ಭಕ್ತಿಭಾವ ಮೆರೆದ ನಂದಿ ಗಿರಿ ಪ್ರದಕ್ಷಿಣೆ

ದೊಡ್ಡಬಳ್ಳಾಪುರ:ನಂದಿ ಗಿರಿ ಪ್ರದಕ್ಷಿಣೆ ಸೇವಾ ಸಮಿತಿಯು ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಗಡಿ ಭಾಗದಲ್ಲಿರುವ ನಂದಿ ಗಿರಿಯನ್ನು ನೂರಾರು ಮಂದಿ ಕಾಲ್ನಡಿಗೆಯ ಮೂಲಕ ಆಷಾಡ ಮಾಸದ ಕೊನೆಯ ಸೋಮವಾರ ನಂದಿ ಗಿರಿಧಾಮ ಪ್ರದಕ್ಷಣೆ ಹಾಕಿ ಧನ್ಯತೆ ಮೆರೆದರು.

ಪುರಾತನ ಕಾಲದಿಂದಲು ಆಷಾಡ ಮಾಸದ ಕೊನೆಯ ಸೋಮವಾರ ದೈವ ಭಕ್ತಿಯ ಧಾರ್ಮಿಕತೆಯ ನಂಟಿನೊಂದಿಗೆ ನೆಡೆದ ಪಾದಯಾತ್ರೆಯಲ್ಲಿ ತಾಲ್ಲೂಕು ಗ್ರಾಮಾಂತರ ಭಾಗದಿಂದ ವಿವಿದ ಭಜನಾ ಮಂಡಳಿಗಳಿಂದ ಭಕ್ತಿಯ ಪೂರಕವಾದ ಹಾಡುಗಳು ದೈವದ ಸಂಕೇತವಾಗಿ ಹೆಜ್ಜೆ ಹಾಕಿದರು ನಂದಿ ಗಿರಿಧಾಮ ಸುತ್ತುವುದು ರಿಂದ ಶಿವ ಪಾರ್ವತಿಯರ ಕೈಲಾಸ ಪರ್ವತವನ್ನು ಸುತ್ತುವಂತೆ ಭಾಸವಾಗುತ್ತಿತ್ತು.

ನಂದಿ ಗಿರಿ ಮೇಲೆ ಇರುವ ಯೋಗೇಶ್ವರ ಮತ್ತು ನಂದಿ ಗ್ರಾಮದಲ್ಲಿ ಭೋಗೇಶ್ವರ ಸ್ವಾಮಿ ಪ್ರದಕ್ಷಿಣೆಗೆ ರಾಜ್ಯದ ಬೆಂಗಳೂರು ಮೈಸೂರು ಗೌರಿಬಿದನೂರು ಚಿಕ್ಕಬಳ್ಳಾಪುರ ನೆಲಮಂಗಲ ಹೊಸಕೋಟೆ ದೇವನಹಳ್ಳಿ ಹಾಗು ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ನಂದಿ ಗಿರಿಧಾಮ ಪ್ರದಕ್ಷಿಣೆ ಜಾತ್ರೆಯಂತೆ ಭಾಸವಾಗುತ್ತಿತ್ತು ಸಣ್ಣ ಸಣ್ಣ ಮಕ್ಕಳು ಮಹಿಳೆಯರು ವಯೋಸಹಜ ವೃದ್ದರು ವಯಸ್ಕರಂತೆ ನಂದಿ ಪ್ರದಕ್ಷಿಣೆ ಯಲ್ಲಿ ಭಾಗಿಯಾಗಿದ್ದರು

ಸೋಮವಾರ ಬೆಳಗ್ಗೆ 6.30 ಕ್ಕೆ ನಂದಿ ಗ್ರಾಮದಲ್ಲಿರುವ ಶ್ರೀ ಭೋಗ ನಂದೀಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ನಂದಿ ಗಿರಿ ಪ್ರದಕ್ಷಿಣೆ ಚಾಲನೆ ನೀಡಲಾಯಿತು.
ನಂದಿ ಗ್ರಾಮದಿಂದ ಆರಂಭವಾದ ಪ್ರದಕ್ಷಿಣೆ ತಂಡಗಳು ಕುಡುಮಗೆರೆ ಕ್ರಾಸ್ ಕಾರೇಹಳ್ಳಿ ಕಣಿವೆ ಪುರ ಬೆಟ್ಟದ ಕ್ರಾಸ್ ಹೆಗ್ಗಡೆ ಹಳ್ಳಿ ಗಾಂಧಿ ಪುರ ಕಣೆವೆ ಬಸವಣ್ಣ
ಸುಲ್ತಾನ ಪೇಟೆ ಮಾರ್ಗವಾಗಿ ನಂದಿ ಗಿರಿಯನ್ನು ಸುತ್ತು ಸುಮಾರು 16-18 ಕೀ ಲೋ ಮೀಟರ್ ಕಾಲ್ನೆಡಿಗೆಯ ಮೂಲಕ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ದೇವಾಲಯ ತಲುಪಿದವು.
ಭಕ್ತರು ಸಮೂಹ ಪ್ರದಕ್ಷಿಣೆ ಯಲ್ಲಿ ಕಣಿವೆಯ ಗೋಪಿನಾಥ ಗಿರಿ ಸ್ಕಂದ ಗಿರಿ ಬ್ರಹ್ಮಗಿರಿ ದಿಬ್ಬಗಿರಿ ಚನ್ನಗಿರಿ ಇನ್ನೂ ಹತ್ತಾರು ದೇವಾಲಯಗಳ ದರ್ಶನವೂ ಲಭಿಸಿತ್ತು ನಂದಿ ಕಣಿವೆ ಬಸವಣ್ಣ ದರ್ಶನ ಪಡೆದು ಪುನೀತರಾದರು.

ದೊಡ್ಡಬಳ್ಳಾಪುರದ ನಂದಿ ಗಿರಿ ಪ್ರದಕ್ಷಣೆ ಸಮಿತಿ ಸದಸ್ಯರು ಗಿರಿ ಪ್ರದಕ್ಷಿಣೆಯನ್ನು ನಿರ್ವಹಿಸಿದ್ದರು.
ವಿವಿದ ಸಂಘ ಸಂಸ್ಥೆಗಳು ಗಿರಿ ಪ್ರದಕ್ಷಿಣೆಗೆ ಸಹಕಾರ ನೀಡಲಾಗಿದ್ದು ಪ್ರದಕ್ಷಿಣೆ ಆಗಮಿಸಿದ ಭಕ್ತರಿಗೆ ಬೆಳಗಿನ ಉಪಹಾರ ಮಾರ್ಗ ಮದ್ಯದಲ್ಲಿ ನೀರು ಮೆಚ್ಚಿಗೆ ಹಣ್ಣಿನ ರಸ ವ್ಯವಸ್ಥೆ ಮಾಡಲಾಗಿತ್ತು.
ಹಾಗು ಸಂಪೂರ್ಣ ಪ್ರದಕ್ಷಿಣೆಯ ನಂತರ ಗಿರಿ ಪ್ರದಕ್ಷಿಣೆ ಸಮಿತಿಯಿಂದ ಭೋಜನದ ಏರ್ಪಾಡು ಮಾಡಲಾಗಿತ್ತು . ಇವರುಗಳ ಜೊತೆಯಲ್ಲಿ ಹಲವಾರು ಸೇವಾ ಸಂಸ್ಥೆಗಳು. ಭಕ್ತಾದಿಗಳಿಗೆ ಕೈ ತಿಂಡಿ ಲಘು ಉಪಹಾರ ಹಾಲು ಟೀ ಕಾಫಿ ವಿತರಿಸಲಾಯಿತು.
ಇದರ ಜೊತೆಯಲ್ಲಿ ಪರಿಸರ ಸಂರಕ್ಷಣಾ ಸೇವಾ ಸಮಿತಿಯಿಂದ ಅರಳು ಮಲ್ಲಿಗೆ ಬಾಗಿಲು ಶಾಲಾ ಮಕ್ಕಳಿಂದ ತಯಾರು ಮಾಡಲಾದ ಪರಿಸರದಲ್ಲಿ ಬೀಜದ ಉಂಡೆ ಹಂಚಲಾಯಿತು.
ಗಿರಿ ಪ್ರದಕ್ಷಿಣೆ ಜೊತೆಯಲ್ಲಿ ಭಕ್ತರು ಪರಿಸರದಲ್ಲಿ ಬೀಜದ ಉಂಡೆ ಹಾಕುವ ಕಾರ್ಯದಲ್ಲಿ ಕೈ ಜೋಡಿಸಿದರು ಹಾಗು ನಂದಿ ಗಿರಿಧಾಮ ಸುತ್ತ ಮುತ್ತಲ ಪ್ರದೇಶದಲ್ಲಿ ಹೆಚ್ಚು ಗಿಡ ಮರ ಬೆಳೆಸುವ ಕಾಯಕಕ್ಕೆ ಚಾಲನೆ ನೀಡಲಾಯಿತು.
ನಂದಿ ಗಿರಿ ಪ್ರದಕ್ಷಿಣೆ ಯಲ್ಲಿ ಸಿ ನಟರಾಜ್ ನಾಗದಳ ನಟರಾಜ್ ಎಡಿಪಿ ಸಂಸ್ಥೆಯ ಎ ಎಲ್ ಜನಾರ್ದನ್ ಎ ವೆಂಕಟೇಶ್ ಎ ವಿ ರಘು ಶ್ರೀಕಾಂತ ಜನಾರ್ದನ್ ಅಭಿಜ್ಞಾ ಬೀಜದ ಉಂಡೆ ವಿತರಿಸಿದರು.