*ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಧಮ್ಕಿ ಆಕಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿ ಯನ್ನು ಸೇವೆಯಿಂದ ವಜಗೊಳಿಸಿ ಎಂದು ಡಿ. ಎಸ್. ಎಸ್. ಪ್ರತಿಭಟನೆ…*

ಯಳಂದೂರು: ಪಟ್ಟಣದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮುಂದೆ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಜೊತೆಗೂಡಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರ ಗುರುಸ್ವಾಮಿಯನ್ನು ಸೇವೆಯಿಂದ ವಜಾ ಮಾಡಿ, ಅಧಿಕಾರಿಯ ಮೇಲೆ ಧಮ್ಕಿ ಹಾಕುತ್ತಿರುವ ಗುರುಸ್ವಾಮಿ ಮೇಲೆ ಪ್ರಕರಣ ದಾಖಲಿಸಿ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಯರಿಯೂರು ರಾಜಣ್ಣ ರವರು ಮಾತನಾಡಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಆಗಿ ಸುಮಾರು 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿ ಎಂಬುವನು ಇಲಾಖೆಯ ಕೆಲವು ಕಡತಗಳ ಮಾಹಿತಿಗಳನ್ನು ಕೆಲವು ಸಂಘಟನೆಯ ಮುಖಂಡರಿಗೆ ನೀಡುತ್ತಿದ್ದು ಬೆಳಕಿಗೆ ಬಂದಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಳಂದೂರು ತಾಲ್ಲೂಕು ರವರು ದಿನಾಂಕ 20-12-2023ರಂದು ಆಯುಕ್ತರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ದೂರನ್ನು ಸಲ್ಲಿಸಿರುತ್ತಾರೆ. ಈ ದೂರಿನ ಅನ್ವಯ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಾಮರಾಜನಗರ ರವರಿಗೆ ಆತನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೋರಿರುತ್ತಾರೆ,ತದ ನಂತರ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಾಮರಾಜನಗರ ರವರು ನೌಕರ ಗುರುಸ್ವಾಮಿ ಮೇಲೆ ಅವ್ಯವಹಾರದ ಆರೋಪವಿದ್ದು ವಜಾ ಮಾಡುವಂತೆ ಮತ್ತು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಯಳಂದೂರು ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಸೂಚಿಸಿರುತ್ತಾರೆ,ಅದರಂತೆ ಸಹಾಯಕ ನಿರ್ದೇಶಕರು ವಿಚಾರಣೆ ನಡೆಸಿ ಇವರ ಸೇವೆ ಇಲಾಖೆಗೆ ಅಗತ್ಯವಿಲ್ಲದಿರುವುದರಿಂದ ಸದರಿ ಹೊರ ಸಂಪನ್ಮೂಲ ನೌಕರನನ್ನು ಸೇವೆಯಿಂದ ರದ್ದುಪಡಿಸುವಂತೆ ಹೊರಗುತ್ತಿಗೆ ಏಜೆನ್ಸಿಗೆ ಕೋರಿರುತ್ತಾರೆ,

ಕಾಂತಿ ಏಜೆನ್ಸಿ ನೆಟ್ವಕ್ಸ್-, ಮೈಸೂರು ರವರು ಗುರುಸ್ವಾಮಿ, ಡಾಟಾ ಎಂಟ್ರಿ ಆಪರೇಟರ್ ಇವರ ಸೇವೆಯನ್ನು ನಮ್ಮ ಸಂಸ್ಥೆಯ ವತಿಯಿಂದ ವಜಾಗೊಳಿಸಿಲಾಗಿದೆ ಎಂದು ಈ ನೌಕರನಿಗೆ ತಿಳಿಸಿರುತ್ತಾರೆ.

ಆದರೂ ಸಹ ಈ ವ್ಯಕ್ತಿ ಕಛೇರಿಗೆ ಬಂದು, ಅಲ್ಲಿನ ಅಧಿಕಾರಿಯ ಮೇಲೆ ಧಮ್ಮಿ ಹಾಕಿ ಕಛೇರಿಯಲ್ಲೆ ಇದ್ದುಕೊಂಡು ಭ್ರಷ್ಟಾಚಾರ ನಿರ್ಮೂಲನ ವೇದಿಕೆಯ ಕಾರ್ಯಕರ್ತರ ಜೊತೆಗೂಡಿ ಕಛೇರಿಯ ಮುಂದೆ ಧರಣಿ ನಡೆಸಿ ಅಲ್ಲು ಸಹ ಉಪ ನಿರ್ದೇಶಕರ ಸಮ್ಮುಖದಲ್ಲಿಯೇ ಅವರನ್ನು ಬೈದು, ಅವರ ಮೇಲೆ ಕೆಟ್ಟದಾಗಿ ಮಾತನಾಡಿ,ನೀನು ನನ್ನನ್ನು ಕೆಲಸದಿಂದ ತೆಗೆಸಿದರೆ ನಿನ್ನನ್ನು ಆಯ್ಕೊಂಡು ತಿನ್ನುವ ಹಾಗೆ ಮಾಡುತ್ತೇನೆ ಎಂದು ಧಮ್ಮಿ ಹಾಕಿರುವುದನ್ನು ಖುದ್ದು ಸಹಾಯಕ ನಿರ್ದೇಶಕರೆ ಪತ್ರಿಕೆ ಮತ್ತು ಉಪ ನಿರ್ದೇಶಕರ ಮುಂದೆ ಹೇಳಿರುತ್ತಾರೆ.

ಈತ ಕೆಲಸಕ್ಕೆ ಸೇರಿದ ದಿನದಿಂದ ಒಂದಲ್ಲ ಒಂದು ಕಿರುಕುಳವನ್ನು ವಾರ್ಡನ್‌ ಗಳಿಗೆ ಮತ್ತು ಅಲ್ಲಿನ ನೌಕರರುಗಳಿಗೆ, ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುತ್ತಾನೆ. ಅದಲ್ಲದೆ ಇಲಾಖೆಯ ಕೆಲವು ಕಡತಗಳನ್ನು ಸಾರ್ವಜನಿಕರಿಗೆ ಕದ್ದು ಮುಚ್ಚಿ ಕೊಟ್ಟಿರುತ್ತಾನೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭ್ರಷ್ಟಾಚಾರ ವೇದಿಕೆಯ ಕಾರ್ಯಕರ್ತರು, ಅಧಿಕಾರಿಗಳನ್ನು ಹೆದರಿಸಿ ಪುನ‌ರ್ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಡ ಹೇರಿರುತ್ತಾರೆ. ಈತನನ್ನು ಮತ್ತೇ ಮರು ನೇಮಕಾತಿ ಮಾಡಿಕೊಂಡರೆ ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳನ್ನು ಇನ್ನೂ ಕದ್ದು ಮುಚ್ಚಿ ಕೊಡುವ ಸಂಭವ ಇರುವುದರಿಂದ ಈ ಕೂಡಲೇ ಈತನನ್ನು ಸೇವೆಗೆ ತೆಗೆದುಕೊಳ್ಳಬಾರದೆಂದು, ಹಾಗೂ ಈತನ ಮೇಲೆ ಇಲಾಖೆ ವತಿಯಿಂದ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುಬೇಕೆಂದು ಒತ್ತಾಯಿಸಿದರು.

ನಂತರ ಚಾಮರಾಜನಗರ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್ ರವರು ಪ್ರತಿಭಟನೆ ಸ್ಥಳಕ್ಕೆ ಬಂದು ಮನವಿ ಯನ್ನು ಸ್ವೀಕರಿಸಿದರು. ಕೆಲಸದಿಂದ ವಜಾ ಮಾಡಿರುವ ಹೊರಗುತ್ತಿಗೆ ನೌಕರ ಗುರುಸ್ವಾಮಿಯನ್ನು ಕಚೇರಿಯಿಂದ ಹೊರ ಕಳಿಸಲು ಹೋದಾಗ ನಾನು ಹೋಗುವುದಿಲ್ಲ ಎಂದು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ನಂತರ ಸಹಾಯಕ ನಿರ್ದೇಶಕ ರಾಜೇಶ್ ರವರನ್ನು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಹೇಳಿದರು. ರಾಜೇಶ್ ರವರು ದೂರನ್ನು ನೀಡಲು ಠಾಣೆಗೆ ಹೋದಾಗ ಪೊಲೀಸ್ ಇಲಾಖೆ ಮುಂದೆ ಹೊರಗುತ್ತಿಗೆ ನೌಕರ ಗುರುಸ್ವಾಮಿ ಬಂದು ನಾನು ಇನ್ನು ಮುಂದೆ ಕಚೇರಿಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿ ಮುಚ್ಚಳಿಕೆಯನ್ನು ಬರೆದು ಕೊಟ್ಟಿರುತ್ತಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕಂದಳ್ಳಿ ನಾರಾಯಣ, ದಲಿತ ಸಂಘರ್ಷ ಸಮಿತಿಯ ಯಳಂದೂರು ತಾಲೂಕು ಸಂಚಾಲಕರದ ಗಣಿಗನೂರು ಚಂದ್ರಶೇಖರ್, ಚಾಮರಾಜನಗರ ತಾಲೂಕು ಸಂಚಾಲಕರದ ಗೂಳಿಪುರ ಅನಿಲ್ ಕುಮಾರ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ದುಗ್ಗಹಟ್ಟಿ ಮಾದೇಶ್, ಕೆಸ್ತೂರು ಶಾಂತರಾಜು, ಗೌಡಳ್ಳಿ ರಾಜೇಶ್, ವಿಶ್ವ, ಮಲ್ಲರಾಜು, ಮೂರ್ತಿ, ಸಿದ್ದರಾಜು ಹೊನ್ನೂರು, ವರದರಾಜು, ಪುನೀತ್, ರಘು ಹಾಗೂ ಮುಂತಾದವರು ಭಾಗವಹಿಸಿದ್ದರು.