ಅರಣ್ಯ ಇಲಾಖೆಯ ಬೋನಿಗೆ ಸೆರೆ ಸಿಕ್ಕ ಚಿರತೆ
ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿ ಬೇಟೆಯಾಡುತ್ತಿದ್ದ ಚಿರತೆ ಇಂದು ಬೋನಲ್ಲಿ ಅಂದರ್.
ಯಳಂದೂರು : ಗ್ರಾಮಸ್ಥರಲ್ಲಿ ಭಯಹುಟ್ಟಿಸಿ ನಾಯಿಗಳನ್ನು ಬೇಟೆಯಾಡುತ್ತ ಜನರ ನಿದ್ದೆಗೆಡಿಸಿದ್ದ ಕತರ್ನಾಕ್ ಚಿರತೆ ಇಂದು ಬೋನಿಗೆ ಸರೆಯಾಗಿದೆ.
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಜಮೀನುಗಳಲ್ಲಿ ಅಡಗಿಕೊಂಡು ಕತ್ತಲಾಗುತ್ತಿದ್ದಂತೆ ನಾಯಿಗಳನ್ನು ಬೇಟಿಯಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಮೂರುವರ್ಷ ವಯಸ್ಸಿನ ಗಂಡು ಚಿರತೆಯಾಗಿದ್ದು ಆರೋಗ್ಯವಾಗಿದೆ ಎಂದು ಆರ್ ಎಫ್ ಒ ನಾಗೇಂದ್ರ ನಾಯ್ಕ್ ತಿಳಿಸಿದ್ದಾರೆ.
ಚಿರತೆ ಸರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಮತ್ತು ಆರ್ ಎಫ್ ಒ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದು ಮದ್ದೂರು ಗ್ರಾಮಸ್ಥರು ಸಹ ಚಿರತೆ ಹಿಡಿಯಲು ಸಹಕರಿಸಿದ್ದಾರೆ
ವರದಿ ಆರ್ ಉಮೇಶ್ ಮಲಾರಪಾಳ್ಯ