ಶ್ರೀ ರಾಮ ಸೇನೆಯನ್ನು ನಿಷೇದಿಸಿ–ಹರಿರಾಮ್
ದೊಡ್ಡಬಳ್ಳಾಪುರ: ದರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡುತ್ತಿರುವ ಹಾಗು ಗೋವುಗಳ ರಕ್ಷಣೆ ನೆಪವನ್ನೆ ಬಂಡವಾಳ ಮಾಡಿಕೊಂಡು ಧಂದೆ ನೆಡೆಸುತ್ತಿರುವ ಶ್ರೀರಾಮ ಸೇನೆಯನ್ನು ನಿಷೇದಿಸಬೇಕೆಂದು ದಲಿತ ಹೋರಾಟಗಾರ ವಕೀಲ ಹರಿ ರಾಮ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರಿರಾಮ್ ಬಾನುವಾರ ದೊಡ್ಡಬಳ್ಳಾಪುರದಲ್ಲಿ ನೆಡೆದ ಗೋ ಮಾಂಸ ಸಾಗಾಟ ಪ್ರಕರಣದಲ್ಲಿ ಶ್ರೀರಾಮ ಸೇನೆಯವರೆಂದು ಹೇಳಿಕೊಂಡ ಕೆಲವು ಮಂದಿ ದನದ ಮಾಂಸ ಸಾಗಿಸುತ್ತಿದ್ದ ಮುಸ್ಲಿಂ ಯುವಕರ ಮೇಲೆ ಹಲ್ಲೆ ನೆಡೆಸಿ ಕಾರಿಗೆ ಬೆಂಕಿ ಹಚ್ಚಿ ದಾಂದಲೆ ನೆಡೆಸಿದ್ದಾರೆ,ಇದನ್ನು ಶ್ರೀರಾಮ ಸೇನೆಯ ಸಂಸ್ಥಾಪಕನೆನಿಸಿಕೊಂಡಿರುವ ಪ್ರಮೋದ್ ಮುಥಾಲಿಕ್ ದಾಂದಲೆಯನ್ನು ಸಮರ್ಥಿಸಿಕೊಂಡರುವುದು ನಾಚಿಕೆ ಗೇಡಿನ ಸಂಗತಿ ಅದರಲ್ಲೂ ಶ್ರೀ ರಾಮ ಸೇನೆಯ ಹೆಸರಿನಲ್ಲಿ ಬಂದಿತವಾಗಿರುವ ಆರೋಪಿಗಳು ಎಲ್ಲತಲರೂ ಶೂದ್ರ,ದಲಿತ ಸಮುದಾಯದವರೇ ಆಗಿದ್ದಾರೆ.ಧರ್ಮದ ಹೆಸರಿನಲ್ಲಿ ಯುವಕರನ್ನು ಅದರಲ್ಲು ಬಹು ಮುಖ್ಯವಾಗಿ ಹಿಂದುಳಿದ,ದಲಿತ ಸಮುದಾಯಗಳ ಯುವಕರನ್ನು ಪ್ರಚೋದಿಸಿ ಮುಸ್ಲಿಂ ಸಮುದಾಯದ ವಿರುದ್ದ ಬೆಂಕಿ ಹಚ್ಚುವ ಕೆಲಸ ಬಿ ಜೆ ಪಿ,ಅರ್ ಎಸ್ ಎಸ್,ಭಜರಂಗದಳ,ವಿ ಹಿಂ ಪ ಮುಂತಾದ ಕೋಮುವಾದಿಗಳ ಸಂಘಟನೆಗಳಿಂದ ನೆಡೆಯುತ್ತಿದೆ.
ಈ ಕೋಮುವಾಗಳ ಪ್ರಚೋದನೆಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ನಮ್ಮ ಶೂದ್ರ ಸಮುದಾಯದ ಯುವಕರೆ,ಆದರೆ ಈ ಸಂಘಟನೆಗಳ ನಾಯಕರೆನಿಸಿಕೊಂಡವರು ತಮ್ಮ ಕುಟುಂಬಗಳ,ಸಮುದಾಯಗಳ ಯುವಕರನ್ನು ಬಳಸಿಕೊಳ್ಳದೆ ಶೋಷಿತ ವರ್ಗದವರನ್ಮು ಬಳಸಿಕೊಂಡು ತಮ್ಮ ಸ್ವಹಿತ ಸಾದಿಸಿಕೊಳ್ಳುತ್ತಿದ್ದಾರೆ.
ಬಹುಶಃ ಇದನ್ನು ನಮ್ಮ ಶೋಷಿತ,ಶೂದ್ರ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು ಎಂದ ಹರಿ ರಾಮ್ ಬಿ ಜೆ ಪಿ ಯ ಭ್ರಷ್ಟತೆಯನ್ನು,ಕೋಮುವಾದವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಚುನಾವಣೆಯನ್ನು ಗೆದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವೆಲ್ಲವನ್ನು ಮರೆತಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಿ ಜೆ ಪಿ ಅಂಗ ಸಂಸ್ಥೆಗಳು ಧರ್ಮದ ಹೆಸರಿನಲ್ಲಿ ನೆಡೆಸಿದ ನಾಲ್ಕಾರು ದಾಂದಲೆ ಪ್ರಕರಣಗಳು ದಾಖಲಾಗಿವೆ.ಆದರೆ ಅವುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಈ ನೀಚ ಸರ್ಕಾರಕ್ಕೆ ಆಗುತ್ತಿಲ್ಲ.ಅದರಲ್ಲು ಈ ಸಂಘಟನೆಗಳು ಗೋ ಮಾಂಸದ ಹೆಸರಿನಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯದಗಳನ್ನೆ ಟಾರ್ಗೆಟ್ ಮಾಡುತ್ತಾ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ ಇವಕ್ಕೆ ಕಡಿವಾಣ ಹಾಕುತ್ತೇವೆಂದು ಹೇಳಿಕೊಂಡು ಬಂದಿದ್ದ ಸಿದ್ದು ಡಿ.ಕೆ ಸರ್ಕಾರ ತಾವುದೇ ಕ್ರಮ ಜರುಗಿಸಿಲ್ಲ ಕಾಂಗ್ರೆಸ್ ಪಕ್ಷಕ್ಕೆ ದಲಿತ ಮುಸ್ಲಿಂ ಮತಗಳು ಮಾತ್ರ ಬೇಕು ಆದರೆ ಆ ಸಮುದಾಯದ ರಕ್ಷಣೆ ಮಾತ್ರ ಬೇಡ ಎಂದರೆ ಹೇಗೆ ಸಿದ್ದು ಡಿ ಕೆ ಪರಮೇಶ್ವರ್ ರಂತಹ ಡೋಂಗಿ ಜಾತ್ಯಾತೀತ ವಾದಿಗಳು ತಮ್ಮ ಅಸಲಿ ಮುಖವನ್ನು ತೋರಿಸಿದ್ದಾರೆಂದು ಸರ್ಕಾರದ ವಿರುದ್ಧ ಹರಿರಾಮ್ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖುಂಡ ಸಾಮಾಜಿಕ ಚಿಂತಕ ಬಾಸ್ಕರ್ ಪ್ರಸಾದ್ ಮಾತನಾಡಿ ದನದ ಸಾಗಾಟದ ವಿಚಾರದಲ್ಲಿ ಶ್ರೀರಾಮ ಸೇನೆಯ ಪುಂಡರು ದಾಂದಲೆ ನೆಡೆಸಲು ಇವರಿಗೆ ಅನುಮತಿ ಕೊಟ್ಟವರ್ಯಾರು,ಗೋ ಮಾಂಸ ಸೇವನೆ ನಮ್ಮ ಹಕ್ಕು ಅದನ್ನು ಪ್ರಶ್ನಿಸಲು ಈ ಕೋಮುವಾದಿಗಳಿಗೆ ಏನು ಹಕ್ಕಿದೆ.ಕೇಂದ್ರ ಸರ್ಕಾರದ ನೆರಳಲ್ಲೆ ಗೋ ಮಾಂಸ ವಿದೇಶಕ್ಕೆ ರಪ್ತು ಕಾರ್ಯ ನೆಡೆಯುತ್ತಿದೆ ಇದರಿಂದ ಕೋಟ್ಯಾಂತರ ರೂಪಾಯಿ ಬಿ ಜೆ ಪಿ ಪಕ್ಷಕ್ಕೆ ದೇಣಿಗೆ ಬರುತ್ತದೆ. ಅದನ್ನು ಪ್ರಶ್ನೆ ಮಾಡಲು ಯಾವುದೇ ಯೋಗ್ಯತೆ ಇಲ್ಲದ ಆರ್.ಎಸ್.ಎಸ್,ಭಜರಂಗದಳ ವಿ ಹಿಂ ಪ ಶ್ರೀ ರಾಮ ಸೇನೆಯಂತ ಬಿ ಜೆ ಪಿ ಪ್ರಾಯೋಜಿತ ಕೋಮುವಾದಿ ಸಂಘಟನೆಗಳು ಅಮಾಯಕ ಮುಸ್ಲಿಂ ಸಮುದಾಯದ ಮೇಲೆ ದಾಂದಲೆ ಮೂಲಕ ಅನೈತಿಕ ಪೋಲಿಸ್ ಗಿರಿ ನೆಡೆಸುತ್ತಿದೆ.ಇದನ್ನು ಹತ್ತಿಕ್ಕಬೇಕಾದ ಸಿದ್ದು ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುತ್ತೇವೆಂದು ಹೇಳಿಕೊಂಡ ಸಿದ್ದರಾಮಯ್ಯ ತಮ್ಮ ಅಯೋಗ್ಯತನವನ್ನು ಪ್ರದರ್ಶಿಸಿದ್ದಾರೆ.ಅದರಲ್ಲೂ ಕಾಂಗ್ರೆಸ್ ಸರ್ಕಾರ ಬಂದಮೇಲೆ ಕೋಮುವಾದಿಗಳ ದೌರ್ಜನ್ಯ,ದಬ್ಬಾಳಿಕೆ, ಪುಂಡಾಟ ಹೆಚ್ಚಾಗಿದೆ.ಈ ಸರ್ಕಾರದಲ್ಲು ಕೂಡ ದಲಿತರಿಗೆ ಹಾಗು ಮುಸ್ಲಿಂ ರಿಗೆ ರಕ್ಷಣೆ ಇಲ್ಲ.ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಷಗಳು ಶೋಷಿತ ವರ್ಗದವರ ವಿರೋದಿಗಳಾಗಿವೆ ಎಂದ ಬಾಸ್ಕರ್ ಪ್ರಸಾದ್ ಗೋ ಮಾಂಸ ಸಾಗಾಟ ಪ್ರಕರಣದಲ್ಲಿ ಶ್ರೀ ರಾಮಸೇನೆಯ ಪುಂಡರನ್ನು ಬಂದಿಸುವಲ್ಲಿ ಪೋಲಿಸರು ಕಾರ್ಯಕ್ಷಮತೆ ತೋರಿದ್ದಾರೆ.ಆದರೆ ಈ ಪುಂಡರ ವಿರುದ್ದ ಉಘ್ರ ಕ್ರಮ ಕೈಗೊಳ್ಳಬೇಕಿದೆ ಧರ್ಮದ ಹೆಸರಿನಲ್ಲಿ ನೆಡೆಯುತ್ತಿರುವ ದಾಂದಲೆ ದರೋಡೆ ಕೃತ್ಯಗಳು ನೆಡೆಯದಂತೆ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆ ಈ ಬಗ್ಗೆ ಡಿ ವೈ ಎಸ್ ಪಿ ರವರಿಗೆ ದೂರನ್ನು ಕೊಡಲಿದ್ದೇವೆ.
ದೊಡ್ಡಬಳ್ಳಾಪುರ ದಲ್ಲಿ ಶಾಂತಿಗೆ ಭಂಗ ತರುವ ಕೋಮುವಾದಿ ಗಳ ವಿರುದ್ದ ಹೋರಾಟ ನೆಡೆಸಲು ನಾವು ಸಿದ್ದರಿದ್ದೇವೆ ಜೊತೆಗೆ ಸರ್ಕಾರಕ್ಕು ಕೂಡ ಸೂಕ್ತ ಎಚ್ಚರಿಕೆ ಕೊಡುತ್ತಿದ್ದೇವೆಂದು ಬಾಸ್ಕರ್ ಪ್ರಸಾದ್ ಹೇಳಿದರು.