• ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ

    ಸಂತೇಮರಳ್ಳಿ: ಸಮೀಪದ ಹೊಂಗನೂರು ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು.

    ಒಂದು ವರ್ಷದಲ್ಲಿ ಸಂಘವು ನಡೆಸಿರುವ ವ್ಯವಹಾರ ಲೆಕ್ಕಚಾರವನ್ನು ಮಂಡಿಸಲಾಯಿತು.
    ಸಂಘದಿಂದ ಸದಸ್ಯರಿಗೆ ಸಾಲ ಸೌಲಭ್ಯ, ವಿಮೆ, ಹಾರಾಜು ಮುಂತಾದ ಲೆಕ್ಕಾಚಾರದ ವ್ಯವಹಾರವನ್ನು ಸಂಘದ ಕಾರ್ಯದರ್ಶಿ ಮಹೇಶ ಸಭೆಯಲ್ಲಿ ಮಂಡಿಸಿದರು.

    ಸಂಘದ ಎಲ್ಲಾ ವ್ಯವಹಾರಗಳ ಮೂಲಕ ಸಂಘವು ಈವರ್ಷದ 2022-23ನೇ ಸಾಲಿನಲ್ಲಿ 1ಲಕ್ಷದ 24ಸಾವಿರರೂಗಳ ಲಾಭಾಂಶ ಪಡೆದಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಂಘ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಶ್ರೀನಿವಾಸನಾಯಕ ನಿರ್ದೇಶಕರಾದ ಕೃಷ್ಣಯ್ಯ, ದೇವಾಜಮ್ಮ, ಜಿಯಾವುಲ್ಲಾಖಾನ್, ವೆಂಕಟರಾಮು,ರೇಚಣ್ಣ, ಬಿಳಿಗಿರಿರಂಗನಾಯಕ, ನಾಗಮಣಿ, ನಾಗರಾಜು ಹಾಗೂ ಸಂಘದ ಸರ್ವಸದಸ್ಯರು ಸಭೆಯಲ್ಲಿ ಭಾಗವಹಿಸಿದರು. ‌

  • ವರದಿ ಆರ್ ಉಮೇಶ್