ಕ್ರೀಡೆಗಳು ದೇಹದ ಆಯಾಸ, ಒತ್ತಡ ಕಡಿಮೆ ಮಾಡುತ್ತವೆ : ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ
ಚಾಮರಾಜನಗರ: ಕ್ರೀಡೆಗಳು ದೇಹದ ಆಯಾಸ, ಒತ್ತಡವನ್ನು ಕಡಿಮೆ ಮಾಡುವುದರಿಂದ ಪ್ರತಿಯೊಬ್ಬ ಶಿಕ್ಷಕರಿಗೂ ಕ್ರೀಡೆ ಅಗತ್ಯವಿದೆ ಎಂದು ಚಾಮರಾಜನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ತಿಳಿಸಿದರು.
ನಗರದ ಡಾ.ಬಿಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧೆಗಳಿಗೆ ಭಾಗವಹಿಸುವುದು ಅವರ ಆಸಕ್ತಿ, ಅಭಿರುಚಿಯಾಗಿರುತ್ತದೆ. ಕ್ರೀಡೆಗಳಿಂದ ದೈನಂದಿಕ ಜೀವನೋಪಾಯದ ವೃತ್ತಿಗಳಿಗೆ ಅನುಕೂಲವಾಗುತ್ತದೆ ಇದನ್ನು ಒಂದು ವೃತ್ತಿ ಎಂದು ಪರಿಗಣಿಸಬಹುದು.ಶಿಕ್ಷಕರು ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಈ ರೀತಿ ಕ್ರೀಡೆಗಳಲ್ಲಿ ಸ್ಪರ್ಧಿಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ ಅಲ್ಲದೆ ದೇಹ ಸದೃಢವಾಗುತ್ತದೆ. ಆದ್ದರಿಂದ ಎಲ್ಲಾ ಶಿಕ್ಷಕರು ಭಾಗವಹಿಸಿ ಉತ್ತಮ ಪ್ರಶಸ್ತಿ ಪಡೆಯಿರಿ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಎಸ್. ಮಾದಪ್ಪ ಮಾತನಾಡಿ, ಶಿಕ್ಷಕರಿಗೆ ಇಂತಹ ಕ್ರೀಡೆಗಳಿಂದ ಒತ್ತಡದ ಕೆಲಸ ನಿರ್ವಹಣೆ ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ ಅಲ್ಲದೆ ಯಾವುದೇ ಅವಘಡ ಉಂಟಾಗದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಇದೆ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ ಎಸ್ ಮಹದೇವಸ್ವಾಮಿ ಕ್ರೀಡಾ ಜ್ಯೋತಿ ಬೆಳಗಿಸಿದರು ಅಲ್ಲದೆ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಸ್ವಾಮಿ, ಗ್ರೇಡ್-2 ರಾಜ್ಯ ಉಪಾಧ್ಯಕ್ಷ ಜೋಸೆಫ್.ಎನ್, ತಾಲೂಕು ಕಾರ್ಯದರ್ಶಿ ಸುಧಾ, ಗೌರವ ಅಧ್ಯಕ್ಷ ಎಂ.ಡಿ.ಮಾದೇವಯ್ಯ, ಉಪಾಧ್ಯಕ್ಷ ಭರತ್ ಭೂಷಣ್, ಪ್ರೌಢಶಾಲಾ ಜಿಲ್ಲಾ ಕಾರ್ಯದರ್ಶಿ ಕಿರಣ್ ರಾಜ್, ತಾಲೂಕು ಕಾರ್ಯದರ್ಶಿ ನೇಮಿರಾಜ್, ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಮಹದೇವಮೂರ್ತಿ, ಕಾರ್ಯದರ್ಶಿ ಶಿವಮೂರ್ತಿ, ಖಜಾಂಚಿ ಕೃಷ್ಣಮೂರ್ತಿ, ಶಿಕ್ಷಕ ಸಂಘದ ಎಸ್.ಜಿ.ರಾಜು, ಮಲ್ಲಿಕಾರ್ಜುನ್.ಸಿ, ಮುರುಗೇಶ್ ಕುಮಾರ್. ಮಹದೇವಸ್ವಾಮಿ, ಸಾವಿತ್ರಿಬಾಫುಲೆ ಸಂಘದ ಭವಾನಿ ದೇವಿ, ನೇತ್ರಾವತಿ, ದೈಹಿಕ ಶಿಕ್ಷಕ ಹೆಚ್.ಎಸ್ ರಂಗಸ್ವಾಮಿ, ಶಿಕ್ಷಕರಾದ ಶಾಂತಮೂರ್ತಿ, ರಂಗನಾಥ್ ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ