ಕೇಬಲ್ ಟಿ.ವಿ ಯಲ್ಲಿ ಬ್ಲೂ ಪಿಲಂ ಕೇಬಲ್ ಟಿ.ವಿ ಮಾಲಿಕರ ವಿರುದ್ದ ಪ್ರಕರಣ ದಾಖಲು

ಆಂಧ್ರಪ್ರದೇಶ : ಕೇಬಲ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದಲ್ಲಿ ಇದಕ್ಕಿದಂತೆ ಬ್ಲೂ ಫಿಲ್ಮ್ ಪ್ರಸಾರವಾಗಿದೆ, 10 ನಿಮಿಷಗಳ ಪ್ರಸಾರವಾದ ಬ್ಲೂ ಫಿಲ್ಮ್ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ನಂದಿಕೋಟ್ಕೂರಿನ ಫಿರೋಜ್ ಸಿಟಿ ಕೇಬಲ್ ನಲ್ಲಿ ಪ್ರಸಾರವಾದ ಬ್ಲೂ ಫಿಲ್ಮ್ ಸುದ್ದಿಗೆ ಗ್ರಾಸವಾಗಿದೆ. ಅಂದಹಾಗೇ, ಫಿರೋಜ್ ಸಿಟಿ ಕೇಬಲ್ ಸಿಬ್ಬಂದಿ ಖಾಸಗಿ ವಿಡಿಯೋಗಳನ್ನು ನೋಡಲು ತಪ್ಪಾಗಿ ಚಾನಲ್ ನಲ್ಲಿ ಫ್ಲೇ ಮಾಡಿದ್ದಾರೆ, ಈ ವೇಳೆ ಅವರು ತಮ್ಮ ಬಳಿ ಇದ್ದ ಬ್ಲೂ ಫಿಲ್ಮ್ ಗಳನ್ನು ನೋಡಿದ್ದಾರೆ, ಈ ದೃಶ್ಯಗಳು ಕೇಬಲ್ ನಲ್ಲಿ ಪ್ರಸಾರವಾಗಿದ್ದು, ಇದಕ್ಕಿದಂತೆ ಪ್ರಸಾರವಾದ ಈ ಅಶ್ಲೀಲ ದೃಶ್ಯಗಳನ್ನ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.

ಸುಮಾರು 10 ನಿಮಿಷಗಳ ಕಾಲ ಅಶ್ಲೀಲ ದೃಶ್ಯಗಳು ಪ್ರಸಾರವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಬಲ್ ಟಿವಿಯ ಮೂವರು ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.