ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ನಡೆದ 6 ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯಕೂಟ 2024 ರಲ್ಲಿ ಚಾಮರಾಜನಗರ ಜಿಲ್ಲೆಗೆ 2 ಚಿನ್ನ 3 ಬೆಳ್ಳಿ 2 ಕಂಚಿನ ಪದಕ ಹಾಗೂ ಪ್ರಶಸ್ತಿ ಲಭಿಸಿದೆ.
ಯಳಂದೂರು ಸಮೀಪದ ಸಂತೆಮರಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಟಿ.ಎಂ. ತಾಜುದ್ದೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, 5 ಜಿಲ್ಲೆಗಳಿಂದ ಆಗಮಿಸಿದ ಪೊಲೀಸ್ ತಂಡಗಳಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಗಳು ಸ್ಪರ್ಧಿಸಿದರು . ಅದರಲ್ಲಿ ಇನ್ವೆಸ್ಟಿಗೇಷನ್ ತನಿಖಾ ವಿಭಾಗದಲ್ಲಿ ಸಂತೆಮರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾಜುದ್ದೀನ್ ರವರು 1ಚಿನ್ನ 1 ಬೆಳ್ಳಿ ಹಾಗೂ 1 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ, DAR ಚಾಮರಾಜನಗರದ ವಿಶಾಲ್ ರವರು ಬಾಂಬ್ಸ್ಕೋಡ್ ವಿಭಾಗದಲ್ಲಿ 1ಚಿನ್ನ, 1 ಕಂಚು, ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಸಂಜು ರವರು ಕಂಪ್ಯೂಟರ್ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಗುಂಡ್ಲುಪೇಟೆ ಠಾಣೆಯ ಶಂಭು ರವರು ಫೋಟೋಗ್ರಾಫಿ ವಿಭಾಗದಲ್ಲಿ ಒಂದು ಬೆಳ್ಳಿಯನ್ನು ಪಡೆದುಕೊಂಡಿದ್ದಾರೆ.
ಇವರಿಗೆ ದಕ್ಷಿಣ ವಲಯದ ಡಿಐಜಿಪಿ ರವರಾದ ಡಾ. ಎಂ.ಬಿ. ಬೋರಲಿಂಗಯ್ಯ ಐಪಿಎಸ್ ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ, ಪೊಲೀಸ್ ಕರ್ತವ್ಯ ಕೂಟಾದಲ್ಲಿ ಭಾಗವಹಿಸಿ ಚಾಮರಾಜನಗರ ಜಿಲ್ಲೆಗೆ ಕೀರ್ತಿ ತಂದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಡಾ.ಕವಿತಾ ಬಿ.ಟಿ, ಐಪಿಎಸ್ ರವರು ಪ್ರಶಸ್ತಿಗಳ ಗಳಿಕೆಗೆ ಪಾತ್ರರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ತಂಡಕ್ಕೆ ಅಭಿನಂದಿಸಿದರು,ಪೊಲೀಸರ ಕರ್ತವ್ಯಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿರುವ ಪೊಲೀಸರಿಗೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದರು..
ವರದಿ.ಆರ್ ಉಮೇಶ್ ಮಲಾರಪಾಳ್ಯ