ಪಿ. ಎಸ್. ಏನ್. ಅಟೊಮೆಟಿವ್ ಮಾರ್ಕೆಟಿಂಗ್ ಕಂಪನಿ ವಂಚನೆ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ದೊಡ್ಡಬಳ್ಳಾಪುರ :ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಗೂಡ್ಸ್ ಗಾಡಿಯ ರಿಪೇರಿಗಾಗಿ PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ಬಿಡಲಾಗಿದ್ದು, ವಾಹನದ ರಿಪೇರಿ ಹಣವನ್ನ ಇನ್ಸೂರೆನ್ಸ್ ಕಂಪನಿ ಬಿಡುಗಡೆ ಮಾಡಿತ್ತು.ಹಣ ಪಾವತಿಯಾಗಿದ್ರು ವಾಹನ ಬಿಡುಗಡೆ ಮಾಡುವುದಕ್ಕೆ ಸತಾಯಿಸಲಾಗಿದೆ, ಗಾಡಿ ಮಾಲೀಕನ ಬಳಿ ಹೆಚ್ಚುವರಿ ಹಣದ ಬೇಡಿಕೆ ಇಟ್ಟ ಪಿ ಎಸ್ ಎನ್ ಕಂಪನಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಿದೆ, ಕಂಪನಿ ಮುಂದೆ ಜಮಾಯಿಸಿದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಂಪನಿಯ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡರು. ಘಟನೆಗೆ ಸಂಬಂಧಿಸಿದಂತೆ ಗೂಡ್ಸ್ ಗಾಡಿ ಮಾಲೀಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರ್ ಗೇಟ್ ಬಳಿ ಇರುವ PSN ಆಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯ ವಂಚನೆ ಮತ್ತು ಕಿರುಕುಳದ ವಿರುದ್ಧ ಕನ್ನಡಪರ ಸಂಘಟನೆಗಳು ಇಂದು ಪ್ರತಿಭಟನೆಯನ್ನ ನಡೆಸಿದರು. ಬೆಂಗಳೂರಿನ ಸಿದ್ಧಾರ್ಥ ನಗರದ ನಿವಾಸಿ ಅಶ್ವತ್ಥನಾರಾಯಣರವರು ಹರೀಶ್ ಕಾರ್ಗೋ ಮೂವರ್ಸ್ ಕಂಪನಿಯ ಮಾಲೀಕರು. ಇವರ ಮಾಲೀಕತ್ವದ ಕೆಎ02ಎಹೆಚ್ 8714 ನೋಂದಣಿ ಸಂಖ್ಯೆ ಗೂಡ್ಸ್ ವಾಹನ ಮೂರ್ಚ್ 29 ರಂದು ಪೆನಗೊಂಡ ಬಳಿ ಅಪಘಾತಕ್ಕೆ ತುತ್ತಾಗಿದ್ದು, ಅದೇ ದಿನ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರದ ಕೆಸ್ತೂರ್ ಗೇಟ್ ಬಳಿಯ ಪಿ ಎಸ್ ಎನ್ ಅಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯಲ್ಲಿ ಬಿಡಲಾಗಿತು.
ವಾಹನದ ರಿಪೇರಿಯ ಸುಮಾರು 5 ಲಕ್ಷ ಹಣವನ್ನ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಆನ್ ಲೈನ್ ಮೂಲಕವೇ ಪಿ ಎಸ್ ಎನ್ ಕಂಪನಿಗೆ ಪಾವತಿ ಮಾಡಿದೆ, ಕಂಪನಿಗೆ ಹಣ ಪಾವತಿಯಾದ್ರು ಮಾಲೀಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡಲಾಗಿದ್ದು, PSN ಕಂಪನಿ ಮ್ಯಾನೇಜರ್ ಯುವರಾಜ್ ಹಾಗೂ ಜನರಲ್ ಮ್ಯಾನೇಜರ್ ಸುದರ್ಶನ್ 34 ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ರು, ಹಣ ಕೊಡದಿದ್ದರೆ ವಾಹನ ಕೊಡುವುದಿಲ್ಲವೆಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಅಶ್ವತ್ಥನಾರಾಯಣ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಿ ಎಸ್ ಎನ್ ಕಂಪನಿ ಸಿಬ್ಬಂದಿಗಳ ದೌರ್ಜನ್ಯ ಹಾಗೂ ಕಿರುಕುಳ ವಿರೋಧಿಸಿ ಕನ್ನಡಪರ ಸಂಘಟನಗಳು ಕಂಪನಿ ಮುಂದೆ ಪ್ರತಿಭಟನೆಯನ್ನ ನಡೆಸಿದವು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ರಘುವರ್ಮಾ, ಕಳೆದ ಎರಡು ತಿಂಗಳಿಂದ ಅಶ್ವತ್ಥನಾರಾಯಣರವರ ಗಾಡಿಯನ್ನ ಕೊಡದೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದಾರೆ, ಇನ್ಸೂರೆನ್ಸ್ ಕಂಪನಿಯಿಂದ ಹಣ ಪಾವತಿಯಾಗಿದ್ರು ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ಗೂಡ್ಸ್ ಮಾಲೀಕರಿಗೆ ಎರಡು ತಿಂಗಳ ಆದಾಯಕ್ಕೆ ಕನ್ನ ಹಾಕಿದ್ದಾರೆ, ಎರಡು ತಿಂಗಳಿಂದ ಸುಮಾರು ಶೇಕಡ 90 ಹಣ ನಷ್ಟವನ್ನ ಅನುಭವಿಸಿದ್ದಾರೆ ಅಶ್ವತ್ಥನಾರಾಯಣರವರು, ಅವರಿಗಾದ ನಷ್ಟವನ್ನ ತುಂಬಿಕೊಡಬೇಕು ಮತ್ತು ಪಿ ಎಸ್ ಎನ್ ಕಂಪನಿ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುದರ್ಶನ್ ಗೂಡ್ಸ್ ಮಾಲೀಕರ ಬಳಿ ಕ್ಷಮೆ ಕೇಳಿ ಬೇಕೆಂದು ಒತ್ತಾಯಿಸಿದರು