ಚಿರತೆ ದಾಳಿಗೆ ಕರು ಬಲಿ

ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ತಾಲ್ಲೋಕಿನ
ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಪಕ್ಕದಲ್ಲಿ ಇರುವ ಗೋಶಾಲೆಯ ಬಳಿ ಮೇಯಲು ಬಿಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಕರು ಸಾವನ್ನಪ್ಪಿದೆ.
ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ, ಗೋಶಾಲೆಯ ಬಳಿ ಹಾದು ಹೋಗಿರುವ ರೈಲ್ವೆ ಬ್ರಿಡ್ಜ್ ಬಳಿ ಕರು ಮೇಯುತ್ತಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ, ಕರುವಿನ ಕುತ್ತಿಗೆ ಬಾಯಾಕಿರುವ ಚಿರತೆ ಕರುವಿನ ಬೇಟೆಯಾಡಿದೆ, ಗೋಶಾಲೆಯ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.

ಗೋ ಶಾಲೆಯು ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿದ್ದು, ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ, ಈ ಹಿಂದೆಯೂ ಗೋಶಾಲೆಯ ಹಸುಗಳ ಮೇಲೆ ಚಿರತೆ ದಾಳಿ ಮಾಡಿದ್ದವು ಕಾಡಂಚಿನ ಪ್ರದೇಶವಾಗಿದ್ದು ಹಾಗಾಗ ಚಿರತೆಗಳು ಪ್ರತ್ಯಕ್ಷವಾಗಿ ಸಾಕು ಪ್ರಾಣಿಗಳ ಮೇಲೆ ದಾಳಿಮಾಡಿ ಪಾರಾರಿಯಾಗು ಸಂಗತಿಗಳು ಹೆಚ್ಚಾಗಿದ್ದು ಅರಣ್ಯ ಇಲಾಖೆ ಇದರ ಬಗ್ಗೆ ಕ್ರಮ ತೆಗೆದು ಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ