ಪ್ರಜ್ವಲ್ ರೇವಣ್ಣ ಪ್ರಕರಣ/ಸಹಾಯಕ ತನಿಖಾಧಿಕಾರಿಯಾಗಿ ಹೊಸಹಳ್ಳಿ ಠಾಣೆ ಪಿಐ ರಾವ್ ಗಣೇಶ್ ನಿಯೋಜನೆ…!
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ಹಗರಣದ ತನಿಖೆಗೆ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡಕ್ಕೆ(SIT) ಸಹಾಯಕ ತನಿಖಾಧಿಕಾರಿಯನ್ನಾಗಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.
ಸಿಐಡಿಯ ಎಸ್ಐಟಿ ತಂಡಕ್ಕೆ ತನಿಖಾ ಸಹಾಯಕರಾಗಿ ಪೂರಕ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಮಹಾನಿರ್ದೇಶಕರು ಕೋರಿದ್ದರು.
ಅದರಂತೆ ಪೊಲೀಸ್ ಅಧಿಕಾರಿ/ ಸಿಬ್ಬಂದಿಯನ್ನು ಒಒಡಿ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜನೆ ಮಾಡಿ ಆದೇಶಿಸಲಾಗಿದೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಎಸ್ಪಿ ಸಿ.ಎ.ಸೈಮನ್, ಮಂಡ್ಯ ಜಿಲ್ಲೆ ಹಲಗೂರು ವೃತ್ತದ ಸಿಪಿಐ ಬಿ.ಎಸ್. ಶ್ರೀಧರ್, ಮಾರತ್ತಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಅಲ್ಲಭಕ್ಷ್, ಸಿಟಿ ಕಂಟ್ರೋಲ್ ರೂಮಿನ ಸಿಒಪಿ ಮಮತಾ, ಚಂದ್ರ ಲೇಔಟ್ ಠಾಣೆಯ ಸರಸ್ವತಿ ಎಸ್.ಎನ್, ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಗಳಾದ ಜಾಫರ್ ಸಾಧಿಕ್, ಹರೀಶ್ ಬಾಬು ಎಂ. ಅವರನ್ನು ತನಿಖಾ ತಂಡಕ್ಕೆ ನಿಯೋಜನೆ ಮಾಡಲಾಗಿದೆ.