ಸಂತೇಮರಳ್ಳಿ ಪೊಲೀಸ್ ಠಾಣೆ ವತಿಯಿಂದ ಗೂಳಿಪುರ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಚಾಮರಾಜನಗರ:ಜನರಲ್ಲಿ ಕಾನೂನು ಬಗ್ಗೆ ಅರಿವು ಕಡಿಮೆಯಿದ್ದು, ಕಾನೂನುಗಳ ಅಪರಾಧಗಳನ್ನು ಕುರಿತಂತೆ ತಿಳಿಸುವ ಪ್ರಯತ್ನ ಮಾಡಿದ್ದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಪಿಎಸ್ಐ ತಾಜುದ್ದೀನ್ ರವರು ತಿಳಿಸಿದರು
ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಅಪರಾಧ ಮಾಸಾಚರಣೆ- 2025 ರ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸಿದೆ. ಇಲ್ಲಿಯವರೆಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಇದರಿಂದಾಗಿ ಸ್ವಲ್ಪ ಮಟ್ಟಿಗಿನ ಪ್ರಯೋಜನ ಕಂಡಿದೆ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ,
ಇತ್ತೀಚೆಗೆ ಒಂಟಿ ಮಹಿಳೆಯರು ರಸ್ತೆಯಲ್ಲಿ ಹೋಗುವಾಗ ಸರಗಳ್ಳತನ, ಯಾರೂ ಇಲ್ಲದ ಮನೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂಥ ಪ್ರಕರಣಗಳನ್ನು ತಡೆಯಲು ಬೀಟ್ ಪೊಲೀಸರಿಂದ ಅಪರಾಧ ಮಾಸಾಚರಣೆ ಕಾರ್ಯಗಳನ್ನು ನಡೆಸಲಾಗುತ್ತಿದೆ,
ಪ್ರಸ್ತುತ ಮೊಬೈಲ್ ಪ್ರಪಂಚ ನಿರ್ಮಾಣವಾಗಿದ್ದು ಇದರಿಂದಲೂ ಹೆಚ್ಚು ಸೈಬರ್ ಅಪರಾಧಗಳು ಹೆಚ್ಚುತ್ತಿವೆ,ಸಾರ್ವಜನಿಕರು ಯಾವುದೇ ಅಪರಿಚಿತ ಕರೆಗಳು ಬಂದರೆ ನಿಮ್ಮ ಬ್ಯಾಂಕ್ ಖಾತೆ ಮನೆವಿಳಾಸ, ಸೇರಿದಂತೆ ಇನ್ನಿತರೆ ಯಾವುದೇ ವೈಯುಕ್ತಿಕ ಮಾಹಿತಿಗಳನ್ನು ಕೇಳಿದ್ದಲ್ಲಿ ನೀಡಬಾರದು, ಹೆಲ್ಮೆಟ್ ಜಾಗೃತಿ ಹಾಗೂ ಇನ್ನಿತರ ಕಾನೂನಿನ ಬಗ್ಗೆ ಸಲಹೆ ನೀಡಿದರು.
ಈ ವೇಳೆ ಇಲಾಖೆಯ ಸಿಬ್ಬಂದಿಗಳಾದ ರಮೇಶ್,ಗಿರೀಶ್ ಸೇರಿದಂತೆ ಗ್ರಾಮದ ಮುಖಂಡರು, ಯಜಮಾನರು ಹಾಗೂ ಯುವಕರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ