ಅಸ್ಪೃಶ್ಯತೆ ನಿವಾರಣೆಗೆ ದಲಿತ ಪರ ಸಂಘಟನೆಗಳು ಒಗ್ಗೂಡಬೇಕು : ಕೆಂಪಣ್ಣ

ದೇವನಹಳ್ಳಿ  :- ಸವರ್ಣಿಯ ಸಮುದಾಯಗಳು ತಲೆ ಸಮುದಾಯಗಳ ಏಳಿಗೆಯಲ್ಲಿ ಸಹಿಸಲು ಕಷ್ಟ ಸಾಧ್ಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಕಂಡಂತೆ ಕನಸು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಒಗ್ಗೂಡಿ ಸಂವಿಧಾನದ ಹಕ್ಕುಗಳನ್ನು ಪಡೆಯುವಲ್ಲಿ ಸಂಘಟಿತ ರಾಗಬೇಕೆಂದು ಕರ್ನಾಟಕ ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಕಾರಹಳ್ಳಿ  ಕೆಂಪಣ್ಣ ಕರೆ ನೀಡಿದರು.

ದೇವನಹಳ್ಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ದಲಿತ ಪರ ಸಂಘಟನೆಗಳು ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೋಮುವಾದಿ ಪಕ್ಷಗಳು ಸಂವಿಧಾನ ಬದಲಾವಣೆ ಒಂದು ಕಡೆಯಾದರೆ ಸಮಾನತೆ ಹಾಗೂ ಸಮಾಜವಾದವನ್ನು ಸಂವಿಧಾನ ದಿಂದಲೇ ತೆಗೆಯುವ ಹೊನ್ನಾರ್ ನಡೆಯುತ್ತಿದೆ ಈ ವಿಚಾರವಾಗಿ ದಲಿತ ಸಂಘಟನೆಗಳೆಲ್ಲ ಒಗ್ಗೂಡಿ ಶಕ್ತಿಪ್ರದರ್ಶನದ ಮೂಲಕ ರಾಷ್ಟ್ರಧ್ಯಕ್ಷ ಅಧಿಕಾರವನ್ನು ಹಿಡಿದಾಗ ಮಾತ್ರ ನಮಗಾಗಿ ಹಗಲು ಇರುಳು ಹಾಗೂ ಶೋಷಣೆಯನ್ನು ಅನುಭವಿಸಿ ಬರೆದಂತಹ ನಮ್ಮೆಲ್ಲರ ಧರ್ಮ ಗ್ರಂಥ ಸಂವಿಧಾನದ ಆಶೋತ್ತರಗಳನ್ನು ಕಣ್ಮರೆಯಾಗುವ ಸಾಧ್ಯತೆಗಳು ನಮ್ಮ ನಾಡುವ ಸರ್ಕಾರಗಳು ಅಗಲಿರೋದು ಸಂಚು ಹೊಡುತ್ತಿವೆ ನಮ್ಮೆಲ್ಲರ ಏಳಿಗೆ ಸಂಘಟನೆಯ ಬಲವರ್ಧನೆಯಿಂದ ಮಾತ್ರ ಸಾಧ್ಯ ಗ್ರಾಮ ಗ್ರಾಮಗಳಿಗೂ ತೆರಳಿ ಗ್ರಾಮ ಶಾಖೆಗಳನ್ನು ತೆರೆದು  ಸಂವಿಧಾನದ ಓದು ಕಾರ್ಯ ಕ್ರಮದ ಮೂಲಕ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಆಗ ಮಾತ್ರ ಅಂಬೇಡ್ಕರ್ ಅವರ ಋಣ ತೀರಿಸಿದ ಕೀರ್ತಿ ನಮ್ಮೆಲ್ಲರಿಗೂ ಸಲ್ಲುತ್ತ ದೆಂದರು.

ಪ್ರಜಾ ವಿಮೋಚನ ಚಳುವಳಿ ಸಂಘಟನಾ ಕಾರ್ಯ ಧ್ಯಕ್ಷೆ ನಾಗವೇಣಿ ಮಾತನಾಡಿ, ದೇವನಹಳ್ಳಿ ಮೀಸಲು ಕ್ಷೇತ್ರವಾದರೂ ದಲಿತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿ ಸುವ ಜವಾಬ್ದಾರಿ ಜನಪ್ರತಿನಿಧಿಗಳದ್ದಾಗಿದೆ ಆದರೆ ಅವರು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ದಲಿತರ ನೆನಪಾಗುತ್ತದೆ. ಹಣಬಲ ರಾಜಕೀಯ ಬಲ ಇರುವ ಇಂತಹ ಸಂದಿದ್ಗ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ರಕ್ಷಣೆ ಸಂವಿಧಾನದ ಅಶೋತ್ತರಗಳಿಂದ ಮಾತ್ರ ಸಾಧ್ಯ ದಲಿತ ಹೋರಾಟಗಾರರಾದ ಪ್ರೊಫೆಸರ್ ಕೃಷ್ಣಪ್ಪ ಅವರ ನಡೆದಂತ ಹಾದಿಯನ್ನು ಎಲ್ಲರೂ ಅರಿತು ಗ್ರಾಮೀಣ ಭಾಗದಲ್ಲಿನ ತಳ ಸಮುದಾಯಗಳ ಏಳಿಗೆಗೆ ಶ್ರಮಿಸಬೇಕೆಂದರು.

ಈ ಸಂಧರ್ಭದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಕೆಂಪಣ್ಣ ಪ್ರಧಾನ ಕಾರ್ಯದರ್ಶಿ ದೊಡ್ಡ ಸಾಗರಹಳ್ಳಿ , ಮುನಿಕೃಷ್ಣ, ಯಲಿಯೂರು ವೆಂಕಟಸುಬ್ಬಯ್ಯ  ರವಿಕುಮಾರ್ ಅಣೆಘಟ್ಟ ತಿಮ್ಮರಾಜು, ಎನ್ ಎಫ್ ಸಿ ಮುನಿರಾಜಪ್ಪ, ಮುದುಗುರ್ಕಿ  ಶಾಮ್ ಸುಂದರ್,  ವೆಂಕಟೇಶ್ ಸೇರಿದಂತೆ ಹಲವರು ಹಾಜರಿದ್ದರು.