ಕೋಳೂರು ಗ್ರಾಮದ ನಿರ್ವಸತಿಗರಿಗೆ ವಸತಿ ಕಲ್ಪಿಸಲು ಮನವಿ
ದೊಡ್ಡಬಳ್ಳಾಪುರ:ತಾಲೂಕಿನ ಕೋಳೂರು ಗ್ರಾಮದ ಬಡ ಕುಟುಂಬಗಳಿಗೆ ವಾಸಿಸಲು ಸ್ಥಳದ ಅವಶ್ಯಕತೆ ಇದ್ದು. ಗ್ರಾಮಸ್ಥರ ಕೋರಿಕೆಯ ಮೇರೆಗೆ ಇಂದು ಕೋಳೂರು ಗ್ರಾಮದ ಸರ್ವೇ ನಂಬರ್ 182 ರಲ್ಲಿ ಲಭ್ಯವಿರುವ 9.17ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆಯಿತು.
ಈ ಕುರಿತು ಸ್ಥಳೀಯ ಮುಖಂಡರಾದ ಪೂಜಪ್ಪ ಮಾತನಾಡಿ ಹಲವು ವರ್ಷಗಳ ಪ್ರತಿಫಲವಾಗಿ ಇಂದು ನಮ್ಮ ಗ್ರಾಮಕ್ಕೆ ಸೇರಿರುವ 9.17 ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆದಿದೆ . ಗ್ರಾಮದಲ್ಲಿ ನೂರಾರು ಬಡ ಕುಟುಂಬಗಳಿಗೆ ನಿವೇಶನಗಳಿಲ್ಲದಂತಾಗಿ ಹಲವು ವರ್ಷಗಳಿಂದ ಬಡ ಕುಟುಂಬಗಳು ಒದ್ದಾಡುತ್ತಿವೆ . ಅಂತಹ ಕುಟುಂಬಗಳಿಗೆ ಈ ಸರ್ಕಾರಿ ಜಾಗವು ಆಶ್ರಯ ಯೋಜನೆ ಅಡಿ ಸೂರು ನೀಡಲಿದೆ ಎಂದರು.
ಸುಮಾರು 25 ವರ್ಷಗಳಿಂದ ಹೊರಟ ನಡೆಸುತ್ತಿದ್ದು ಅಧಿಕಾರಿಗಳಿಗೆ ಇಂದು ನಮ್ಮ ಮೇಲೆ ಕರುಣೆ ಬಂದಿದೆ. ನಮ್ಮ ಗ್ರಾಮದ ಬಡ ಕುಟುಂಬಗಳಿಗೆ ಈ ಆಶ್ರಯ ಯೋಜನೆಯ ಮೂಲಕ ಬೆಳಕು ಕಾಣಲಿದೆ . ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ನಿವೇಶನಗಳು ನೀಡಿದ್ದೆ ಆದಲ್ಲಿ ನೂರಾರು ಬಡ ಕುಟುಂಬಗಳು ಸ್ವತಂತ್ರರಾಗಿ ಯಾರ ಹಂಗು ಇಲ್ಲದೆ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ರೈತ ಹೋರಾಟಗಾರ ಸಿದ್ದಲಿಂಗಪ್ಪ ಅಭಿಪ್ರಾಯವ್ಯಕ್ತಪಡಿಸಿದರು.
ಈ ಕುರಿತು ತಳಗವಾರ ಗ್ರಾಮ ಆಡಳಿತಾಧಿಕಾರಿ ಹಾಗೂ ಕಸಬಾ ರಾಜಸ್ವ ನಿರೀಕ್ಷಕರು ಸ್ಥಳದ ಅಳತೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ತಾಲೂಕು ಮೇಲ್ದರ್ಜೆ ಅಧಿಕಾರಿಗಳಿಗೆ ಪತ್ರರವಾನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ
ಸಂದರ್ಭದಲ್ಲಿ ಕೋಳೂರು ಗ್ರಾಮಸ್ಥರು ಹಾಜರಿದ್ದರು.