ಅನೈತಿಕ ಸಂಭಂಧ ಪ್ರಶ್ನಿಸಿದ ಹೆಂಡತಿಯನ್ನೇ ಕೊಲೆಗೈದ ಪಾಪಿ ಗಂಡ
ದೊಡ್ಡಬಳ್ಳಾಪುರ : ಕೈ ಹಿಡಿದ ಹೆಂಡತಿ ಅಪ್ಪ ಅಮ್ಮ ಇಲ್ಲದ ಅನಾಥೆ, ಅನಾಥ ಯುವತಿಗೆ ಬಾಳು ಕೊಡುವುದ್ದಾಗಿ ಮದುವೆಯಾಗಿದ್ದ, ಎರಡು ವರ್ಷಗಳ ದಾಪಂತ್ಯ ಜೀವನ ನಡೆಸಿದ್ರು, ಗಾರ್ಮೆಂಟ್ಸ್ ಕೆಲಸಕ್ಕೆಂದು ಹೋದವಳು ನಾಪತ್ತೆಯಾಗಿದ್ಳು, ಹೆಂಡತಿ ನಾಪತ್ತೆಯಾಗಿದ್ದಳೆಂದು ಗಂಡ ಪೊಲೀಸ್ ಠಾಣೆಗೆ ದೂರ ನೀಡಿದ್ದ, ಇದೇ ಗಂಡ ಈಗ ತಾನೇ ಹೆಂಡತಿಯನ್ನ ಕೊಲೆಗೈದಿರುವುದ್ದಾಗಿ ಪೊಲೀಸರಿಗೆ ಶರಣಾಗಿದ್ದಾನೆ.
ದೊಡ್ಡಬಳ್ಳಾಪುರದ ಕರನೇಹಳ್ಳಿಯ ನಿವಾಸಿ 19 ವರ್ಷದ ವೀಣಾ ಏಪ್ರಿಲ್ 22ರ ಸೋಮವಾರ ನಾಪತ್ತೆಯಾಗುತ್ತಾರೆ, ಆಕೆಯ ಗಂಡ ರವಿ ಹೆಂಡತಿಯ ಮಿಸ್ಸಿಂಗ್ ಕೇಸ್ ಅನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಬಂದಿದ್ದ, ಅದಾದ ಒಂದು ವಾರಕ್ಕೆ ತೂಬಗೆರೆಯ ನಾರಸಿಂಹಹಳ್ಳಿಯ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್ ಗೆ ಸುಟ್ಟು ಕರಕಲಾಗಿರುವ ಅಪರಿಚಿತ ಶವ ಕಣ್ಣಿಗೆ ಬಿದ್ದಿತ್ತು, ಸ್ಥಳಕ್ಕೆ ಭೇಟಿ ನೀಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೇಕ್ಟರ್ ಸಾಧಿಕ್ ಪಾಷ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕಾಡಿನಲ್ಲಿ ಪತ್ತೆಯಾದ ಅಪರಿಚಿತ ಶವದ ಪತ್ತೆಗಾಗಿ ತನಿಖೆ ಆರಂಭಿಸಿದ ಪೊಲೀಸರು, ಇತ್ತಿಚೇಗೆ ನಾಪತ್ತೆಯಾದ ಪ್ರಕರಣಗಳನ್ನ ಕೈಗೆತ್ತಿಕೊಂಡರು, ಏಪ್ರಿಲ್ 22ರಂದು ನಾಪತ್ತೆಯಾಗಿದ್ದ ವೀಣಾ ಕೇಸ್ ಸಾಧಿಕ್ ಪಾಷರವರ ಗಮನಕ್ಕೆ ಬರುತ್ತೆ, ತಕ್ಷಣವೇ ಆಕೆಯ ಸಂಬಂಧಿಕರಿಗೆ ಕರೆ ಮಾಡಿದ ಅವರು ಶವದ ಪತ್ತೆ ಮಾಡುವಂತೆ ಕರೆಯುತ್ತಾರೆ, ಶವದ ಕಾಲಿನಲ್ಲಿದ ಕಾಲ್ಗೆಜ್ಜೆ, ಅರೆಬೆಂದ ಚಪ್ಪಲಿ ನೋಡಿದ ಸಂಬಂಧಿಕರು ಇದು ವೀಣಾ ಶವ ಎಂದು ಗುರುತು ಹಿಡಿದಿದ್ರು.
ಪಕ್ಕದ್ಮನೆ ಆಂಟಿ ಜೊತೆ ಅನೈತಿಕ ಸಂಬಂಧ..?
ಅಪರಿಚಿತ ಶವ ನಾಪತ್ತೆಯಾಗಿದ್ದ ವೀಣಾಳ ಶವ, ಅಂದಹಾಗೇ ವೀಣಾಳನ್ನು ಕೊಂದವರು ಯಾರು, ಯಾವ ಕಾರಣಕ್ಕೆ ಕೊಂದರು, ಈ ಪ್ರಶ್ನೆಗಳು ಅದಾಗಲೇ ಇನ್ಸ್ ಪೇಕ್ಟರ್ ಸಾಧಿಕ್ ಪಾಷರವರ ಗಮನಕ್ಕೆ ಬಂದಿತ್ತು, ಅಷ್ಟರಾಗಲೇ ವೀಣಾಳ ಗಂಡ ರವಿ ಪೊಲೀಸ್ ಠಾಣೆಗೆ ಹೋಗಿ ಹೆಂಡತಿಯನ್ನ ತಾನೇ ಕೊಂದಿರುವುದ್ದಾಗಿ ತಪ್ಪೋಪ್ಪಿಕೊಂಡಿದ್ದ.
ಆರೋಪಿ ರವಿಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾಗ ತಿಳಿದು ಬಂದ ವಿಷಯ, ಆತನ ಅನೈತಿಕ ಸಂಬಂಧ. ಆರೋಪಿ ರವಿ ಪಕ್ಕದ್ಮನೆ ಆಂಟಿ ಜೊತೆ ಅನೈತಿಕ ಸಂಬಂಧವನ್ನ ಬೆಳೆಸಿದ್ದ, ಆಂಟಿ ಸಹವಾಸ ಬೀಡುವಂತೆ ವೀಣಾ ತನ್ನ ಗಂಡನಿಗೆ ಹೇಳುತ್ತಿದ್ದಳು. ಆದರೆ, ಆಂಟಿಯನ್ನ ಬಿಡಲು ಒಲ್ಲದ ರವಿ ಹೆಂಡತಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದನು, ಮಧ್ಯರಾತ್ರಿ ಹೆಂಡತಿಯ ರೂಮಿಗೆ ಬೀಗ ಹಾಕಿ ಆಂಟಿ ಮನೆ ಸೇರಿ ಕೊಳ್ಳುತ್ತಿದ್ದ, ಮಗನಿಗೆ ಬುದ್ದಿವಾದ ಹೇಳ ಬೇಕಿದ್ದ ಅತ್ತೆ,ಮಾವ ಮತ್ತು ನಾದಿನಿಯರು ವೀಣಾಳಿಗೆ ಕಿರುಕುಳ ಕೊಡುತ್ತಿದ್ದರಂತೆ, ಮನೆಯಲ್ಲಿ ಕೊಡುತ್ತಿದ್ದ ಕಿರುಕುಳದ ಬಗ್ಗೆ ಬೇಸರಗೊಂಡಿದ್ದ ವೀಣಾ, ನೆರೆಹೊರೆಯ ಮಹಿಳೆಯರೊಂದಿಗೆ ತನ್ನ ನೋವು ಹಂಚಿಕೊಳ್ಳುತ್ತಿದ್ದಳೆಂದ್ದು ಸ್ಥಳೀಯ ಮಹಿಳೆಯರು ವೀಣಾ ಸಾವಿನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.
ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹೆಂಡತಿಯನ್ನ ಮುಗಿಸಲು ಸಂಚು ಹಾಕಿದ ರವಿ, ಏಪ್ರಿಲ್ 22 ರಂದು ಆಕೆ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಪ್ಯಾಕ್ಟರಿ ಹೋಗಿದ್ದ ಅವನು, ಕೆಲಸ ಬಿಟ್ಟ ನಂತರ ಹೆಂಡತಿಯನ್ನ ಜೊತೆಯಾಗಿ ಕರೆದುಕೊಂಡು ಹೋಗಿದ್ದ, ಅಲ್ಲಿಂದ ತೂಬಗೆರೆ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ, ಶವದ ಗುರುತು ಸಿಗಬಾರದೆಂಬ ಕಾರಣಕ್ಕೆ ಶವದ ಮೇಲೆ ಪೆಟ್ರೋಲ್ ಸುರಿದು ಸುಟ್ಟಹಾಕಿದ್ದಾನೆ.
ಅಂದು ರಾತ್ರಿ ಮನೆಗೆ ಬಂದವನು ತಾನಗೇನು ಗೊತ್ತೆ ಇಲ್ಲವೆಂಬಂತೆ, ಅಕ್ಕಪಕ್ಕದ ಮನೆಯ ಬಳಿ ಹೋಗಿ ವೀಣಾ ಇದ್ದಾಳಾ ಎಂದು ಕೇಳಿದ್ದಾನೆ, ರಾತ್ರಿ 10 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಬಂದಿದ್ದ, ಮರುದಿನ ಕಟಿಂಗ್ ಮಾಡಿಸಿಕೊಂಡ ಅವನು ಮನೆಯಲ್ಲಿ ನಾನ್ ವೆಜ್ ಆಡುಗೆ ಮಾಡಿಸಿ ಮಜಾ ಮಾಡಿದ್ದನಂತೆ.
ವೀಣಾ ಒಬ್ಬ ಅನಾಥೆ, ಆಕೆಯನ್ನ ಕೊಂದರೆ ಕೇಳವರು ಯಾರು ಇಲ್ಲವೆಂಬ ಧೈರ್ಯದಲ್ಲಿ ಕೊಂದು ಮುಗಿಸಿದ್ದಾನೆ, ಆತನೆ ತಕ್ಕ ಶಿಕ್ಷೆಯಾಗ ಬೇಕೆಂದು ಸ್ಥಳೀಯ ಮಹಿಳೆಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.