ಹಿಂದೆ ಇದ್ದ ಕೆಲವು ಪದಾಧಿಕಾರಿಗಳನ್ನು ಹುದ್ದೆಯಿಂದ ಉಚ್ಚಾಟಿಸಲಾಗಿದೆ–ಸಿ. ಭವಾನಿ ಪ್ರಸಾದ್
ದೊಡ್ಡಬಳ್ಳಾಪುರ : ಸಂಘಟನೆಯಲ್ಲಿ ಈ ಹಿಂದೆ ಇದ್ದ ಹಲವು ಸದಸ್ಯರುಗಳನ್ನು ಉಚ್ಛಾಟಿಸಿ ಹುದ್ದೆಯಿಂದ ತೆರೆವುಗೊಳಿಸಲಾಗಿದೆ ಇನ್ನು ಮುಂದೆ ಉಚ್ಚಾಟಿತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಸಂಘಟನೆಯ ಲೋಗೋ, ಹೆಸರು ಮತ್ತು ಲೆಟರ್ ಹೆಡ್ಗಳನ್ನು ಈ ಸಂಘಟನೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದೆಂದು ಪ್ರಜಾ ವಿಮೋಚನಾ ಚಳವಳಿ-ಸಮತಾವಾದ(PVC-S) ನ ರಾಜ್ಯಾಧ್ಯಕ್ಷರಾದ ಸಿ.ಭವಾನಿ ಪ್ರಸಾದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದ 1 ರಿಂದ 7 ಸದಸ್ಯರಾದ ಯಡವನಹಳ್ಳಿ ಕೃಷ್ಣಪ್ಪ,ಪಿ.ಎಂ. ಮಲ್ಲಿಕಾರ್ಜುನಸ್ವಾಮಿ, ಮದ್ದೂರಪ್ಪು ,ವೆಂಕಟೇಶ್ , ಚಿನ್ನಪ್ಪ , ಜೆ.ದೇವರಾಜು, ಶ್ರಿನಿವಾಸ್ ಇವರುಗಳಿಗೆ ಈ ಪ್ರಜಾ ವಿಮೋಚನಾಚಳುವಳಿ -ಸಮತಾವಾದ(ಪಿ.ವಿ.ಸಿ.ಎಸ್)ನ ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದ್ದು ಈ ಉಚ್ಚಾಟಿತ ವ್ಯಕ್ತಿಗಳು ಹಾಗೂ ಇನ್ನಿತರೇ ಯಾರೇ ವ್ಯಕ್ತಿಗಳಾದರೂ ಯಾವುದೇ ಕಾರಣಕ್ಕೂ ಸಂಘಟನೆಯ ಲೋಗೋ, ಹೆಸರು ಮತ್ತು ಲೆಟರ್ ಹೆಡ್ಗಳನ್ನು ಈ ಸಂಘಟನೆಯ ಹೆಸರಿನಲ್ಲಿ ಬಳಸಬಾರದು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದೆಂದು ಒಂದು ವೇಳೆ ಕಾರ್ಯಕ್ರಮಗಳನ್ನು ಮಾಡಿದರೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ ಮಾತನಾಡಿ ಸ್ಥಳೀಯವಾಗಿ ನಮ್ಮ ಸಂಘಟನೆ ವತಿಯಿಂದ ಇಬ್ಬರು ರಾಜ್ಯ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದ್ದೇವೆ. ಇನ್ನು ಮುಂದೆ ಗ್ರಾಮ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಶಾಖೆಗಳನ್ನು ಸದರಿ ಕಾರ್ಯದರ್ಶಿಗಳು ಸ್ಥಾಪಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೌರವಅಧ್ಯಕ್ಷರಾದ ಕೆ ಎಸ್ ಸ್ವಾಮಿ, ರಾಜ್ಯಾಧ್ಯಕ್ಷರಾದ ಸಿ.ಭವಾನಿ ಪ್ರಸಾದ್,ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ, ರಾಜ್ಯ ಉಪಾಧ್ಯಕ್ಷ ಕುದುರೆಗೆರೆ ತಿಮ್ಮರಾಜು, ರಾಜ್ಯ ಪ್ರಧಾನಕಾರ್ಯದರ್ಶಿ ಚನ್ನಕೇಶವ, ಕಾರ್ಯದರ್ಶಿ ಮುನಿಕೃಷ್ಣ, ಖಜಾಂಚಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಪಿ ಸುರೇಂದ್ರ, ನಾಗರಾಜ್, ಮೋಹನ್ ಕುಮಾರ್, ಶ್ರೀನಿವಾಸ್, ನಾಗವೇಣಿ, ಮುನಿರತ್ನಮ್ಮ ಸೇರಿದಂತೆ ಹಲವರು ಹಾಜರಿದ್ದರು.