ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರ ಖಂಡಿಸಿ ದಸಂಸ ದಿಂದ ಅರೆ ಬೆತ್ತಲೆ ಪ್ರತಿಭಟನೆ
ಚಾಮರಾಜನಗರ:ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಕರ್ನಾಟಕ ಬಹುಸಂಖ್ಯಾ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದುರ್ಬಲಗೊಳಿಸಲು ಮುಡಾ ಪ್ರಕರಣದಲ್ಲಿ ಚುನಾಯಿತ ಸರ್ಕಾರ ಪತನಗೊಳಿಸಲು ಬಿಜೆಪಿ-ಜೆಡಿಎಸ್ ನೆಡಿಸಿರುವ ಷಡ್ಯಂತ್ರ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣ ಜಿಲ್ಲಾ ಘಟಕ ವತಿಯಿಂದ ಅರೆ ಬೆತ್ತಲೆ ಪ್ರತಿಭಟನೆಯನ್ನು ಜಿಲ್ಲಾಧ್ಯಕ್ಷ ಸಿ.ಎಂ.ಶಿವಣ್ಣ ನೇತೃತ್ವದಲ್ಲಿ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಬಿಜೆಪಿ ಸರ್ಕಾರ ಸಂವಿಧಾನಿಕ ಸಂಸ್ಥೆಗಳಾದ ಇಡಿ,ಐಟಿ,ಸಿಬಿಐ ರಾಜಭವನಗಳ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಕೆಳಗಿಳಿಸಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಧೃತಿಗೆಡದೆ ಸರ್ಕಾರವನ್ನು 5 ವರ್ಷಗಳ ಆಡಳಿತ ನಡೆಸಬೇಕು.ನಿಮ್ಮ ಸರ್ಕಾರದಿಂದ ಕೊಟ್ಟಿರುವ ಗ್ಯಾರೆಂಟಿ ಯೋಜನೆಗಳು ತುಂಬಾ ಅನುಕೂಲವಾಗಿವೆ ಆದ್ದರಿಂದ ರಾಜೀನಾಮೆ ಕೊಡಬೇಡಿ ನಿಮ್ಮ ಪರವಾಗಿ ನಾವಿದ್ದೇವೆ ಎಂದು ತಿಳಿಸಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತಿಮಗೊಳಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಕಾರ್ಯದರ್ಶಿ ಆಟೋ ಉಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ರಂಗಸ್ವಾಮಿ, ಜಿಲ್ಲಾ ಖಜಾಂಚಿ ರವಿಕುಮಾರ್, ನಗರ ಘಟಕದ ಸಂಚಾಲಕ ಸಿ.ಎನ್.ಮಂಜೇಶ್,ತಾಲೂಕು ಸಂಚಾಲಕ ಶಿವಸ್ವಾಮಿ ಕೊತ್ತಲವಾಡಿ, ಸದಸ್ಯರಾದ ನಾರಾಯಣಸ್ವಾಮಿ, ಮಹದೇವಸ್ವಾಮಿ, ಮಹದೇವಮ್ಮ, ಮಹದೇವಮ್ಮ, ಯಜಮಾನರಾದ ಮಹದೇವಯ್ಯ, ವೆಂಕಟರಮಣ, ಮಲ್ಲಿಕಾರ್ಜುನ್, ರಂಗಸ್ವಾಮಿ ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ