ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ನಗರಪೊಲೀಸ್ ಠಾಣಾ ನೀರಿಕ್ಷಕರಾಗಿ ಎ.ಅಮರೇಶ್ ಗೌಡ ಅಧಿಕಾರ ಸ್ವೀಕಾರ : ಅಧಿಕಾರ ಹಸ್ತಾಂತರಿಸಿದ ಇನ್ಸ್ಪೆಕ್ಟರ್ ದಯಾನಂದ್

ದೊಡ್ಡಬಳ್ಳಾಪುರ : ಲೋಕಸಭಾ ಚುನಾವಣೆ ನಿಮಿತ್ತ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಎ. ಅಮರೇಶ್ ಗೌಡ ರವರು ದೊಡ್ಡಬಳ್ಳಾಪುರ ನಗರ ಠಾಣಾ ನಿರೀಕ್ಷಕರಾಗಿ ಇಂದು (ಜುಲೈ04) ಮತ್ತೆ ಅಧಿಕಾರ ಸ್ವೀಕರಿಸಿದರು.

ನಗರ ಠಾಣಾ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇನ್ಸ್ ಪೆಕ್ಟರ್ ದಯಾನಂದ ಅವರು ನೂತನ ಅಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು