ನೆಲಗುದಿಗೆ ಗ್ರಾಮದಲ್ಲಿ ಕನಕ ಜಯಂತಿ ಆಚರಣೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ನೆಲ್ಲುಗುದಿಗೆ ಗ್ರಾಮದಲ್ಲಿಶ್ರೀ ಕನಕ ಯುವ ಶಕ್ತಿ ವತಿಯಿಂದ ದಾಸ ಶ್ರೇಷ್ಠ ಕನಕದಾಸರ 537ನೇ ಜಯಂತೋತ್ಸವ ಅಚಲಣೆ ಮಾಡಲಾಯಿತು
ಕನಕದಾಸರ ಭಾವ ಚಿತ್ರವನ್ನ ಹೂವಿನಿಂದ ಅಲಂಕಾರ ಮಾಡಿ ಕನಕದಾಸರು ನುಡಿ ಸ್ಮರಣೆ ಮಾಡುವುದರ ಮುಖಾಂತರ ದಾಸರಿಗೆ ಗೌರವ ನಮನ ಸಲ್ಲಿಸಲಾಯಿತು.
ನಂತರ ಮಾತನಾಡಿದ ನಿವೃತ್ತಿ ಮುಖ್ಯ ಶಿಕ್ಷಕ ಪಿಳ್ಳಪ್ಪ ಮಾತನಾಡಿ 15-16 ಶತಮಾನದಲ್ಲಿಯೇ ಜಾತಿ ಜಾತಿಗಳ ನಡುವಿನ ವಿರಹವನ್ನು ಹರಿತ ದಾಸರು ತಮ್ಮ ಕೀರ್ತನೆಯ ಮೂಲಕ ಕುಲ ಯಾವುದು ನಿಮ್ಮ ಮತ ಯಾವುದೂ ಎಂದು ಸಂದೇಶವನ್ನು ಸಾರುವುದರ ಮೂಲಕ ಸಮಾಜಕ್ಕೆ ತಿಳಿದ ನಾಯಕರಲ್ಲಿ ಕನಕರು ಒಬ್ಬರು ಅರಸರ ಅಸ್ಥಾನದಲ್ಲಿ ದಂಡನಾಯಕನಾಗಿ ರಾಜ ವೈಭೋಗ ದಲ್ಲಿ ಜೀವನ ಸಾಗಿಸುವ ಸಂದರ್ಭದಲ್ಲಿ ಅವರಿಗೆ ಕನಕನಾಯಕ ನನ್ನ ದಾಸನಾಗಿ ಎಂದು ದೈವದ ಪ್ರೇರಣೆಯಿಂದ ವೈಭೋಗ ಜೀವನ ತ್ಯಜಿಸಿ ಸಮಾಜದಲ್ಲಿ ನೆಡೆಯುವ ಅನ್ಯಾಯಗಳನ್ನು ಕಣ್ಣಾರೆ ಕಂಡು ತಮ್ಮ ಸಾಹಿತ್ಯದ ಮೂಲಕ ಅಜ್ಞಾನ
ಅಂಧಕಾರವನ್ನು ಹೋಗಲಾಡಿಸಲು ರಾಜ್ಯದ ಉದ್ದಾಗಲಕ್ಕೊ ತಮ್ಮ ಕೀರ್ತನೆ ಮೂಲಕ ಸಮಾಜಕ್ಕೆ ಸಾಮಾಜಿಕ ನ್ಯಾಯದ ಹರಿಕಾರರಾಗಿ ಹೋರಾಟ ಮಾಡಿದವರು ಅವರ ನೆಡೆದ ಹಾದಿ ಇಂದಿಗೂ ಜೀವಂತವಾಗಿದೆ ಎಂದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬೀರಪ್ಪ
ಟಿ ಎಂ ಸಿದ್ದಪ್ಪ. ಎಂ ಸಿದ್ದಪ್ಪ ಕೊಡುಗೇಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಅನಂದ ಕುಮಾರ್ ನಿವೃತ್ತ ಪೋಲಿಸ್ ಇಲಾಖೆ ಮಂಜುನಾಥ.ಕಲ್ಲೇಗೌಡ
ಮುನಿಕೃಷ್ಣಪ್ಪ ಹಾಗು ಕನಕ ಯುವ ಶಕ್ತಿಯ ರವಿ ಲಕ್ಷ್ಮೀಕಾಂತ ವೇಣು ಗೋಪಾಲ ಮುದ್ದು ಕೃಷ್ಣ ಮಂಜುನಾಥ ಬೀರಪ್ಪ ಮನೋಜ್ ಕುಮಾರ್ ಶ್ರೀ ಆಂಜೀನೆಯ ಸ್ವಾಮಿ ದೇವಾಲಯದ ಅರ್ಚಕ ರಾಮಾನುಜ ಚಾರ್ಯ ಹಾಗು ಊರಿನ ಮುಖಂಡರು ಹಾಗು ಗ್ರಾಮಸ್ಥರು ಹಾಜರಿದ್ದರು