ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ
ಯಳಂದೂರು: ಕರ್ನಾಟಕ ಪಬ್ಲಿಕ್ ಶಾಲೆಯ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ. ಆರ್. ಕೃಷ್ಣಮೂರ್ತಿ ರವರ ಅನುಪಸ್ಥಿತಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಜೆ.ಯೋಗೇಶ್ ರವರು ಉದ್ಘಾಟನೆ ನಡೆಸಿದರು.
ನಂತರ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಹಾಗೂ ರೆಕಾರ್ಡ್ ಡ್ಯಾನ್ಸ್ ಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ನಗು ಸಂಗೀತ ಮತ್ತು ನೃತ್ಯಗಳು ರೋಮಾಂಚನವನ್ನು ವಿದ್ಯಾರ್ಥಿಗಳ ಸಂತೋಷದ ಕಿರುಚಾಟದಿಂದ ವಾರ್ಷಿಕೋತ್ಸವ ಕಾರ್ಯಕ್ರಮವು ಹಬ್ಬದ ಸ್ವರ್ಗವಾಗಿ ಮಾರ್ಪಾಡಾಯಿತು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಆರ್. ನಂಜುಂಡಯ್ಯ ರವರು ಮಾತನಾಡಿ ನಮ್ಮ ಕರ್ನಾಟಕ ಪಬ್ಲಿಕ್ ಶಾಲೆ ಈ ದಿನ ಯಳಂದೂರು ಪಟ್ಟಣದಲ್ಲಿ ಒಂದು ಉತ್ತಮವಾದ ಕಾರ್ಯಕ್ರಮವನ್ನು ರೂಪಿಸಿದ್ದು, ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆ 2018- 19 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಯಿತು, ಕರ್ನಾಟಕ ಸರ್ಕಾರ ಬಡ ಜನತೆಗೆ, ಬಡ ಕುಟುಂಬಕ್ಕೆ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಜೊತೆಗೆ ಶಿಕ್ಷಣವನ್ನು ನೀಡಬೇಕು ಎಂಬುವ ನಿಟ್ಟಿನಲ್ಲಿ 276 ಪಬ್ಲಿಕ್ ಶಾಲೆಗಳನ್ನು ವಿವಿಧ ಜಿಲ್ಲಾ ತಾಲೂಕುಗಳಲ್ಲಿ ಸ್ಥಾಪನೆ ಮಾಡಲಾಯಿತು. ಇದರಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಗೆ ನಾಲ್ಕು ಶಾಲೆಗಳು ಸ್ಥಾಪಿತವಾಗಿದ್ದು ಅದರಲ್ಲಿ ನಮ್ಮ ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯು ಒಂದಾಗಿದೆ , ಆ ಸಂದರ್ಭದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎನ್.ಮಹೇಶ್ ರವರು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿದರು. ಅವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸುತ್ತಾ, ಕಳೆದ ಎರಡನೇ ಬಾರಿ ನಮ್ಮ ಶಾಲೆಯಲ್ಲಿಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿತ್ತು, ತಾಲೂಕಿನ ಎಲ್ಲರ ಆಶೀರ್ವಾದ ಪ್ರೀತಿಯಿಂದ ಮುಂದಿನ ವರ್ಷಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯು ಮೊದಲ ಸ್ಥಾನಕ್ಕೆ ಬರುವ ಭರವಸೆಯನ್ನು ನೀಡುತ್ತೇನೆ ಎಂದು ತಿಳಿಸಿದರು.
ಜೆ ಯೋಗೇಶ್ ರವರು ಮಾತನಾಡಿ ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆ, ಜಿಲ್ಲೆಯಲ್ಲಿ ವಿಶೇಷ ಹಾಗೂ ಮೆಚ್ಚುಗೆಯ ಶಾಲೆ ಇದಾಗಿದೆ ಈ ವಾರ್ಷಿಕ ಕಾರ್ಯಕ್ರಮ ವಿದ್ಯಾರ್ಥಿಗಳು ಹಾಗೂ ಪೋಷಕರ ಉತ್ಸಾಹ ಮತ್ತು ರಜಾದಿನದ ಉಲ್ಲಾಸದ ಆಚರಣೆಯಾಗಿದೆ. ಮಕ್ಕಳ ಶಿಕ್ಷಣದ ಪ್ರಗತಿಗೆ ಶಾಲೆ ಎಷ್ಟು ಮುಖ್ಯವೋ ಮನೆಯು ಅಷ್ಟೇ ಮುಖ್ಯವಾಗಿದೆ ಪೋಷಕರು ಮಕ್ಕಳ ಮೇಲಿನ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾಲನೆಯನ್ನು ಅನುಸರಿಸಬೇಕು, ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯು ಒದಗಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರಯ್ಯ, ನಾಮ ನಿರ್ದೇಶನ ಸದಸ್ಯ ನಿಂಗರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ,ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್, ಅಂಬಳೆ ಜೈ ಗುರು, ಕೊಮಾರನಪುರ ಚಂದ್ರಶೇಖರ್, ಪಬ್ಲಿಕ್ ಶಾಲೆಯ ಎಸ್‌ಟಿಎಂಸಿ ಅಧ್ಯಕ್ಷರು ಸದಸ್ಯರು ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ