ತೇರಿನ ಬೀದಿ ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

ದೊಡ್ಡಬಳ್ಳಾಪುರ.. ನಗರದ ತೇರಿನಬೀದಿಯ ರಸ್ತೆ ಕಾಮಗಾರಿ ಆರಂಭಗೊಂಡು ಸುಮಾರು ತಿಂಗಳೇ ಕಳೆದಿವೆ ಆದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದೆಡೆ ಚರಂಡಿ ಕಾಮಗಾರಿಗಾಗಿ ಮೂರ್ನಾಲ್ಕು ತಿಂಗಳ ಕಾಲ ಸಾರ್ವಜನಿಕರು ಪರದಾಡಿದ್ದಾಯ್ತು. ಈಗ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು ಸ್ಥಳೀಯರಿಗೆ ಕಳೆದಐದಾರು ತಿಂಗಳಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಸಂಬಂಧ ಪಟ್ಟವರಿಗೆ ಸಾಕಷ್ಟು ಬಾರಿ ದೂರು ನೀಡಿ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೇಳಿಕೇಳಿ ಈ ರಸ್ತೆ ರಥ ಬೀದಿ ಎಂದೇ ಹೆಸರು ಪಡೆದಿದ್ದು, ಜೊತೆಗೆ ಈ ರಸ್ತೆಯಲ್ಲಿ ಹಲವಾರು ದೇವಾಲಯಗಳಿರುವುದು ವಿಶೇಷ. ದೊಡ್ಡಬಳ್ಳಾಪುರ ಐತಿಹಾಸಿಕ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಶ್ರೀ ಚಂದ್ರಮೌಳೆಶ್ವರ ದೇವಾಲಯಗಳು ಈ ಭಾಗಕ್ಕೆ ಸೇರಿದವಾಗಿದ್ದು ವರ್ಷಕ್ಕೊಮ್ಮೆ ಈ ಎರಡೂ ದೇವಾಲಯಗಳ ಜಾತ್ರೆ ತಾಲೂಕಿನಲ್ಲಿ ಪ್ರಸಿದ್ದಿ ಪಡೆದಿದ್ದು, ಸಾವಿರಾರು ಭಕ್ತರು ಸೇರುವ ಧಾರ್ಮಿಕ ಕಾರ್ಯಗಳು ಈ ರಥ ಬೀದಿಯಲ್ಲಿ ನಡೆಯುತ್ತವೆ. ಹಾಗಾಗಿ ಇಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ತುರ್ತಾಗಿ ಆಗಬೇಕಿದೆ. ಆಶ್ಚರ್ಯವೆಂದರೆ ಜಾತ್ರೆ ಸಂದರ್ಭದಲ್ಲಿ ಸಂತೆ ಹೊತ್ತಿಗೆ ಮೂರು ಮೊಳ ಎಂಬಂತೆ ತಾತ್ಕಾಲಿಕ ಕಾಮಗಾರಿ ನಡೆಸಿ ಜಾತ್ರೆ ಮುಗಿದ ನಂತರ ಇತ್ತ ತಿರುಗಿಯೂ ನೋಡದ ರಸ್ತೆ ಕಾಮಗಾರಿ ಗುತ್ತಿಗೆ ಧಾರನ ಬೇಜವಾಬ್ದಾರಿ ತನಕ್ಕೆ ಈಗಾಗಲೇ ಇಲ್ಲಿ ಅನೇಕ ಆಕಸ್ಮಿಕಗಳು ನಡೆದು ವಾಹನಸವಾರರು ಆಸ್ಪತ್ರೆ ಸೇರಿರುವ ಉದಾಹರಣೆಗಳು ಸಾಕಷ್ಟಿವೆ. ಸಾಲದ್ದಕ್ಕೆ ತೇರಿನ ಬೀದಿ ಒಳ್ಳೆಯ ವ್ಯಾಪಾರ ಕೇಂದ್ರ. ರಸ್ತೆ ಕಾಮಗಾರಿಯಿಂದಾಗಿ ಸುಮಾರು ದಿನಗಳಿಂದ ಬರೀ ದೂಳು, ಕಸ, ಮಳೆ ಬಂದರೆ ಕೆಸರು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಈ ಭಾಗದ ನಿವಾಸಿಗಳು ಹಾಗೂ ವ್ಯಾಪಾರಿಗಳು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದರು ಸಹಾ ಇದಕ್ಕೆ ಸಂಬಂದಿಸಿದ ಇಲಾಖೆಗಳು ಹಾಗೂ ಗುತ್ತಿಗೆದಾರರು ದಿವ್ಯ ನಿರ್ಲಕ್ಷ ತೋರಿಸುತ್ತಿರುವುದು ಕಂಡನೀಯ.
ಹೀಗೆ ಸಂಬಂಧ ಪಟ್ಟವರ ನಿರ್ಲಕ್ಷ ಖಂಡಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕನ್ನಡಪರ ಹೋರಾಟಗಾರರಾದ ಮಂಜು ಹಾಗೂ ವೆಂಕಿ ಮಾತನಾಡಿ ತೇರಿನಬೀದಿಯ ರಸ್ತೆ ಮೊದಲು ಉತ್ತಮ ರಸ್ತೆಯಾಗಿದ್ದು ಕಾಮಗಾರಿಯ ನೆಪದಲ್ಲಿ ರಸ್ತೆ ಹಾಳಾಗಿದ್ದು, ಚರಂಡಿ ಕಾಮಗಾರಿ ಹೆಸರಲ್ಲಿ ಕಳೆದ 6ತಿಂಗಳ ಹಿಂದೆ ಪ್ರಾರಂಭಗೊಂಡಿದ್ದು, ಕಾಮಗಾರಿ ತೆವಳುತ್ತ ಸಾಗಿದ್ದು ಈಗ ರಸ್ತೆ ಕಾಮಗಾರಿಯಿಂದ ಜನರು ನಿತ್ಯ ಪರದಾಡುವಂತಾಗಿದೆ. ಈ ರಸ್ತೆ ನೆಲಮಂಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ವಾಹನ ಸಂಚಾರ ದಟ್ಟನೆ ಹೆಚ್ಚಾಗಿದೆ. ಜೊತೆಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಗಾರ್ಮೆಂಟ್ಸ್ಗೆ ಹೋಗುವ ಮಹಿಳೆಯರು ದಿನನಿತ್ಯ ಪರದಾಡುವಂತಾಗಿದೆ. ಸಾಲದ್ದಕ್ಕೆ ಚರಂಡಿ ಕಾಮಗಾರಿ ಕಳಪೆಯಾಗಿದ್ದು ವಾಹನ ಸವಾರರಿಗೆ ಆಗಾಗ ಅಪಘಾತಗಳು ಎದುರಾಗಿತ್ತಿವೆ. ಈ ಅವ್ಯವಸ್ಥೆ ಬಗ್ಗೆ ಬಗ್ಗೆ ಸಂಬಂಧಪಟ್ಟ ಇಲಾಖೆ, ನಗರಸಭೆಪ್ರತಿನಿದಿಗಳಿಗೆ ಸಾಕಷ್ಟುಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಇದು ಹೀಗೆ ಮುಂದುವರೆದರೆ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.