ಮೊಬೈಲ್ ಕಳ್ಳರ ಬಂಧನ : 4.20 ಲಕ್ಷ ಮೌಲ್ಯದ ಮೊಬೈಲ್ ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಪೊಲೀಸ್.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು ಆರೋಪಿಗಳಾದ ಆಕಾಶ್, ಪ್ರವೀಣ್, ಹನುಮಂತರನ್ನು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಒಳಪಡಿಸಿ ಅವರ ಕಡೆಯಿಂದ 4.20.000/- ರೂ ಬೆಲೆ ಬಾಳುವ ವಿವಿಧ ಕಂಪನಿಯ 20 ಅಂಡ್ರೈಡ್ ಮೋಬೈಲ್ ಫೋನ್ ಗಳನ್ನು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸ್ ವಶಪಡಿಸಿಕೊಂಡಿದ್ದೇವೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸಾದೀಕ್ ಪಾಷ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ದಿನಾಂಕ ಏಪ್ರಿಲ್ 14ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಆಲೂರು-ದುದ್ದನಹಳ್ಳಿ ಗ್ರಾಮದ ನಿವಾಸಿ ಅಮರ್ ಹಾಗೂ ಅವರ ಸ್ನೇಹಿತ ಕೋಡಿಹಳ್ಳಿ ನಿವಾಸಿ ಅನೀಲ್ ಕುಮಾರ್ ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಸೊಣ್ಣಪ್ಪನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೋಳಿಫಾರಂ ಬಳಿ 3 ಜನ ಅಪರಿಚಿತರು ಅಮರ್ ಹಾಗೂ ಅನಿಲ್ ಕುಮಾರ ರವರು ಬರುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಮ್ಮ ಬಳಿ ಇದ್ದ ಮಾರಕಾಸ್ತ್ರ( ಲಾಂಗ್ ) ವನ್ನು ತೋರಿಸಿ ಹೆದರಿಸಿದ್ದು ಅಮರ್ ಹಾಗೂ ಅನಿಲ್ ಕುಮಾರ್ ರವರು ತಮ್ಮ ಬಳಿ ಇದ್ದ ಮೋಬೈಲ್ ಮತ್ತು ಹಣವನ್ನು ಆಸಾಮಿಗಳಿಗೆ ನೀಡಲು ಹೋದಾಗ ಅಕ್ಕಪಕ್ಕ ಗ್ರಾಮದ ಸಾರ್ವಜನಿಕರು ಬಂದು ಆಸಾಮಿಗಳನ್ನು ಹಿಡಿದುಕೊಂಡು ಬಂದು ಠಾಣೆಗೆ ಒಪ್ಪಿಸಿದ್ದರು.ಈ ಬಗ್ಗೆ ಅಮರ್ ರವರು ದೂರು ನೀಡಿದ್ದು ಅದರಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 126/2024 ಕಲಂ 384 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇವೆ ಎಂದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕರರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ನಾಗೇಶ್ ಕುಮಾರ್, 2 ನೇ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಕೆ.ಎಸ್. ನಾಗರಾಜ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ರವಿ ಪಿ. ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸಾದೀಕ್ ಪಾಷ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸುವ ಮೂಲಕ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
*ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ*
ವಿಶೇಷ ತಂಡದ ಅಧಿಕಾರಿ ಶ್ರೀ. ಸಾದೀಕ್ ಪಾಷ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ. ರವಿ ಟಿ.ಎನ್. ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 483, ಶ್ರೀ. ಅರ್ಜುನ್ ಲಮಾಣಿ, ಪಿಸಿ 584, ಶ್ರೀ. ಪ್ರವೀಣ್, ಪಿಸಿ 144 ಶ್ರೀ. ಸಚಿನ್ ಉಪ್ಪಾರ್ ರವರನ್ನು ನೇಮಿಸಲಾಗಿತ್ತು.
ಎl. ಆಕಾಶ ಬಿನ್ ಸಿದ್ದಪ್ಪ (19 ವರ್ಷ ) ಎ2. ಪ್ರವೀಣ ಬಿನ್ ಅಂಜೀನಪ್ಪ, (18 ವರ್ಷ)ಎ3. ಹನುಮಂತ ಎಸ್.ಡಿ ಬಿನ್ ಶರಣಪ್ಪ, (22 ವರ್ಷ) ಬಂಧಿತ ಆರೋಪಿಗಳು.