ದೊಡ್ಡಬಳ್ಳಾಪುರ ನಗರಸಭೆ ಬಡ್ಜೆಟ್ ಪೂರ್ವಬಾವಿ ಸಭೆ

ದೊಡ್ಡಬಳ್ಳಾಪುರ:ನಗರಸಭೆಯ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಪ್ರತಿಧ್ವನಿಸಿದ ಜ್ವಲಂತ ಸಮಸ್ಯೆಗಳ ಸರಮಾಲೆ/ ಸಮಂಜಸ ಉತ್ತರ ನೀಡದ ನಗರಸಭೆಯ ಅಧಿಕಾರಿಗಳು.

ದೊಡ್ಡಬಳ್ಳಾಪುರ ನಗರದ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ಸೋಮವಾರ ಬೆಳಿಗ್ಗೆ 2024-2025 ನೇ ಸಾಲಿನ ಆಯ-ವ್ಯಯ ಸಾರ್ವಜನಿಕ ಸಮಾಲೋಚನಾ ಸಭೆಯನ್ನನು ಆಯೋಜಿಸಲಾಗಿತ್ತು.

ನಗರಸಭಾ ಆಯುಕ್ತ ಪರಮೇಶ್ವರ ಹಾಗೂ ಅದ್ಯಕ್ಷೆ ಎಸ್.ಸುಧಾರಾಣಿ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನಗರಸಭೆಯ ಕೆಲವು ಸದಸ್ಯರು ಮಾತ್ರವೇ ಭಾಗವಹಿಸಿದ್ದು, ನಗರದ ವಿವಿಧ ವಿಚಾರವಾಗಿ ಈ ಹಿಂದೆ ನೀಡಿದಂತಹ ಯಾವುದೇ ಸಮಸ್ಯೆಗಳಿಗೂ ನಗರಸಭೆಯವತಿಯಿಂದ ಸೂಕ್ತ ಪರಿಹಾರ ಅಥವಾ ಉತ್ತರ ನೀಡದೇ ಕ್ರಮವಹಿಸಲಾಗುವುದು ಹಾಗೂ ಕ್ರಮಕೈಗೊಳ್ಳಲಾಗುವುದು ಎಂಬ ಉತ್ತರದಿಂದ ಬೇಸರ ವ್ಯಕ್ತಪಡಿಸುವ ಮೂಲಕ ತಮ್ಮ ವಿರೋಧ ಹೊರಹಾಕಿದ ಸಂಘ ಸಂಸ್ಥೆಗಳ ಮುಖಂಡರುಗಳು ಇದೊಂದು ಕಾಟಾಚಾರದ ಪೂರ್ವ ಭಾವಿ ಸಭೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಪರಿಸರ, ಗಿಡನೇಡುವ ಬಗ್ಗೆ, ಮಳೆ ನೀರು ಸಂಗ್ರಹಣೆ, ರಸ್ತೆ, ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ,ತ್ಯಾಜ್ಯ ಸಂಗ್ರಹ, ಕೋಳಿ ತ್ಯಾಜ್ಯ ಸಮಸ್ಯೆ,ಪ್ಲಾಸ್ಟಿಕ್ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಬಳಿ ಧೂಮಪಾನ ನಿಷೇಧದ ಬಗ್ಗೆ, ಸಿಸಿ ಕ್ಯಾಮರಾಗಳ ಅಳವಡಿಕೆ ಸೇರಿದಂತೆ ವಿಚಾರಗಳಲ್ಲಿ ಯಾವುದೇ ಸೂಕ್ತ ಮಾಹಿತಿ ನೀಡದಿರುವುದು ವಿಪರ್ಯಾಸವೆಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಇದೊಂದು ಕಣ್ಣೋರೆಸುವ ಸಭೆ ಎಂದರು. ಒಟ್ಟಾರೆ ಯಾವುದೇ ಪ್ರಶ್ನೆಗಳಿಗೂ ಉತ್ತರ ಇಲ್ಲದ ಪೂರ್ವ ಭಾವಿಸಭೆ ಇದಾಗಿತ್ತು ಎಂದು ಸಂಘಸಂಸ್ಥೆಗಳ ಮುಖಂಡರುಗಳು ಆರೋಪಿಸಿದರು.

ಇದೇ ಸಮಯದಲ್ಲಿ ಹಲವಾರು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ತಾ.ಕಸಾಪ ನಿಕಟಪೂರ್ವ ಅದ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿದ ಅವರು ಡಾ.ಅನಿಬೆಸೆಂಟ್ ಪಾರ್ಕ್, ನೀರಿನ ಸರಬರಾಜಿನ ಹಾಗೂ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಬಗ್ಗೆ ಹಾಗೂ ಕಸ ಸಂಗ್ರಹಣೆ, ಪಾರ್ಕಿಂಗ್ ಅವ್ಯವಸ್ಥೆ, ನಾಯಿಗಳ ಹಾವಳಿ ಹಾಗೂ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯ ವಿಚಾರದಲ್ಲಿ ಸೂಕ್ತ ಕ್ರಮಜರುಗಿಸದಿರುವ ಬಗ್ಗೆ ಪ್ರಸ್ತಾಪಿಸಿದರು.

ಈ ಸಭೆಯಲ್ಲಿ ಹಿರಿಯ ನಗರಸಭಾ ಸದಸ್ಯ ತ.ನ.ಪ್ರಭುದೇವ್, ಸ್ಥಾಯೀ ಸಮಿತಿ ಅದ್ಯಕ್ಷ ವಿ.ಎಸ್ .ರವಿಕುಮಾರ್, ಉಪಾಧ್ಯಕ್ಷೆ ಫರ್ಹಾನತಾಜ್, ಕನ್ನಡ ಪಕ್ಷದ ತಾಲೂಕು ಅದ್ಯಕ್ಷ ವೆಂಕಟೇಶ್, ಹಿರಿಯ ಮುಖಂಡ ಸಂಜೀವ್ ನಾಯ್ಕ್, ಕರವೆ ಕನ್ನಡಿಗರ ಬಣ ಸಂಸ್ಥಾಪಕ ಬಿ.ಎಸ್. ಚಂದ್ರಶೇಖರ್, ಡಾ.ಶಿವರಾಜ್ ಕುಮಾರ್ ಸೇನೆ ಅದ್ಯಕ್ಷ ರಮೇಶ್, ತಾ.ಕಾರ್ಯ ನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗಂಗರಾಜು ಶಿರವಾರ, ನಗರಸಭೆಯ ಮುಖ್ಯ ಲೆಕ್ಕಾಧಿಕಾರಿ ನಂದೀಶ್, ಅಭಿಯಂತರರಾದ ಈರಣ್ಣ, ರಾಮೇಗೌಡ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.