ಮಾಲಿನ್ಯ ನಿಯಂತ್ರಣ ಮಂಡಲಿ ಗಾಗಿ ವಿಶೇಷ ಪೂಜೆ
ದೊಡ್ಡಬಳ್ಳಾಪುರ: ಕೈಗಾರಿಕಾ ತ್ಯಾಜ್ಯ ನೀರು ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಹರಿದು ಮಜರಾ ಹೊಸಹಳ್ಳಿ ಹಾಗು ದೊಡ್ಡ ತುಮಕೂರು ಪಂಚಾಯಿತಿಯ ವ್ಯಾಪ್ತಿಯ ಸುಮಾರು ಊರುಗಳ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದ್ದು ಕುಡಿಯಲು ಅಲ್ಲದೆ ವ್ಯವಸಾಯಕ್ಕೊ ಯೋಗ್ಯವಲ್ಲದ ರೀತಿಯಲ್ಲಿ ಬರುತ್ತಿದ್ದು ಈ ಸುತ್ತ ಮುತ್ತಲಿನ ಗ್ರಾಮಗಳಿಗೆ ಶುದ್ದ ನೀರಿಗಾಗಿ ಮತ್ತು ಕೆರೆ ನೀರು ಸಂಸ್ಕರಣೆ ಮಾಲಿನ್ಯ ನಿಯಂತ್ರಣ ಮಂಡಲಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕಛೇರಿ ತೆರೆಯುವಂತೆ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದು ಯಾವುದುಕ್ಕೂ ಸರ್ಕಾರ ಹಾಗು ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಗಂಧದ ಅಭಿಷೇಕ ತುಪ್ಪದ ಅಭಿಷೇಕ ಹೀಗೆ ಹತ್ತಾರು ಅಭಿಷೇಕ ಮಾಡುವುದರ ಮುಖಾಂತರ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ. ಅರ್ಕಾವತಿ ನದಿ ಪಾತ್ರದ ಹೋರಾಟ ಸಮಿತಿಯ ಸದಸ್ಯರು ಹಾಜರಿದ್ದರು