ಸಚಿವ ಕೆ.ಹೆಚ್.ಮುನಿಯಪ್ಪ ವಿರುಧ್ಧ ಅವಹೇಳಕಾರಿ ಹೇಳಿಕೆ ಖಂಡಿಸಿ ಮಾದಿಗ ಸಮುದಾಯ ಪ್ರತಿಭಟನೆ.

ದೊಡ್ಡಬಳ್ಳಾಪುರ :ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯ ಮುಖಂಡರು, ಕೆ.ಹೆಚ್. ಮುನಿಯಪ್ಪ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ನಸೀರ್ ಅಹಮ್ಮದ್ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು

ಮಾದಿಗ ಸಮುದಾಯ ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕೆ.ಹೆಚ್. ಮುನಿಯಪ್ಪ 7 ಬಾರಿ ಸಂಸದರಿಗೆ ಅಯ್ಕೆಯಾದವರು, 10 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ರಾಜಕೀಯ ಮುತ್ಸದಿ ಅವರು, ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಕೀಳು ಅಭಿರುಚಿಯನ್ನ ವ್ಯಕ್ತಪಡಿಸಿದ್ದಾರೆ, ಇದು ಮಾದಿಗ ಸಮುದಾಯಕ್ಕೆ ಮಾಡಿದ ಅವಮಾನ , ಅವರು ಎಂದು ದ್ವೇಷ ರಾಜಕಾರಣ ಮಾಡಿಲ್ಲ ಎಲ್ಲರ ಮನಸ್ಸು ಗೆದ್ದಿದ್ದಾರೆ.

ಕೋಲಾರದಲ್ಲಿ ಷಡಂತ್ರ ನಡೆಸಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದವರು ಇಂದು ಅವರ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ , ಅವರ ವಿರುದ್ಧದ ಷಡ್ಯಂತ್ರ ಸತ್ಯ ಶೋಧನ ಸಮಿತಿಯಿಂದ ಬಹಿರಂಗವಾಗಿದೆ, ದೆಹಲಿ ಹೈಕಮಾಂಡ್ ಚಿಕ್ಕಪೆದ್ದಣ್ಣನವರಿಗೆ ಟಿಕೆಟ್ ಫೈನಲ್ ಮಾಡಿತ್ತು, ಇದರಿಂದ ಬೇಸತ್ತು ಹೇಳಿಕೆ ಈ ನೀಡಿದ್ದಾರೆ, ತಕ್ಷಣವೇ ಅವರನ್ನು ವಜಾ ಮಾಡಬೇಕು, ಆಗ್ರಹಿಸಿದರು

ವಕೀಲರಾದ ಆರ್.ವಿ .ಮಹೇಶ್ ಮಾತನಾಡಿ ಕರ್ನಾಟಕದಲ್ಲಿ 7 ಬಾರಿ ಗೆದ್ದಿರುವ ಸಂಸದರು ಯಾರಾದ್ರು ಇದ್ದರೇ ಅವರು ಕೆ.ಹೆಚ್ ಮುನಿಯಪ್ಪ ಮಾತ್ರ , ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿಸಾರ್ ಅಹಮ್ಮದ್ ವಿರುಧ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಮಾದಿಗ ಸಮುದಾಯ ಮುಖಂಡರಾದ ಅಂಜನಮೂರ್ತಿ, ರಾಮು ನೇರಳೆಘಟ್ಟ, ನರೇಂದ್ರ, ಮನು, ನಂದಿಗುಂದ ಮೈಲಾರಪ್ಪ, ಗಂಗರಾಜು, ನಾಗದೇನಹಳ್ಳಿ ಮಂಜು, ಕೆಂಪಣ್ಣ, ಕಚೇರಿಪಾಳ್ಯದ ಶಿವಶಂಕರ್, ಕಲ್ಲುಕೋಟೆ ನಾಗರಾಜು ಇದ್ದರು