ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸ್ವತಂತ್ರ ದಿನಾಚರಣೆ

ದೊಡ್ಡಬಳ್ಳಾಪುರ ನಗರ,ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವನ್ನು ಆಚರಿಸಲಾಗಿದೆ.
ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರ ಡಾ.ಸುದರ್ಶನ್ ಕುಮಾರ್ ಎಂ .ರವರು ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನಿಗೆ ಹೊಸ ಯುಗದ ಆರಂಭವನ್ನು ನೆನಪಿಸುತ್ತದೆ ಮತ್ತು ಗುಲಾಮಗಿರಿಯಿಂದ ಮುಕ್ತವಾದ ಹೊಸ ಜೀವನದ ಪ್ರಾರಂಭವೆಂದು, ಈ ಕಾರಣಕ್ಕೆ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಎಲ್ಲಾ ಜನರು ಹಬ್ಬದ ರೀತಿ ಆಚರಣೆ ಮಾಡುವುದು ಎಂದು ತಿಳಿಸಿ,ನಮ್ಮ ದೇಶ ಆಗಸ್ಟ್ 15 1947 ರಂದು ಸ್ವಾತಂತ್ರ ಪಡೆಯುವಲ್ಲಿ ಗಾಂಧೀಜಿ ರವರ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ವ್ಯಕ್ತಿ ಸ್ವತಂತ್ರ, ಸಮಾನತೆಯ ಪ್ರತಿಕಾವಾಗಿ ನಾವುಗಳು ಸಂತೋಷ ದಿಂದ ಬದುಕುತಿರುವ ಇಂದು ಸ್ವಾತಂತ್ರ್ಯ ಹೋರಾಟ ಕ್ಕೆ ಅನೇಕ ಭಾರತೀಯರು ತ್ಯಾಗ ಬಲಿದಾನದಿಂದ ದೊರಕಿದೆ. ಬ್ರಿಟಿಷರ ಆಳ್ವಿಕೆಯ ಅಂತ್ಯವಾಗಿ ಎಂದು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಅರಿವು ಮೂಡಿಸಿದ್ದಾರೆ

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಭಾರತಿ ಶಾಮರಾಜ್, ದಿವ್ಯಶ್ರೀ,ಕೃಷ್ಣ ನಾಯಕ್, ಮಂಜುಳಮ್ಮ, ಸುಷ್ಮಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ವರುಣ್ ರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಶ್ರೀಮತಿ ದ್ರಾಕ್ಷಾಯಿಣಿ ಮತ್ತು ಎಲ್ಲಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು