಪಂನ ಅಧ್ಯಕ್ಷೆ ರತ್ನಮ್ಮ ಗೋವಿಂದರಾಜು, ಉಪಾಧ್ಯಕ್ಷರಾದ ಹರೀಶ್, ಪಿಡಿಒ ಹರೀಶ್, ಗ್ರಾಪಂ. ಸದಸ್ಯರು, ಮುಖಂಡರಾದ ಲತಾರೆಡ್ಡಿ, ಡಿ ಕೆ ಮಂಜಣ್ಣ ಅಂಗನವಾಡಿ, ಆಶಾ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು.