ಅಂಡರ್ ಪಾಸ್ ನಿರ್ಮಿಸಲು ಒತ್ತಾಹಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು.
ದೊಡ್ಡಬಳ್ಳಾಪುರ : ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನರು ಸಂಚಾರಿಸುವ ರಸ್ತೆ, 40 ಗ್ರಾಮಗಳಿಗೆ ಸಂರ್ಪಕಿಸುವ ರಸ್ತೆ, ಈ ರಸ್ತೆಗೆ ಅಡ್ಡವಾಗಿ ರಾಷ್ಟ್ರೀಯ ಹೆದ್ದಾರಿ 248 ಹಾದು ಹೋಗಿದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಏಕಾಏಕಿ ರಸ್ತೆಯನ್ನ ಬಂದ್ ಮಾಡಿದೆ, ಇದರಿಂದ ಕೆರಳಿದ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ದಾಬಸ್ ಪೇಟೆ- ಹೊಸೂರು ರಾಷ್ಟ್ರೀಯ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿದ್ದು, ನಗರದಲ್ಲಿನ ವಾಹನ ದಟ್ಟನೆ ನಿಯಂತ್ರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗಿದೆ, ಇದೇ ರಸ್ತೆ ದೊಡ್ಡಬಳ್ಳಾಪುರ- ಹೆಸರಘಟ್ಟ ರಸ್ತೆಯ ಮೇಲೆ ಹಾದು ಹೋಗಿದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಈ ರಸ್ತೆಯನ್ನ ಏಕಾಏಕಿ ಬಂದ್ ಮಾಡಿದ್ದಾರೆ, ರಸ್ತೆ ಬಂದ್ ಮಾಡಿದ್ದರಿಂದ 40 ಗ್ರಾಮಗಳ ಜನರಿಗೆ ಸಮಸ್ಯೆಯಾಗಿದ್ದು, ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು.
ಹೊರವರ್ತುಲ ರಸ್ತೆ ಯೋಜನೆ ಪ್ರಾರಂಭವಾದ್ದಾಗ, ವಿವೇಕಾನಂದ ನಗರದ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ಲಾನ್ ಇತ್ತು, ಆದರೆ ಇದೇ ಸ್ಥಳದಲ್ಲಿ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಿಕೊಂಡಿರುವ ಕೆಲವರು ಅಂಡರ್ ಪಾಸ್ ನಿರ್ಮಾಣವಾಗದಂತೆ ಸ್ಟೇ ತಂದಿದ್ದಾರೆ, ಅಂಡರ್ ಪಾಸ್ ನಿರ್ಮಾಣವಾಗದೆ ಹೆದ್ದಾರಿ ಪ್ರಾರಂಭವಾಗಿದೆ, ಹೆದ್ದಾರಿಯಲ್ಲಿನ ವಾಹನಗಳ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದೆ, ಇದರಿಂದ ಸಮಸ್ಯೆ ಅನುಭವಿಸುತ್ತಿರುವ 40 ಗ್ರಾಮಗಳ ಜನರು, ಅಂಡರ್ ಪಾಸ್ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಪ್ರತಿಭಟನಾಕಾರರು ನೀಡಿದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಆದಿತ್ಯ ನಾಗೇಶ್ ಚಿಕ್ಕತುಮಕೂರು ಗ್ರಾಮ ಹುಟ್ಟಿನಿಂದ ಇದೇ ರಸ್ತೆಯನ್ನ ಸಂಚಾರಕ್ಕೆ ಬಳಸುತ್ತಿದ್ದೇವೆ, ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯನವರ ಪ್ರಯತ್ನದಿಂದ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿತು, ಆದರೆ ಈ ಸ್ಥಳದಲ್ಲಿ ಸರ್ಕಾರಿ ಗೋಮಾಳವನ್ನ ಒತ್ತುವರಿ ಮಾಡಿಕೊಂಡಿರುವ ಕೆಲವರು ಅಂಡರ್ ಪಾಸ್ ನಿರ್ಮಾಣವಾಗದಂತೆ ಪಿತೂರಿ ನಡೆಸಿದ್ದಾರೆ. ಚುನಾವಣಾ ಸಮಯದಲ್ಲಿ ಹೋರಾಟ ಬೇಡ ಎಂದು ಕೆಲವರು ಹೇಳಿದರು ಆದರೆ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಚುನಾವಣೆ ಬಹಿಷ್ಕಾರ ಮಾಡಲು ಸಹ ನಾವು ಹಿಂಜರಿಯುವುದಿಲ್ಲ ಎಂದರು.
ಸ್ಥಳೀಯ ಮುಖಂಡರಾದ ರಂಗರಾಜು ಮಾತನಾಡಿ ಇದೇ ರಸ್ತೆಯ ಮೂಲಕ ರೈತರು ತಕಾರಿಯನ್ನ, ವಿದ್ಯಾರ್ಥಿಗಳು ಶಾಲಾ ಕಾಲೇಜ್ ಗಳಿಗೆ ಹೋಗಲು ಬಳಸುತ್ತಿದ್ದಾರೆ, ಅಲ್ಲದೆ ಈ ರಸ್ತೆಯಲ್ಲಿ ಮುಕ್ತಿಧಾನ ಇದ್ದು, ಪ್ರತಿದಿನ ನಾಲ್ದೈದು ಶವಗಳ ದಹನ ಕ್ರಿಯೆ ನಡೆಯುತ್ತಿದೆ, ನಗರದಿಂದ ಅಂತ್ಯ ಸಂಸ್ಕಾರಕ್ಕೆ ಬರುವ ಜನರು ಸುತ್ತು ಬಳಸಿ ಮುಕ್ತಿಧಾಮಕ್ಕೆ ಬರ ಬೇಕಿದೆ, ಅಂಡರ್ ಪಾಸ್ ನಿರ್ಮಾಣ ಮಾಡಿದಾರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು
ಬಮೂಲ್ ನಿರ್ದೇಶಕರಾದ ಬಿ.ಸಿ.ಆನಂದ್ ಕುಮಾರ್ ಮಾತನಾಡಿ ಕೆಲವು ಕಿಡಿಗೇಡಿಗಳು ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದಿಕ್ಕು ತಪ್ಪಿಸಿದ್ದಾರೆ, ಆದರೆ ಅಂಡರ್ ನಿರ್ಮಾಣವಾದರೆ ಮಾತ್ರ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವಸಂತ್ ಕುಮಾರ್, ಸತೀಶ್, ಕೆಂಪಣ್ಣ, ಸಂದೇಶ್ ಸೇರಿದಂತೆ ಹಲವಾತರೈತರು ಭಾಗವಹಿಸಿದ್ದರು.