ಯಳಂದೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ಯಳಂದೂರು: ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು ಅಧ್ಯಕ್ಷರಾಗಿ ಲಕ್ಷ್ಮಿ ಮಲ್ಲು .ಉಪಾಧ್ಯಕ್ಷರಾಗಿ ಶಾಂತಮ್ಮ ಲಿಂಗರಾಜು ರವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಗಳಾದ ಜಯಪ್ರಕಾಶ್ ರವರು ಘೋಷಣೆ ಮಾಡಿದರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ಮೂರ್ತಿ ರವರು ಸನ್ಮಾನಿಸಿದರು

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಮಹೇಶ್, ರಂಗನಾಥ್, ರವಿ, ಮಾದೇವ ನಾಯಕ, ಮಂಜು, ಪ್ರಭಾವತಿ ರಾಜಶೇಖ‌ರ್, ಸವಿತಾ ಬಸವರಾಜು, ನಾಮನಿರ್ದೇಶಕ ಸದಸ್ಯರಾದ ಮುನಾವರ್ ಬೇಗ್, ನಿಂಗರಾಜು, ಶ್ರೀಕಂಠ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಎಚ್ ವಿ ಚಂದ್ರು, ಮುಖಂಡರಾದ ಮಲ್ಲು, ಗುಂಬಳ್ಳಿ ರಾಜಣ್ಣ, ರಾಜಶೇಖರ್ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ಯೋಗೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಡಗೆರೆ ದಾಸ್, ಕೇತಮ್ಮ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ