ಲ್ಯಾಂಕೋ ಟೋಲ್ ಚೆಕ್ ಪೋಸ್ಟಿನಲ್ಲಿ ಬಂದೂಕು ,ಐದು ಗುಂಡುಗಳು ಪತ್ತೆ…!
ನೆಲಮಂಗಲ:ನೆಲಮಂಗಲದ ಲ್ಯಾಂಕೋ ಟೋಲ್ ಸಮೀಪದ ಚೆಕ್ ಪೋಸ್ಟ್ ಬಳಿ ಕಾರು ತಪಾಸಣೆ ವೇಳೆ ಬಂದೂಕು ಮತ್ತು ಐದು ಗುಂಡುಗಳು ಪತ್ತೆಯಾಗಿದೆ.
ಬೆಂಗಳೂರಿನಿಂದ ಮಡಕೇರಿಗೆ ಹೋಗುತ್ತಿದ್ದ ಕಾರನ್ನು ಚುನಾವಣಾಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ ಕಾರಿನಲ್ಲಿದ್ದ ರತನ್ (35) ಎಂಬುವರ ಬಳಿ ಲೈಸೆನ್ಸ್ ಇರುವ ಬಂದೂಕು ಪತ್ತೆಯಾಯಿತು.
ಚುನಾವಣಾಧಿಕಾರಿಗಳು ಬಂದೂಕು ಹಾಗು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.