ಬಿ. ಮುನೇಗೌಡರನ್ನು ಹುದ್ದೆಯಿಂದ ವಜಾಗೊಳಿಸಿ…. ಹರೀಶ್ ಗೌಡ
ದೊಡ್ಡಬಳ್ಳಾಪುರ: ಜಾತ್ಯತೀತ ಜನತಾದಳವನ್ನು ಸದೃಢ ಗೊಳಿಸುವ ಸಲುವಾಗಿ ಮಾಜಿ ಪ್ರಧಾನಿ ದೇವೇಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಹಾಗೂ ವರಿಷ್ಟರ ಬಗ್ಗೆ ಬೆಂಗಳೂರು ಗ್ರಾ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಅಮಾನತು ಮಾಡಬೇಕೆಂದು ರಾಜ್ಯ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಹರೀಶ್ ಗೌಡ ಮಾತನಾಡಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿತ್ತು. ಜಿಲ್ಲಾಧ್ಯಕ್ಷ ಮುನೇಗೌಡ ತಾಲೂಕಿಗೆ ಬಂದ ನಂತರ ಪಕ್ಷಕ್ಕೆ ಬಾರಿ ಹಿನ್ನಡೆಯಾಗಿದೆ.4ಬಾರಿ ದೊಡ್ಡಬಳ್ಳಾಪುರ ವಿಧಾನಸಭೆಗೆ ಸ್ಪರ್ದಿಸಿ ಸೋತ ಮುನೇಗೌಡ ಅದ್ರಲ್ಲೂ 2013ರಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬಹುದಾಗಿದ್ದ ಸಂದರ್ಭದಲ್ಲಿ ವರಿಷ್ಟರ ಮಾತನ್ನು ದಿಕ್ಕರಿಸಿ ಪಕ್ಷೇತರರಾಗಿ ಸ್ಪರ್ಧೆಸಿ ತಾವು ಸೋತದ್ದಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿ ಚೆನ್ನಗಪ್ಪ ರವರ ಸೋಲಿಗೆ ಕಾರಣರಾದರು. ಆದರೂ ಸಹ ಪಕ್ಷದ ವರಿಷ್ಟರು ಮುನೇಗೌಡರ ತಪ್ಪನ್ನು ಮನ್ನಿಸಿ ಮತ್ತೆ ಚುನಾವಣೆಗೆ ಸ್ಪರ್ದಿಸಲು ಬಿ. ಫಾರ್ಮ್ ನೀಡಿದ್ದರು. ಆದರೆ ತನ್ನ ದುರಹಂಕಾರಿ ವರ್ತನೆಯಿಂದ ಸುಮಾರು ವರ್ಷಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ್ದ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ತಾಲೂಕಿನ ಮುಖಂಡರನ್ನು ಕಡೆಗಣಿಸಿ ತಾವು ಸೋತಿದಲ್ಲದೆ ಪಕ್ಷವನ್ನು ಸೋಲಿಸಿದರು. ಇಷ್ಟೆಲ್ಲ ಆದ ನಂತರ ಮೈತ್ರಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಅವಹೇಳಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದನ್ನು ತಾಲೂಕಿನ ನಿಷ್ಠಾವಂತರು ಖಂಡಿಸಿ ಆಕ್ರೋಶ ಗೊಂಡಿದ್ದಾರೆ. ಆದ್ದರಿಂದ ಜಿಲ್ಲಾಧ್ಯಕ್ಷ ಮುನೇಗೌಡರನ್ನು ಅಮಾನತು ಮಾಡಬೇಕೆಂದು ಹೇಳಿದ ಹರೀಶ್ ಗೌಡರು, ಸಿ. ಎಂ. ಸಿದ್ದರಾಮಯ್ಯ, ಮಾಜಿ ಸಿ. ಎಂ. ಗಳಾದ ಬೊಮ್ಮಾಯಿ, ಯಡಿಯೂರಪ್ಪ ಮುಂತಾದವರು ದೇವೇಗೌಡರನ್ನು ಹಾಗೂ ಕುಮಾರಣ್ಣನನ್ನು ಎಂದಿಗೂ ಅಗೌರವದಿಂದ ಕಂಡಿಲ್ಲ. ಆದರೆ 3ಬಾರಿ ಬಿ. ಫಾರ್ಮ್ ಪಡೆದ ಮುನೇಗೌಡರು ಪಕ್ಷ ಹಾಗೂ ವರಿಷ್ಟರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಅವರ ದೋರಣೆ ಹೀಗೆ ಮುಂದುವರಿದರೆ ಜಿಲ್ಲೆಯದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
2013ರಲ್ಲಿ ಮುನೇಗೌಡ ತಾಲೂಕಿಗೆ ಯಾವುದೇ ಕೊಡುಗೆ ನೀಡಿರಲಿಲ್ಲ. ಆದರೂ ಕೂಡಾ ವರಿಷ್ಟರು ಟಿಕೆಟ್ ಕೊಟ್ಟರು ಎಂಬ ಕಾರಣಕ್ಕೆ ಪಕ್ಷದ ಹಿತದೃಷ್ಟಿಯಿಂದ ತಾಲೂಕಿನ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಕೆಲಸ ಮಾಡಿದರು. ವರಿಷ್ಟರ ತೀರ್ಮಾನದ ಬಗ್ಗೆ ಯಾರು ಪ್ರಶ್ನೆ ಮಾಡಲಿಲ್ಲ. ತನ್ನ ಸ್ವಯಂಕೃತ ಅಪರಾಧದಿಂದ ಮುನೇಗೌಡರು ಸೋತರು. ಪಕ್ಷವನ್ನು ಟೀಕಿಸಿರುವ ಮುನೇಗೌಡರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಅಷ್ಟೇ ಅಲ್ಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದ ಹರೀಶ್ ಗೌಡರು ಇದೆ ಸಂದರ್ಭದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿದರು.
ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕುರುವಿಗೆರೆ ನರಸಿಂಹಯ್ಯ, ಬಮುಲ್ ಮಾಜಿ ಸದಸ್ಯರಾದ ಹಾಡೋನಹಳ್ಳಿ ಅಪ್ಪಯ್ಯಣ್ಣ, ನಗರಸಬೇಸದಸ್ಯ ತಾ. ನ. ಪ್ರಭುದೇವ್, ಸಾರಥಿ ಸತ್ಯಪ್ರಕಾಶ್, ಬೈರೇಗೌಡ, ಜಗನ್ನಾಥಚಾರ್, ನಗರ ಸಭೆ ಮಾಜಿ ಸದಸ್ಯ ತಳವಾರ್ ನಾಗರಾಜು, ಆನಂದ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.