ಯಳಂದೂರು : ಪಟ್ಟಣದಲ್ಲಿ ವಿವಿಧ ಇಲಾಖೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು
ಪಟ್ಟಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಎ.ಆರ್ ಕೃಷ್ಣಮೂರ್ತಿರವರು ಮಾಲಾರ್ಪಣೆ ಮಾಡಿದರು, ತಾಲೂಕು ಸಮಾಜ ಕಲ್ಯಾಣ ಇಲಾಖೆ ,ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಅಂಬೇಡ್ಕರ್ ವಿವಿದೊದ್ದೇಶ ಸಹಕಾರ ಸಂಘ, ಪಟ್ಟಣ ಪಂಚಾಯಿತಿ ಸದಸ್ಯರು ಮುಂತಾದ ವಿವಿಧ ಸಂಘಸಂಸ್ಥೆಗಳ ಪದಾದಿಕಾರಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪಪ್ರಾಂಶುಪಾಲರಾದ ನಂಜುಂಡಯ್ಯ ನೇತೃತ್ವದಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು .
ಸಮಾರಂಭದಲ್ಲಿ ಮುಖ್ಯಭಾಷಣಕಾರರಾಗಿ ಆಗಮಿಸಿದ ರಾಜಶೇಖರ್ ಮೂರ್ತಿ ಮಾತನಾಡಿ ಇಂದು ಸಂವಿಧಾನವನ್ನು ಉಳಿಸಿಕೊಳ್ಳವ ಸನ್ನಿವೇಶ ನಿರ್ಮಾಣವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನ ಬದಲಾವಣೆಯಾಗಬೇಕೆಂಬ ವಿಷಯವನ್ನು ಸಂವಿಧಾನದಿಂದ ಗೆದ್ದಿರುವ ಸಂಸದರು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಒದಗಿಬಂದಿರುವ ಅಪಾಯವಾಗಿದೆ ಹಾಗಾಗಿ ಇಂದು ನಮ್ಮ ಪವಿತ್ರ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ವಿಶ್ವವೇ ಮೆಚ್ಚಿಕೊಂಡಿರುವ ನಮ್ಮ ಭಾರತದೇಶದ ಸಂವಿಧಾನಕ್ಕೆ ಈಗ ಅಪಾಯ ಒದಗಿಬಂದಿದೆ ಈ ಚುನಾವಣೆಯಲ್ಲಿ ನಾವು ಸಂವಿಧಾನದ ಪರ ಮತ ಚಲಾಯಿಸಿ ಅಂಬೇಡ್ಕರ್ ರವರ ಸಂವಿಧಾನವನ್ನು ಉಳಿಸಬೇಕು ಎಂದರು.
ಭಾರತದ ಪ್ರತಿಯೊಬ್ಬ ಪ್ರಜೆಯು ಅಂಬೇಡ್ಕರ್ ಸಂವಿಧಾನಕ್ಕೆ ಋಣಿಯಾಗಬೇಕು. ಸಂವಿಧಾನವಿಲ್ಲದಿದ್ದರೆ ಈ ದೇಶದ ಬಹುಸಂಖ್ಯಾತ ಜನರು ಈಗ ಅನುಭವಸುತ್ತಿರುವ ಎಲ್ಲಾರೀತಿಯ ಹಕ್ಕು , ಸವಲತ್ತು ನೌಕರಿ ಸಾಮಾಜಿಕ ನ್ಯಾಯ ಸಮಾನತೆ ಇವೆಲ್ಲವು ಇಲ್ಲದೆ ಗುಲಾಮಗಿರಿಗೆ ಒಳಗಾಗಬೇಕಾಗಿರುತ್ತಿದ್ದೇವು ಅದ್ದರಿಂದ ಅಂಬೇಡ್ಕರ್ ರವರು ಭಾರತದೇಶದ ಪ್ರತಿ ಜೀವಿಗಳು ಹಾಗೂ ನಿರ್ಜೀವಿಗಳು ಸಂವಿಧಾನದಲ್ಲಿ ರಕ್ಷಣೆಯನ್ನು ಒದಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ತಹಸಿಲ್ದಾರ್ ನಿಸರ್ಗ ಪ್ರಿಯಾ, ಸಮಾಜ ಕಲ್ಯಾಣಾಧಿಕಾರಿ ರಾಜೇಶ್, ಬಿ.ಇ ಒ ಕಾಂತರಾಜು, ಪ.ಪಂ ಇ.ಒ ಮಹೇಶ್ ಕುಮಾರ್, ತಾ. ಅಂಬೇಡ್ಕರ್ ಸೇವಾಸಮಿತಿಯ ಅಧ್ಯಕ್ಷರು ರೇವಣ್ಣ, ಡಿ ಎಸ್‌ಎಸ್ ಜಿಲ್ಲಾ ಸಂಚಾಲಕರಾದ ಯರಿಯೂರು ರಾಜಣ್ಣ, ಕಂದಳ್ಳಿ ನಾರಾಯಣ್, ಆಶಾ ಕಾರ್ಯಕರ್ತೆಯರು, ಮುಂತಾದವರು ಹಾಜರಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ