ಘಾಟಿ ದೇವಸ್ಥಾನ ದಲ್ಲಿ ವಾಹನಗಳ ಸುಂಕ ವಸೂಲಾತಿ ಹರಾಜು

ದೊಡ್ಡಬಳ್ಳಾಪುರ:ದಿನಾಂಕ 01/12/2024 ರಿಂದ 31/01/2025 ರವರೆಗೂ ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ವಾಹನಗಳ ಮೇಲಿನ ಸುಂಕವನ್ನು ವಸೂಲು ಮಾಡುವ ಬಗ್ಗೆ ಇಂದು ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅನ್ನದಾಸೋಹ ಭವನದಲ್ಲಿ ಬಹಿರಂಗ ಹರಾಜು ನಡೆಸಲಾಯಿತು . ಸದರಿ ಬಹಿರಂಗ ಹರಾಜಿನಲ್ಲಿ 07 ಮಂದಿ ಬಿಡ್ಡ್ ದಾರರು ಭಾಗವಹಿಸಿದ್ದು, ಎಸ್ ಎಸ್ ಘಾಟಿ ಗ್ರಾಮದ ಶ್ರೀ ವಸಂತ್ ಕುಮಾರ್ ರವರು 15 01000.00 ಗಳ ಮೊತ್ತವನ್ನು ಕೂಗಿ ಹರಾಜಿನಲ್ಲಿ ಸುಂಕ ವಸೂಲಿ ಮಾಡುವ ಹಕ್ಕನ್ನು ಪಡೆದುಕೊಂಡಿರುತ್ತಾರೆ. ಸದರಿ ಹರಾಜು ಪ್ರಕ್ರಿಯೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಂ.ನಾರಾಯಣಸ್ವಾಮಿ ರವರ ಸಮ್ಮುಖದಲ್ಲಿ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಜರಾಯಿ ತಹಶೀಲ್ದಾರ್ ಶ್ರೀಮತಿ ಜಿ.ಜೆ. ಹೇಮಾವತಿ ಹಾಗೂ ದೇವಾಲಯದ ಸಿಬ್ಬಂದಿಗಳು ಸಾರ್ವಜನಿಕರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.