ಘಾಟಿ ಸುಬ್ರಮಣ್ಯ ವಿ. ಎಸ್. ಎಸ್. ಎನ್ ನೂತನ ಕಟ್ಟಡಕ್ಕೆ ಕೆ. ಹೆಚ್. ಮುನಿಯಪ್ಪ ಶಂಕುಸ್ಥಾಪನೆ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಎಸ್.ಎಸ್ ಘಾಟಿ ಸುಬ್ರಹ್ಮಣ್ಯದ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಶಂಕುಸ್ಥಾಪನೆ ನೆರವೇರಿಸಿದರು,

ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್.ರಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಅಪ್ಪಯಣ್ಣ,
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಜಿ. ಜಗನ್ನಾಥ್ ಚಾರಿ, ಉಪಾಧ್ಯಕ್ಷ ಸುಶಿಲಮ್ಮ, ನಿರ್ದೇಶಕ ಮಂಜುನಾಥ, ಚಿಕ್ಕಣ್ಣ, ಕೃಷ್ಣ ನಾಯಕ್, ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಆರ್.ಮುನಿರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಸಿದ್ದಪ್ಪ ಸಂಘದ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಹಾಜರಿದ್ದರು