ನಂದಿಬೆಟ್ಟದ ತಪ್ಪಲು ಬಡವರ ಜಮೀನು ಕಬಳಿಸಲು ಹೊಂಚಾಕಿರುವ ಭೂಗಳ್ಳರು, ಭೂಗಳ್ಳರ ಸಂಚು ಕಣ್ಣೀರಿಡುತ್ತಿರುವ ಬಡ ಕುಟುಂಬ

ದೊಡ್ಡಬಳ್ಳಾಪುರ : ನಂದಿಬೆಟ್ಟ ಪ್ರವಾಸಿಗರ ಸ್ವರ್ಗ, ಬೆಂಗಳೂರಿಗರ ವಾರಾಂತ್ಯದ ಫೇವರೇಟ್ ಸ್ಪಾಟ್, ಇದೇ ಕಾರಣಕ್ಕೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ, ಸದ್ಯ ನಂದಿಬೆಟ್ಟದ ತಪ್ಪಲು ಭೂಮಾಫಿಯಾ ತವರಾಗಿ ಬದಲಾಗಿದೆ, ಬಡವರ ಜಮೀನು ಕಬಳಿಸಲು ಭೂಗಳ್ಳರ ಗ್ಯಾಂಗ್ ಹೊಂಚಾಕಿ ಕಾಯುತ್ತಿದೆ, ಇವರಿಗೆ ಅಧಿಕಾರಿಗಳ ವರ್ಗ ಸಹ ಕೈಜೋಡಿಸಿದೆ, ಭೂಗಳ್ಳರ ಸಂಚಿಗೆ ಬಡ ಕುಟುಂಬವೊಂದು ಕಣ್ಣೀರಿಡುತ್ತಿದ್ದು, ಜಮೀನು ಕಳೆದು ಕೊಳ್ಳುವ ಆಂತಕದಲ್ಲಿದೆ.

ದೊಡ್ಡಬಳ್ಳಾಪುರ ತಾಲೂಕು ಕಣಿವೆಪುರದ ನಿವಾಸಿಗಳಾದ ಗಾಯಿತ್ರಮ್ಮನವರ ಕುಟುಂಬದ ನೆಮ್ಮದಿಯನ್ನ ಹಾಳು ಮಾಡಿದೆ ಈ ಭೂಮಾಫಿಯಾ, ಗಾಯಿತ್ರಮ್ಮನವರ ಮಾವನವರಾದ ಕೃಷ್ಣಪ್ಪನವರು ಕಳೆದ 50 ವರ್ಷಗಳಿಂದ ಸರ್ವೆ ನಂಬರ್ 102ರಲ್ಲಿ ಸಾಗುವಳಿ ಮಾಡುತ್ತಿದ್ದರು, 1994ರಲ್ಲಿ ಆರ್ ಎಲ್ ಜಾಲಪ್ಪನವರು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ, ಕೃಷ್ಣಪ್ಪನವರಿಗೆ 2.10 ಎಕರೆ ಜಾಗವನ್ನ ಮಂಜೂರು ಮಾಡಿದೆ, ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿದ ಕೃಷ್ಣಪ್ಪನವರು ಹಕ್ಕಪತ್ರವನ್ನ ಪಡೆದಿದ್ದಾರೆ, ಆದರೆ ಈ ಜಾಗ ತಮಗೆ ಸೇರಿದ್ದೆಂದ್ದು ಚಿಕ್ಕಬಳ್ಳಾಪುರದ ಮೂಲದ ವ್ಯಕ್ತಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಗಾಯಿತ್ರಮ್ಮ ಕಣ್ಣೀರು ಹಾಕುತ್ತಿದ್ದಾರೆ.

ಗಾಯಿತ್ರಮ್ಮನವರು ಅನುಭೋಗದಲ್ಲಿರುವ 2 ಎಕರೆ 10 ಗುಂಟೆ ಜಾಗ ಸರ್ಕಾರಿ ಪಡಾ ಎಂದೇಳಿ, ಈಗ ಜಾಗ ತಮಗೆ ಸೇರಿದೆಂದ್ದು ಹೇಳಿ ಕಿರುಕುಳ ನೀಡುತ್ತಿದ್ದಾರೆ, ನಕಲಿ ದಾಖಲೆ ಸೃಷ್ಟಿಸಿ ಎಸಿ ಮತ್ತು ಡಿಸಿ ಕೋರ್ಟ್ ನಲ್ಲಿ ಅವರ ಪರವಾಗಿ ಆದೇಶ ಮಾಡಿಸಿಕೊಂಡಿದ್ದಾರೆ, ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನ ತರಲಾಗಿದೆ, ಕೋರ್ಟ್ ತಡೆಯಾಜ್ಞೆ ಇದ್ರು, ಜಮೀನು ಬಳಿ ಬಂದು ಅಳೆಯುವ ಕೆಲಸ ಮಾಡಿ ದೌರ್ಜನ್ಯ ನಡೆಸುತ್ತಿದ್ದಾರೆ, ಅವರ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರು ನಮ್ಮ ಜಮೀನು ಕಬಳಿಸಲು ಸಂಚು ನಡೆಸುತ್ತಿದ್ದಾರೆಂದು ಗಾಯಿತ್ರಮ್ಮ ಕುಟುಂಬ ಆರೋಪ ಮಾಡಿದೆ.