ಬಂಡೀಪುರದಲ್ಲಿ ಆನೆ ಗಣತಿ ಕಾರ್ಯ ಆರಂಭ
ಗುಂಡ್ಲುಪೇಟೆ: ಇಂದಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ದಿನಗಳ ಆನೆಗಳ ಗಣತಿ ಕಾರ್ಯ ಆರಂಭ
ಇತ್ತೀಚೆಗೆ ಮಳೆಬಿದ್ದು ಹಸಿರಿನಿಂದ ಕೂಡಿರುವ ಅರಣ್ಯದಲ್ಲಿ ಆನೆಗಳ ಗಣತಿ ಕಾರ್ಯ ಕಷ್ಟಕರವಾಗಿದ್ದರೂ ಸಹ ಸಿಬ್ಬಂದಿ ನಿರ್ದಿಷ್ಟಗೊಳಿಸಿದ ಬ್ಲಾಕ್‌ನಲ್ಲಿ ಸಾಗಿದರು ಮತ್ತು ಅಲ್ಲಿ ಆನೆಗಳ ಲದ್ದಿ ಹಾಗೂ ಗುಂಪು ಗುಂಪಾಗಿ ಕಾಣುವ ಕಾಡಾನೆಗಳ ಫೋಟೋ ತೆಗೆದು ಅವುಗಳನ್ನು ಎಣಿಕೆ ಮಾಡುವುದರೊಂದಿಗೆ ಆನೆಗಣತಿಯನ್ನು ದಾಖಲಿಸಿದ
ದಕ್ಷಿಣದ ರಾಜ್ಯಗಳಲ್ಲಿ ಆನೆ ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಙಾನಿಕವಾಗಿ ಪರಿಹಾರೋಪಾಯಗಳನ್ನು ರೂಪಿಸಲು ಕರ್ನಾಟಕ, ಕೇರಳ, ತಮಿಳುನಾಡು ಹಾಗು ಆಂದ್ರಪ್ರದೇಶದ ಗಡಿ ಅರಣ್ಯ ಪ್ರದೇಶಗಳಲ್ಲಿ ಏಕಕಾಲದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆನೆ ಗಣತಿ ನಡೆಯಲಿದೆ.
ನೆರೆಯ ರಾಜ್ಯಗಳಾದ ಕೇರಳ ಹಾಗು ತಮಿಳುನಾಡು ರಾಜ್ಯಗಳಲ್ಲಿ ಸಂಯೋಜಿತ ಆನೆಗಳ ಸಂಖ್ಯೆ ಪತ್ತೆಗೆ ಗಣತಿ ನಡೆಸಲಾಗುತ್ತಿದೆ. ಆನೆಗಣತಿಗೆ ವಿವಿಧ ವಿಧಾನಗಳನ್ನು ಅನುಸರಿಲಾಗುತ್ತದೆ. ಆನೆಯ ಲದ್ದಿಯ ಮಾದರಿ ಸಂಗ್ರಹ ಮತ್ತು ನೇರವಾಗಿ ಏಣಿಕೆ ಮಾಡುವುದು, ಅರಣ್ಯ ಪ್ರದೇಶವನ್ನು ಬ್ಲಾಕ್ ಗಳನ್ನಾಗಿ ವಿಂಗಡಿಸಿ ಒಂದೊಂದು ಬ್ಲಾಕ್ ಗು ಸಿಬ್ಬಂದಿಯನ್ನು ನಿಯೋಜಿಸಿ ಆ ಪ್ರದೇಶದಲ್ಲಿ ಕಾಣುವ ಆನೆಗಳ ಸಂಖ್ಯೆಯನ್ನು ದಾಖಲಿಸುವುದು ಮತ್ತು ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಎಣಿಸುವುದು ಹಾಗು ಸೀಳುದಾರಿಗಳಲ್ಲಿ ಲದ್ದಿಎಣಿಕೆ ಮಾಡುವ ಮೂಲಕ ಆನೆಗಣತಿ ಮಾಡಲಾಗುತ್ತದೆ. ಆನೆಗಳ ಅಂಕಿಅಂಶಗಳ ಪತ್ತೆಯ ಜೊತೆಗೆ ಆನೆ ಕಾರಿಡಾರ್ ಗಳನ್ನು ಪುನರ್ ಸ್ಥಾಪಿಸಬೇಕು
ವರದಿ ಆರ್ ಉಮೇಶ್ ಮಲಾರಪಾಳ್ಯ