ದೊಡ್ಡಬಳ್ಳಾಪುರ ಗುಂಜೂರು ಗ್ರಾಮದಲ್ಲಿ ಸರಗಳ್ಳತನ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಗುಂಜೂರು ಗ್ರಾಮದ ಮಹಿಳೆಯ 80 ಗ್ರಾಂ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ಗುಂಜೂರು ಗ್ರಾಮದ ಮಹಿಳೆ ಶೈಲಜಾ ಎಂಬುವರು ವಾಯು ವಿಹಾರಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಕಳ್ಳರು ಕೊರಳಲ್ಲಿ ಇದ್ದ 80 ಗ್ರಾಂ ತೂಕ ಇದ್ದು ಮಾಂಗಲ್ಯ ಸರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅರೋಪಿಗಳು ಸಿಪ್ಟ್ ಕಾರಲ್ಲಿ ಬಂದಿರುವುದಾಗಿ ಹಾಗು ಕಪ್ಪು ಬಣ್ಣದ ಜರ್ಕಿನ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.