--ಜಾಹೀರಾತು--

ಯೋಗಿ ನಾರಾಯಣ ಆಟೋ ಚಾಲಕರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ “

On: December 15, 2025 7:01 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಯೋಗಿ ನಾರಾಯಣ ಆಟೋ ಚಾಲಕರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ “

ಆಟೋ ಚಾಲಕರು ರಾಜ್ಯೋತ್ಸವದ ಜೊತೆಗೆ ಕಾನೂನು ನಿಯಮಗಳನ್ನು ಸಹ ಪಾಲಿಸಿಲಯನ್       ಸಿ.ಜಯರಾಜ್

ತಾವರೆಕೆರೆ : ಹೊಸಕೋಟೆಯ ಸಂತೆ ಗೇಟ್ ಸರ್ಕಾರಿ ಆಸ್ಪತ್ರೆ ಮುಂಬಾಗದಲ್ಲಿ ಶ್ರೀ ಯೋಗಿ ನಾರಾಯಣ ಆಟೋ ಚಾಲಕರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 15ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ. ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಸಮಾಜ ಸೇವಕರಾದ ಹೊಸಕೋಟೆ ಡಾಕ್ಟರ್ ಸಿ ಲಯನ್ ಜಯರಾಜ್ ರವರು ಚಾಲನೆ ನೀಡಿದರು. ನಂತರ ಮಾತನಾಡಿ

ಕನ್ನಡ ರಾಜ್ಯೋತ್ಸವ ಎಂದಾಕ್ಷಣ ನೆನಪಿಗೆ ಬರುವುದು ಆಟೋ ಚಾಲಕರು ಕಾರಣ ಪ್ರತಿ ಗ್ರಾಮ ಹಾಗೂ ತಾಲೂಕು ಜಿಲ್ಲೆ ರಾಜ್ಯಮಟ್ಟದಲ್ಲಿಯೂ ಎಲ್ಲಾ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಎಲ್ಲಾ ಕಡೆಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಹಾಗೂ ಅವರ ವಾಹನಗಳಿಗೆ ಉತ್ತಮ ರೀತಿಯ ಅಲಂಕಾರ ಮಾಡಿರುವುದನ್ನು ನೋಡಲು ಬಲು ಚೆಂದ . ಅದೇ ರೀತಿ ಆಚರಣೆಯ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಸಹ ಕಾಪಾಡುವ ನಿಟ್ಟಿನಿಂದ ಎಲ್ಲಾ ಚಾಲಕರು ವಾಹನ ಚಲಾವಣೆ ಮಾಡುವಾಗ ಸಮವಸ್ತ್ರ ಧರಿಸಿ ಹಾಗೂ ತಮ್ಮ ವಾಹನದ ಎಲ್ಲಾ ದಾಖಲೆಗಳು ಸರಿಯಾಗಿ ಇಟ್ಟುಕೊಂಡು ಚಲಿಸುವುದರಿಂದ ಪ್ರಯಾಣಿಕರಿಗೂ ಹಾಗೂ ನಿಮಗೂ, ನಿಮ್ಮ ಕುಟುಂಬಕ್ಕೂ ಸಹಾಯವಾಗುತ್ತದೆ . ಅದೇ ರೀತಿ ಇಂದು ಯೋಗಿ ನಾರಾಯಣ ಆಟೋ ಚಾಲಕರ ಬಳಗ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಹಳ ಅರ್ಥಪೂರ್ಣವಾಗಿ 15ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಸುಮಾರು 30 ರಿಂದ 40 ಆಟೋ ಚಾಲಕರಿಗೆ ಸಮವಸ್ತ್ರ ನೀಡಿರುವುದು ಬಹಳ ಅರ್ಥಪೂರ್ಣವಾಗಿದೆ ಹಾಗೂ ಶ್ಲಾಘನೀಯ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ರಮೇಶ್ (ದಾಸ್ ) ಮಾತನಾಡಿ ಕನ್ನಡ ರಾಜ್ಯೋತ್ಸವ ಎಂಬುದು ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ಪ್ರತಿನಿತ್ಯವೂ ಆಚರಣೆ ಮಾಡುವಂತಹ ಹಬ್ಬವಾಗಿದೆ ಅದರಲ್ಲೂ ನಮ್ಮ ಆಟೋ ಚಾಲಕರಿಗೆ ಇರುವಂತಹ ಒಂದು ಮಹತ್ತರ ಹಬ್ಬ ಎಂದರೆ ಅದು ಕನ್ನಡ ರಾಜ್ಯೋತ್ಸವ ಮಾತ್ರ ಈ ನಿಟ್ಟಿನಿಂದ ನಮ್ಮ ಆಟೋ ಚಾಲಕರ ಎಲ್ಲಾ ಸದಸ್ಯರ ಒಮ್ಮತದಿಂದ ಇಂದು ಸ್ಥಳೀಯ ನಾಯಕರ ಜೊತೆ ಕೈಜೋಡಿಸಿ ತಾಯಿ ಭುವನೇಶ್ವರಿ ತಾಯಿಗೆ ವಿಶೇಷ ಪೂಜೆ ಹಾಗೂ ಧ್ವಜಾರೋಹಣ ನೋಡುಗರ ಗಮನ ಸೆಳೆಯುವಂತೆ ಆಟೋ ಗಳಿಗೆ ವಿಶೇಷ ರೀತಿಯ ಅಲಂಕಾರ ಮಾಡಿ ನೆರೆದಿದ್ದ ಸ್ಥಳೀಯರಿಗೆ ಅನ್ನ ಸಂತರ್ಪಣೆ ಮಾಡುವುದರ ಮೂಲಕ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಸತತ 15 ವರ್ಷಗಳಿಂದ ನಿರಂತರವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡಿಕೊಂಡು ಬಂದಿದ್ದೇವೆ ಈ ವರ್ಷ ಸುಮಾರು 35 ರಿಂದ 40 ಜನಕ್ಕೆ ಸಮವಸ್ತ್ರ ವಿತರಣೆಯು ಸಹ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾಕ್ಟರ್ ಲಯನ್ ಸಿ ಜಯರಾಜ್, ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ, ಟೌನ್ ಬ್ಯಾಂಕ್ ನಿರ್ದೇಶಕರಾದ ಬಾಲಚಂದ್ರ, ಆಟೋ ಚಾಲಕರ ಸಂಘದ ಅಧ್ಯಕ್ಷ ರಮೇಶ್ ದಾಸ್, ಕೆಪಿಸಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಚಂದ್ರೇಗೌಡ, ವರದಾಪುರ ಆನಂದ್, ಕಲೀಮ್ ಪಾಷಾ, ಆಟೋ ಓಲೋ ಉಬರ್ ಸಂಘದ ಅಧ್ಯಕ್ಷ ನಾಗೇಶ್, ಮುಖಂಡರಾದ ಉಮೇಶ್, ಮುನಿಕೃಷ್ಣ, ಸಲ್ಮಾನ್ ,ಫಯಾಜ್, ಯಾಸಿನ್ ಹಾಗೂ ಯೋಗಿ ನಾರಾಯಣ ಆಟೋ ಘಟಕದ ಪದಾಧಿಕಾರಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ರಾಜ್ಯೋತ್ಸವದಲ್ಲಿ ಹಾಜರಿದ್ದರು.