ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ
ದೊಡ್ಡಬಳ್ಳಾಪುರ: ನಗರದ,ತೇರಿನ ಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಶ್ರೀ ಕ್ರೋಧಿನಾಮ ಸಂವತ್ಸರದ ಮಾಘ ಮಾಸದ ಬಹುಳ ಪ್ರತಿಪತ್ ಮಖಾ ನಕ್ಷತ್ರದ ಗುರುವಾರ ಮಧ್ಯಾಹ್ನ 2:10ಕ್ಕೆ ಸರಿಯಾಗಿ ಸಲ್ಲುವ ಶುಭ ಅಭಿಜನ್ ಮುಹೂರ್ತದಲ್ಲಿ ಶ್ರೀಯವರ ಬ್ರಹ್ಮ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.
ಜಾತ್ರೆಯ ವಿಶೇಷವಾಗಿ ಮುಂಜಾನೆಯಿದ ಹೋಮ ಹವನೆಗಳು ನೆಡೆದವು ವಿಶೇಷವಾಗಿ ದೇವಾಲಯದ ಸುತ್ತಾ ದೀಪಾಲಂಕಾರ ಹಾಗು ದೇವಾಲಯದ ಒಳಭಾಗದಲ್ಲಿ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು ರಥ ಹೊರಡು ಸಮಯಕ್ಕೆ ಭಕ್ತರಿಂದ ಜಯ ಘೋಷ ದಿಂದ ಭಕ್ತಿಯ ಪೂರಕವಾಗಿತ್ತು ಜಿಲ್ಲೆಯ ನಾನಾ ಬಾಗಗಳಿಂದ ಬಂದ ಭಕ್ತರು ರಥೋತ್ಸವಕ್ಕೆ ಹುಣ್ಣು ದವಣ ಅರ್ಪಿಸಿ ಧನ್ಯತೆ ಮೆರೆದರು ನಂತರ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀಯವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಕುಡಿಯುವ ನೀರಿನ ವ್ಯವಸ್ಥೆ ಹಾಗು ಅನ್ನದಾನದ ವ್ಯವಸ್ದೆಯು ಮಾಡಲಾಗಿತ್ತು.
ಈ ವೇಳೆ ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ,ನಗರಸಭಾ ಸದಸ್ಯರು ಭಕ್ತರು ಹಾಜರಿದ್ದರು