ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ರಕ್ತದಾನ ಶಿಬಿರ

ದೊಡ್ಡಬಳ್ಳಾಪುರ:ತಾಲ್ಲೂಕು
ತೂಬಗೆರೆ ಹೋಬಳಿ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯದ ದಾಸೋಹದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಎಸ್ ಎಸ್ ಘಾಟಿ, (ಮೇಲಿನ ಜೂಗಾನಹಳ್ಳಿ ಗ್ರಾಮ ಪಂಚಾಯತಿ) ,ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯ ಹಾಗು ಕೆ. ಸಿ.ಜನರಲ್ ಆಸ್ಪತ್ರೆಯ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ|| ಶಾರದಾ ನಾಗನಾಥ ರವರು, ಮಾತನಾಡಿ ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಅರೋಗ್ಯ ಸ್ಥಿರವಾಗಿರುತ್ತದೆ ಹಾಗು ದೇಹದಲ್ಲಿ ರಕ್ತ ಇಲ್ಲದೆ ಹೀನತೆ ಯಲ್ಲಿರುವ ರೋಗಿಗೆ ರಕ್ತ ನೀಡುವುದರಿಂದ ಪ್ರಾಣ ಉಳಿಸಿದಂತಾಗುತ್ತೆ ಅದರಿಂದ 50 ವರ್ಷದಿಂದ ಕೆಳ ವಯಸ್ಸಿನ ನವರು ರಕ್ತ ದಾನ ಮಾಡಿ ಇನ್ನೂ ಬ್ಬರು ಜೀವ ಉಳಿಸಬಹುದು ಈ ರಕ್ತದಾನ ಶಿಬಿರದಲ್ಲಿ
30 ಯುನಿಟ್ ರಕ್ತ ಶೇಖರಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ದೇವಾಲಯದ ಅರ್ಚಕ ಸುಬ್ರಮಣ್ಯ ಸ್ವಾಮಿಗಳು,ಕೆ. ಸಿ.ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ|| ಸುಚಿತ್ರ ಹಾಗು ಸಿಬ್ಬಂದಿ ವರ್ಗ ಮುತ್ತಣ್ಣ ಸಾರ್ವಜನಿಕರು ಹಾಜರಿದ್ದರು.