ಚಿಕ್ಕ ಮುದ್ದೇನಹಳ್ಳಿ ಡೈರಿ ಅಧ್ಯಕ್ಷರಾಗಿ ಅದಿನಾರಾಯಣಸ್ವಾಮಿ ಉಪಾಧ್ಯಕ್ಷರಾಗಿ ರಂಗಪ್ಪ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ:ತಾಲ್ಲೂಕು,ತೂಬಗೆರೆ ಹೋಬಳಿ ಚಿಕ್ಕಮುದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅವಿರೋಧವಾಗಿ ಅಧ್ಯಕ್ಷರಾಗಿ ಅದಿನಾರಯಣಸ್ವಾಮಿ, ಉಪಾಧ್ಯಕ್ಷರಾಗಿ ರಂಗಪ್ಪ ಅಯ್ಕೆ

ಚಿಕ್ಕಮುದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕ್ಷರನ್ನು ಕೆಪಿಸಿಸಿಗೆ ಸದಸ್ಯ ಎಸ್. ಆರ್. ಮುನಿರಾಜ್ ಅಭಿನಂದಿಸಿ ಮಾತನಾಡಿ, ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ರೈತರ ಸಮ್ಮುಖದಲ್ಲಿ ಸಂಘವನ್ನು ಬೆಳೆಸಬೇಕಾಗಿದೆ, ಇನ್ನು ತಂತ್ರಜ್ಞಾನ ಮುಂದುವರೆದಂತೆ ತಾಂತ್ರಿಕತೆ ಅಳವಡಿಸಿಕೊಂಡು ವೈಜ್ಞಾನಿಕವಾಗಿ ರಾಸುಗಳನ್ನು ಪೋಷಿಸಿ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ರೈತರಿಗೂ ಲಾಭ ಸಂಘವು ಉಳಿಯುತ್ತದೆ ಹಾಗೂ ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಸುಗಮ ಜೀವನ ಸಾಗುತ್ತಿದ್ದಾರೆ, ಉತ್ತಮ ತಳಿಯ ರಾಸುಗಳ ತಂದು ಗುಣಮಟ್ಟದ ಹಾಲು ಪೋರೈಸಿದರೆ ಒಳ್ಳೆಯ ಲಾಭಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು,

ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಅದಿನಾರಯಣಸ್ವಾಮಿ ಮಾತನಾಡಿ, ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಉತ್ತಮವಾದ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ, ಇನ್ನು ರೈತರಿಗೆ ಬೇಕಾಗಿರುವ ಸೌಲಭ್ಯಗಳನ್ನು ಓದಿಸಿಕೊಂಡು ಸಂಘವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು,

ಕಾರ್ಯಕ್ರಮದಲ್ಲಿ ಚುನಾವಣೆ ಅಧಿಕಾರಿ ರಿಟರ್ನಿಂಗ್ ಅಧಿಕಾರಿ ಶಿವಕುಮಾರ್, ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂಜಮ್ಮ ನರಸಿಂಹಮೂರ್ತಿ, ಮಾಜಿ ಸದಸ್ಯ ಬಾಲಕೃಪ್ಣಪ್ಪ, ಅಶ್ವತಪ್ಪ, ವೆಂಕಟರಮಣಪ್ಪ, ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಾದ ಮುನಿಕೃಷ್ಣಪ್ಪ, ನಾಗರಾಜ್, ಸಿದ್ದಲಿಂಗಪ್ಪ, ಸಿ.ಬಿ.ನರಸಿಂಹಮೂರ್ತಿ,ನರಸಪ್ಪ,ರಾಮಪ್ಪ, ಕೃಷ್ಣಪ್ಪ, ನರಸಿಂಹಮೂರ್ತಿ,
ನಾಗರತ್ನಮ್ಮ,ಪ್ರೇಮ, ರಂಗಮ್ಮ, ಕಾರ್ಯದರ್ಶಿ ಲಕ್ಷ್ಮಿ ಪತಿ ಹಾಗೂ ಊರಿನ ಮುಖಂಡರು ಹಾಜರಿದ್ದರು.